Dailyhunt Logo
  • Light mode
    Follow system
    Dark mode
    • Play Story
    • App Story
ಜಲಪಾತದ ವೀಕ್ಷಣೆಗೆ ಹೋಗಿದ್ದ ಯುವಕ ಮಣ್ಣಿನಡಿ ಸಿಲುಕಿ ನಾಪತ್ತೆ

ಜಲಪಾತದ ವೀಕ್ಷಣೆಗೆ ಹೋಗಿದ್ದ ಯುವಕ ಮಣ್ಣಿನಡಿ ಸಿಲುಕಿ ನಾಪತ್ತೆ

ಬೆಳ್ತಂಗಡಿ: ಮಲವಂತಿಗೆ ಗ್ರಾಮದ ಬಂಗಾರ್ ಪಲ್ಕೆ ಅರಣ್ಯ ಪ್ರದೇಶದಲ್ಲಿರುವ ಜಲಪಾತಕ್ಕೆ ತೆರಳಿದ್ದ ಉಜಿರೆ ಮೂಲದ ಯುವಕ ಮಣ್ಣಿನಡಿ ಸಿಲುಕಿ ನಾಪತ್ತೆಯಾಗಿರುವ ಘಟನೆ ನಡೆದಿದೆ.

ಜಲಪಾತದ ವೀಕ್ಷಣೆಗೆ ಹೋಗಿದ್ದ ನಾಲ್ವರು ಯುವಕರ ಮೇಲೆ ದಿಢೀರನೆ ಕುಸಿದಿದೆ. ಘಟನೆಯಲ್ಲಿ ಮೂವರು ಯುವಕರು ಪಾರಾಗಿದ್ದು ಓರ್ವ ಮಣ್ಣಿನಡಿಯಲ್ಲಿ ಸಿಲುಕಿದ್ದಾನೆ. ನಾಪತ್ತೆಯಾದ ಯುವಕನ್ನು ಬೆಳ್ತಂಗಡಿ ಸಮೀಪದ ಕಾಶಿಬೆಟ್ಟು ಸಮೀಪದ ನಿವಾಸಿ ಎಂದು ಹೇಳಲಾಗಿದೆ.

ಅರಣ್ಯದಂಚಿನಲ್ಲಿ ಇರುವ ಈ ಜಲಪಾತ ಜನವಸತಿಯಿಂದ ದೂರವಿದೆ. ಇತ್ತೀಚೆಗಷ್ಟೆ ಜಲಪಾತಕ್ಕೆ ನಿಷೇಧ ಹೇರುವಂತೆ ಗ್ರಾಮಸ್ಥರು ಸ್ಥಳೀಯ ಆಡಳಿತಕ್ಕೆ ಒತ್ತಡ ಹೇರಿದ್ದರು.

ಅಪಾಯಕಾರಿ ಪ್ರದೇಶವಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಹೇಳಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Megamedia News Kannada