Monday, 25 Jan, 4.59 pm Megamedia News

ಸುದ್ದಿ
ಪೆಟ್ರೋಲ್ ಬಂಕ್ ಗೆ ನುಗ್ಗಿ ಕಂಪ್ಯೂಟರ್, ಸಿಸಿ ಕ್ಯಾಮೆರಾ ದೋಚಿದ ಕಳ್ಳರು

ವಿಟ್ಲ: ಪುತ್ತೂರು ರಸ್ತೆಯಲ್ಲಿರುವ ಉರಿಮಜಲು ಎಸ್ಸಾರ್ ಪೆಟ್ರೋಲ್ ಬಂಕ್ ಗೆ ಕಳ್ಳರು ನುಗ್ಗಿ ಲಕ್ಷಾಂತರ ರೂ. ಮೌಲ್ಯದ ಕಳವುಗೈದ ಘಟನೆ ಭಾನುವಾರ ತಡರಾತ್ರಿ ನಡೆದಿದೆ.

ಬಂಕ್ ನ ಕಚೇರಿಯ ಬೀಗ ಒಡೆದು ನುಗ್ಗಿದ ದರೋಡೆಕೋರರು ಕಂಪ್ಯೂಟರ್ ಮತ್ತು ಸಿಸಿ ಕ್ಯಾಮೆರಾಕ್ಕೆ ಸಂಬಂಧಿಸಿದ ಸಲಕರಣೆಗಳನ್ನು ದೋಚಿದ್ದಾರೆ.

ಕಚೇರಿಯ ಎಲ್ಲಾ ಲಾಕರ್ ಗಳನ್ನು ಒಡೆದು ಅಸ್ತವ್ಯಸ್ತ ಮಾಡಿದ್ದಾರೆ. ಸುಮಾರು 2 ಲಕ್ಷದ ಸೊತ್ತುಗಳನ್ನು ದೋಚಿ ಪರಾರಿಯಾಗಿದ್ದಾರೆ.

ವಿಟ್ಲ ಪೊಲೀಸರು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ. ಕೆಲ ಸಮಯದ ಹಿಂದೆ ಕುದ್ದುಪದವಿನಲ್ಲಿರುವ ಎಸ್ಸಾರ್ ಕಂಪನಿಯ ಬಂಕ್ ಗೆ ಕಳ್ಳರು ನುಗ್ಗಿದ್ದರು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Megamedia News Kannada
Top