Tuesday, 24 Nov, 10.59 pm Megamedia News

ಸುದ್ದಿ
ಮುಸ್ಲಿಂ ಹುಡುಗಿಯರು ಹಿಂದೂ ಯುವಕರೊಂದಿಗೆ ಮದುವೆಯಾಗಲು ಒಪ್ಪಿಗೆ ಇದೆಯೇ - ಹಿಂದೂ ಜನಜಾಗೃತಿ ಸಮಿತಿ

ಮಂಗಳೂರು : ಅನ್ಯಧರ್ಮಿಯರ ಯುವತಿಯರನ್ನು ಪ್ರೀತಿಯ ಬಲೆಯಲ್ಲಿ ಸೆಳೆದು ಅವರೊಂದಿಗೆ ಮದುವೆಯಾಗಿ ಅವರನ್ನು 'ಲವ್ ಜಿಹಾದ್' ಮೂಲಕ ಇಸ್ಲಾಂಗೆ ಮತಾಂತರಿಸುವ ಸಂಚನ್ನು ಕಟ್ಟರವಾದಿ ಜಿಹಾದಿಗಳು ರೂಪಿಸುತ್ತಿದ್ದಾರೆ. ಈ ಬಗ್ಗೆ ಕೇವಲ ಭಾರತದ ಹಿಂದುತ್ವನಿಷ್ಠ ಸಂಘಟನೆಗಳು ಮಾತ್ರವಲ್ಲ, ಕೇರಳದ ಅನೇಕ ಕ್ರೈಸ್ತ ಸಂಘಟನೆಗಳ ಸಹಿತ ಅಂತರರಾಷ್ಟ್ರೀಯ ಸ್ತರದ ಸಿಕ್ಖ್ ಮತ್ತು ಕ್ರೈಸ್ತ ಸಂಘಟನೆಗಳು ಸಹ ಈ ವಿಷಯದಲ್ಲಿ ಧ್ವನಿ ಎತ್ತಿವೆ. ಜಾಗತಿಕ ಮಟ್ಟದಲ್ಲಿಯೂ ಇಂಗ್ಲೆಂಡ್, ಮ್ಯಾನ್ಮಾರ್ ಮತ್ತು ಇತರ ದೇಶಗಳ ಮುಸ್ಲಿಮರೇತರ ಸಮುದಾಯಗಳು 'ಲವ್ ಜಿಹಾದ್' ವಿರುದ್ಧ ಧ್ವನಿ ಎತ್ತುತ್ತಿವೆ. ಪಾಕಿಸ್ತಾನದಲ್ಲಿ ಹಿಂದೂ ಮತ್ತು ಇತರ ಧರ್ಮೀಯ ಅಪ್ರಾಪ್ತ ಬಾಲಕಿಯರನ್ನು ಅಪಹರಿಸಿ ಅವರನ್ನು ವೃದ್ಧ ಮುಸಲ್ಮಾನರೊಂದಿಗೆ ಮದುವೆ ಮಾಡಿಸುವುದು, ಇಸ್ಲಾಮಿಕ್ ಸ್ಟೇಟ್‌ನಲ್ಲಿ ಯಹೂದಿ ಯುವತಿಯರ ಮೇಲಾಗುವ ದೌರ್ಜನ್ಯಗಳ ಬಗ್ಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಬಯಲಾಗಿದೆ. ರಶಿಯಾದಲ್ಲಿ ಮುಸ್ಲಿಂ ಉಲೆಮಾ ಕೌನ್ಸಿಲ್ ಇದು ಮುಸ್ಲಿಂ ಪುರುಷರು ಮುಸ್ಲಿಮರೇತರ ಸ್ತ್ರೀಯನ್ನು ಮದುವೆಯಾಗುವುದನ್ನು ನಿಷೇಧಿಸಲು ನಿರ್ಧರಿಸಿದೆ. ಇದೆಲ್ಲವು ಬಹಿರಂಗವಾಗುತ್ತಿರುವಾಗ ಎಮ್.ಐ.ಎಮ್. ಸಂಸದ ಅಸದುದ್ದೀನ್ ಓವೈಸಿ, ಅದೇರೀತಿ ಕಾಂಗ್ರೆಸ್ ಪಕ್ಷದ ಮುಖ್ಯಮಂತ್ರಿಗಳು 'ಲವ್ ಜಿಹಾದ್' ಕಾಯ್ದೆಯನ್ನು ವಿರೋಧಿಸುತ್ತಿದ್ದಾರೆ. ಇದೇ ಗುಂಪು ಈ ಹಿಂದೆ ದೇಶದ ಹಿತಕ್ಕಾಗಿದ್ದ ಸಿಎಎ, ಎನ್.ಆರ್.ಸಿ.ಯಂತಹ ಹಾಗೂ ತ್ರಿವಳಿ ತಲಾಖಅನ್ನು ನಿಷೇಧಿಸಿ ಮುಸಲ್ಮಾನ ಮಹಿಳೆಯರಿಗೆ ಆಧಾರ ನೀಡುವ ಕಾನೂನನ್ನು ವಿರೋಧಿಸಿ ಬೀದಿಗಿಳಿದ್ದರು. ಆದ್ದರಿಂದ ಲವ್ ಜಿಹಾದ್ ಕಾಯ್ದೆಯನ್ನು ವಿರೋಧಿಸುವ ಈ ಗುಂಪು ಪ್ರೀತಿಯನ್ನು ಸಮಾನವಾಗಿ ಗೌರವಿಸುವ ದೃಷ್ಟಿಯಿಂದ ಮುಸ್ಲಿಂ ಯುವತಿಯರಿಗೆ ಹಿಂದೂ ಯುವಕರೊಂದಿಗೆ ವಿವಾಹವಾಗಲು ಅನುಮತಿ ನೀಡುವುದೇ, ಎಂಬುದನ್ನು ಮೊದಲು ಘೋಷಿಸಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.

ಲವ್ ಜಿಹಾದ್ ಕಾಯ್ದೆಯ ವಿರುದ್ಧ ಸಂವಿಧಾನದ 14 ಮತ್ತು 21 ನೇ ವಿಧಿಗಳ ವಿರುದ್ಧ ಸಾಕ್ಷ್ಯ ನೀಡಿದ ಓವೈಸಿಯವರು ಸಂವಿಧಾನದಲ್ಲಿರುವ ಸಮಾನತೆಯ ಮೂಲ ತತ್ವವನ್ನು ಸ್ವೀಕರಿಸುತ್ತಾರೆಯೇ ? ಹಾಗಿದ್ದಲ್ಲಿ, ಮೊದಲನೆಯದಾಗಿ ಮುಸ್ಲಿಮರಿಗೆ ಇರುವ ಬಹುಪತ್ನಿತ್ವ, ಮುಸ್ಲಿಂ ಪರ್ಸನಲ್ ಬೋರ್ಡ್ ಸೇರಿದಂತೆ ಇತರ ಎಲ್ಲ ಕಾನೂನು ಮತ್ತು ಸೌಲಭ್ಯಗಳನ್ನು ರದ್ದುಗೊಳಿಸುವ ಮೂಲಕ ಸಮಾನ ನಾಗರಿಕ ಕಾನೂನನ್ನು ಬೆಂಬಲಿಸುವ ನೈತಿಕ ಧೈರ್ಯವನ್ನು ತೋರಿಸಬೇಕು. ಅಲ್ಲದೆ ದೆಹಲಿಯ ರಾಹುಲ್ ರಜಪೂತ್ ಎಂಬ ಹಿಂದೂ ಯುವಕನು ಮುಸ್ಲಿಂ ಹುಡುಗಿಯನ್ನು ಪ್ರೀತಿಸಿದಾಗ ಮುಸ್ಲಿಂ ಗುಂಪಿನಿಂದ ಆತನು ಏಕೆ ಕ್ರೂರವಾಗಿ ಹತ್ಯೆಗೀಡಾದನು, ಇದರ ಬಗ್ಗೆ ಉತ್ತರಿಸಬೇಕು ? ಆ ಸಮಯದಲ್ಲಿ ಕಾಂಗ್ರೆಸ್ ಮುಖ್ಯಮಂತ್ರಿ ಮತ್ತು ನಾಯಕರು ಏಕೆ ಬಾಯಿ ಬಿಡುವುದಿಲ್ಲ ? ಬಾಲಿವುಡ್ ಚಲನಚಿತ್ರಗಳ ಮಾಧ್ಯಮದಿಂದ 'ಲವ್ ಜಿಹಾದ್'ಗೆ ಪ್ರೋತ್ಸಾಹ ನೀಡುವ ಕೆಲಸವನ್ನು ಅನೇಕ ದಶಕಗಳಿಂದ ಮಾಡಲಾಗುತ್ತಿದೆ. ಈಗ ಅದು ನೆಟ್‌ಫ್ಲಿಕ್ಸ್‌ನಂತಹ ಒಟಿಟಿ ಪ್ಲಾಟ್‌ಫಾರ್ಮ್‌ಗಳ ಮೂಲಕ ದೇವಾಲಯದಲ್ಲಿ ಮುಸ್ಲಿಂ ಯುವಕನು ಹಿಂದೂ ಯುವತಿಯ ಚುಂಬನದ ದೃಶ್ಯವನ್ನು ತೋರಿಸುವ 'ಎ ಸೂಟೆಬಲ್ ಬಾಯ್'ನಂತಹ ವೆಬ್‌ಸಿರೀಸ್ ಮಾಡಲಾಗುತ್ತಿದೆ.

ಕೇರಳದ ಅನೇಕ ಕ್ರೈಸ್ತ ಯುವತಿಯರನ್ನು ಲವ್ ಜಿಹಾದ್‌ನ ಸಂಚಿನಲ್ಲಿ ಸಿಲುಕಿಸಿ ಇಸ್ಲಾಮಿಕ್ ಸ್ಟೇಟ್‌ನ ಮೊದಲ ಹೋರಾಟಕ್ಕಾಗಿ ಸಿರಿಯಾಗೆ ಕಳುಹಿಸಿರುವುದು ಬಹಿರಂಗವಾದ ನಂತರ ಕೇರಳದ 'ಸಾಯರೋ ಮಲಬಾರ್ ಚರ್ಚ್' ಸೇರಿದಂತೆ ಅನೇಕ ಕ್ರೈಸ್ತ ಸಂಘಟನೆಗಳು ಧ್ವನಿ ಎತ್ತಿದ್ದವು. ಕೇವಲ ಓರ್ವ ಮುಸ್ಲಿಂ ಯುವಕ ಮುಸ್ಲಿಮೇತರ ಹುಡುಗಿಯ ಜೊತೆ ಪ್ರೇಮವಿವಾಹ ಮಾಡಿದನೆಂದು ಈ ವಿರೋಧವಲ್ಲ; ಇದೊಂದು ದೊಡ್ಡ ಪಿತೂರಿಯಾಗಿದೆ ಮತ್ತು ಇದರ ಮೂಲಕ ರಾಷ್ಟ್ರೀಯ ಸ್ತರದಲ್ಲಿ ಹಿಂದೂ ಯುವತಿಯರಿಗಾಗುವ ಮೋಸವನ್ನು ತಡೆಗಟ್ಟಲು 'ಲವ್ ಜಿಹಾದ್' ವಿರೋಧಿ ಕಾನೂನಿನ ಬೇಡಿಕೆಯಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರಕಾರವು ರಾಷ್ಟ್ರಮಟ್ಟದಲ್ಲಿ ಕಠಿಣ ಕಾನೂನುಗಳನ್ನು ಜಾರಿಗೊಳಿಸಬೇಕು, ಎಂದು ನಾವು ಒತ್ತಾಯಿಸುತ್ತೇವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Megamedia News Kannada
Top