Tuesday, 26 Jan, 2.59 am Megamedia News

ಸುದ್ದಿ
ಶ್ರೀನಿವಾಸ ಫಾರ್ಮಸಿ ಕಾಲೇಜ್​ ನ ನಾಲ್ವರು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು

ಮಂಗಳೂರು : ವಲಚ್ಚಿಲ್ ಶ್ರೀನಿವಾಸ ಫಾರ್ಮಸಿ ಕಾಲೇಜ್ ನಲ್ಲಿ ವೈದ್ಯಕೀಯ ವ್ಯಾಸಂಗ ಮಾಡುತ್ತಿರುವ ನಾಲ್ವರು ವಿದ್ಯಾರ್ಥಿನಿಯರಿಗೆ ಕೊರೊನಾ ಸೋಂಕು ದೃಢವಾಗಿರುವ ಕಾರಣ ಪ್ರಾಂಶುಪಾಲರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ.

ನಾಲ್ವರೂ ಕೇರಳದ ವಿದ್ಯಾರ್ಥಿಗಳಾಗಿದ್ದು ಇವರು ತಮ್ಮ ರಾಜ್ಯದಿಂದ ನಗರದ ಕಾಲೇಜಿಗೆ ಬರುವಾಗ ತಪಾಸಣೆ ನಡೆಸಿ ನೆಗೆಟಿವ್ ವರದಿ ಇಲ್ಲದೆ ಬಂದಿದ್ದರು. ಇದೀಗ ಅವರನ್ನು ತಪಾಸಣೆ ನಡೆಸಿದಾಗ ನಾಲ್ವರಲ್ಲಿಯೂ ಸೋಂಕು ದೃಢಪಟ್ಟಿದೆ.

ಇಬ್ಬರು ಸೋಂಕಿತರು ಹಾಸ್ಟೆಲ್‌ನಲ್ಲಿ ಐಸೋಲೇಷನ್ಗೆ ಒಳಗಾಗಿದ್ದಾರೆ. ಆದರೆ, ಕಾಸರಗೋಡು ಹಾಗೂ ಎರ್ನಾಕುಲಂನ ಇಬ್ಬರು ಸೋಂಕಿತರು ಕಾಲೇಜಿನಿಂದ ಪರಾರಿಯಾಗಿ ತಮ್ಮ ಊರಿಗೆ ಸೇರಿಕೊಂಡಿದ್ದಾರೆ‌. ಇಂದು ಮತ್ತೆ 300 ಮಂದಿಯ ಗಂಟಲು ದ್ರವದ ಮಾದರಿಯನ್ನು ಲ್ಯಾಬ್‌ಗೆ ಕಳುಹಿಸಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Megamedia News Kannada
Top