Thursday, 17 Sep, 2.52 am Megamedia News

ಪ್ರಮುಖ ಸುದ್ದಿಗಳು
ಡ್ರಗ್ಸ್ ಪ್ರಕರಣ : ನಟಿ ಸಂಜನಾ ಗಲ್ರಾನಿಯನ್ನು ಪರಪ್ಪನ ಅಗ್ರಹಾರಕ್ಕೆ ಕಳುಹಿಸಿದ ಸಿಸಿಬಿ ಪೊಲೀಸರು

ಬೆಂಗಳೂರು : ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಸಂಜನಾ ಗಲ್ರಾನಿ ಇಂದು ಪರಪ್ಪನ ಅಗ್ರಹಾರ ಜೈಲಿನೊಳಗೆ ಸೇರಿದ್ದಾರೆ. ಅಲ್ಲಿ ಹೋಗುವ ವೇಳೆಯೂ ಗೇಟ್ ಚಿಕ್ಕದಾಯಿತು ಎಂದು ಹೇಳಿದ್ದಾರೆ.

ಸಂಜನಾ, ಜೈಲಿಗೆ ಎಂಟ್ರಿ ಕೊಡುವಾಗ ಇಷ್ಟು ಚಿಕ್ಕ ಗೇಟ್‍ನಲ್ಲಿ ನಾನು ಹೋಗಲ್ಲ ಎಂದು ಹಠಕ್ಕೆ ಬಿದ್ದಿದ್ದರು. ಈ ವೇಳೆ ಅಲ್ಲಿನ ಸಿಬ್ಬಂದಿ ಒಳಗೆ ಹೋಗಿ ಎಂದು ಹೇಳಿದ್ದಾರೆ. ನಂತರ ಒಂದು ನಿಮಿಷದ ಬಳಿಕ ಸಂಜನಾ ಒಳಗೆ ಹೋಗಿದ್ದಾರೆ.

ಸಂಜನಾ ಜೊತೆಗೆ ವೀರೇನ್ ಖನ್ನಾ ಮತ್ತು ರವಿಶಂಕರ್ ನನ್ನೂ ಕೂಡ ಸಿಸಿಬಿ ಪೊಲೀಸರು ಕರೆದೊಯ್ದಿದ್ದಾರೆ. ರಾಜ್ಯ ಮಹಿಳಾ ನಿಲಯದಿಂದ ಪರಪ್ಪನ ಅಗ್ರಹಾರ ರೂಮ್ ನಂ.4ರಲ್ಲಿ ಸಂಜನಾರನ್ನು ಲಗೇಜ್ ಸಮೇತ ಸಿಸಿಬಿ ಪೊಲೀಸರು ಬಿಟ್ಟು ಬಂದಿದ್ದಾರೆ. ಈ ಮೂಲಕ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ ಕನ್ನಡದ ಎರಡನೇ ನಟಿಯಾಗಿದ್ದಾರೆ.

ಸಿಸಿಬಿ ಪೊಲೀಸರು ಸಾಂತ್ವನ ಕೇಂದ್ರದಿಂದ ಕರೆದುಕೊಂಡು ಬರುವಾಗ ವಾಹನದಲ್ಲಿ ಸಂಜನಾ ಮಲಗಿಕೊಂಡೇ ಬಂದಿದ್ದಾರೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Megamedia News Kannada
Top