Sunday, 24 Jan, 9.59 pm Megamedia News

ಸುದ್ದಿ
ಅತ್ತಾವರದ ಲಾಡ್ಜ್ ನಲ್ಲಿ ವೇಶ್ಯಾವಾಟಿಕೆ, ಇಬ್ಬರು ಮಹಿಳೆಯರ ರಕ್ಷಣೆ

ಮಂಗಳೂರು : ಅತ್ತಾವರದಲ್ಲಿರುವ ಲಾಡ್ಜ್ ಒಂದರಲ್ಲಿ ವೇ ಶ್ಯಾವಾಟಿಕೆ ನಡೆಯುತ್ತಿದೆ ಎಂದು ಮಹಿಳೆಯೊಬ್ಬರು ನೀಡಿದ ದೂರಿನ ಮೇರೆಗೆ ದಾಳಿ ನಡೆಸಿ ಇಬ್ಬರು ಪುರುಷರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿಸಲಾಗಿದೆ.

ಮಂಗಳೂರು ಪೊಲೀಸ್ ತಂಡ ಶನಿವಾರ ಅತ್ತಾವರದಲ್ಲಿರುವ ಆಮಂತ್ರಣಾ ಲಾಡ್ಜ್ ಮೇಲೆ ದಾಳಿ ನಡೆಸಿದ್ದು, ಅಲ್ಲಿ 211 ಮತ್ತು 212 ಸಂಖ್ಯೆಯ ಕೊಠಡಿಗಳಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದನ್ನು ಪತ್ತೆ ಹಚ್ಚಿದ್ದಾರೆ.

ದಾಳಿ ವೇಳೆ ಇಬ್ಬರು ಗ್ರಾಹಕರನ್ನು ವಶಕ್ಕೆ ತೆಗೆದುಕೊಲಾಗಿದೆ. ಲಾಡ್ಜ್‌ನ ವ್ಯವಸ್ಥಾಪಕ ಚಂದ್ರಶೇಖರ್ ಮತ್ತು ರೂಮ್ ಬಾಯ್ ಹರೀಶ್ ಪೂಜಾರಿ ಅವರನ್ನು ಪೊಲೀಸರು ಬಂಧಿಸಿದ್ದಾರೆ.

ಚಂದ್ರಶೇಖರ್, ಹರೀಶ್ ಪೂಜಾರಿ ಮತ್ತು ಸಂದೀಪ್ ಎಂಬವರು ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯ ಆಧಾರದ ಮೇಲೆ ಜನವರಿ 22 ರಂದು ನಗರದ ಮಹಿಳಾ ಪೊಲೀಸ್ ಠಾಣೆಯಲ್ಲಿ ಐಟಿಪಿ ಕಾನೂನಿನಡಿಯಲ್ಲಿ ಸುಯೋ ಮೋಟು ಪ್ರಕರಣ ದಾಖಲಾಗಿತ್ತು.

ಹೆಡ್ ಕಾನ್‌ಸ್ಟೆಬಲ್‌ಗಳಾದ ಮಣಿ ಮತ್ತು ಜಾಕೋಬ್, ಕಾನ್‌ಸ್ಟೆಬಲ್‌ಗಳಾದ ಧನಲಕ್ಷ್ಮಿ ಮತ್ತು ಸಫ್ರೀನಾ ಈ ದಾಳಿಯ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Megamedia News Kannada
Top