Dailyhunt Logo
  • Light mode
    Follow system
    Dark mode
    • Play Story
    • App Story
ತಲೆನೋವು : ಹೊಸನಗರದಲ್ಲಿ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಶೂಟ್ ಮಾಡಿಕೊಂಡು ವೃದ್ಧ ಆತ್ಮಹತ್ಯೆ

ತಲೆನೋವು : ಹೊಸನಗರದಲ್ಲಿ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಶೂಟ್ ಮಾಡಿಕೊಂಡು ವೃದ್ಧ ಆತ್ಮಹತ್ಯೆ

ಶಿವಮೊಗ್ಗ : ಹೊಸನಗರ ತಾಲೂಕಿನ ನಿಟ್ಟೂರು ಸಮೀಪದ ತಟ್ಟೆಕೊಡ್ಲು ಎಂಬಲ್ಲಿ ಕರುಣಾಜನಕ ಘಟನೆಯೊಂದು ಸಂಭವಿಸಿದೆ. ಇಲ್ಲಿನ ನಿವಾಸಿಯಾದ 85 ವರ್ಷದ ತಟ್ಟೆಕೊಡ್ಲು ರಾಮಚಂದ್ರ ರಾವ್ ಎಂಬ ವೃದ್ಧರು ಮಧ್ಯರಾತ್ರಿ ಸುಮಾರು 1:30 ರ ವೇಳೆಗೆ ತಮಗೆ ಸೇರಿದ್ದ ಸಿಂಗಲ್ ಬ್ಯಾರಲ್ ಬಂದೂಕಿನಿಂದ ಗುಂಡು ಹಾರಿಸಿಕೊಂಡು ದುರಂತ ಅಂತ್ಯ ಕಂಡಿದ್ದಾರೆ.

ಮೂಲಗಳ ಪ್ರಕಾರ, ರಾಮಚಂದ್ರ ರಾವ್ ಅವರು ಮೂರು ದಿನಗಳ ಹಿಂದಷ್ಟೇ ಆಕಸ್ಮಿಕವಾಗಿ ಬಿದ್ದು ತಮ್ಮ ತಲೆಗೆ ಪೆಟ್ಟು ಮಾಡಿಕೊಂಡಿದ್ದರು. ಈ ಸಂಬಂಧ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರಾದರೂ, ಅವರಿಗೆ ತಲೆನೋವು ಮಾತ್ರ ಕಡಿಮೆಯಾಗಿರಲಿಲ್ಲ. ಈ ತೀವ್ರವಾದ ದೈಹಿಕ ನೋವನ್ನು ಸಹಿಸಿಕೊಳ್ಳಲು ಸಾಧ್ಯವಾಗದೆಯೇ ಅವರು ಕುತ್ತಿಗೆಯ ಭಾಗಕ್ಕೆ ಗನ್ ಇಟ್ಟುಕೊಂಡು ಶೂಟ್ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಗುಂಡಿನ ತೀವ್ರತೆಗೆ ಅವರ ತಲೆ ಸಂಪೂರ್ಣವಾಗಿ ಛಿದ್ರಗೊಂಡಿದೆ.

ಘಟನೆಗೆ ಸಂಬಂಧಿಸಿದಂತೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ದುರಂತಕ್ಕೆ ಬಳಕೆಯಾದ ಗನ್‌ಗೆ ಅಧಿಕೃತ ಲೈಸೆನ್ಸ್ ಇತ್ತೇ ಎಂಬ ಬಗ್ಗೆ ಹಾಗೂ ವೃದ್ಧರು ತಾವೇ ಬಂದೂಕಿನ ಟ್ರಿಗರ್ ಅನ್ನು ಹೇಗೆ ಪ್ರೆಸ್ ಮಾಡಿದರು ಎಂಬ ತಾಂತ್ರಿಕ ಅಂಶಗಳ ಕುರಿತು ಪೊಲೀಸರು ಸ್ಥಳ ಪರಿಶೀಲನೆ ನಡೆಸಿ ಮಾಹಿತಿ ಕಲೆಹಾಕುತ್ತಿದ್ದಾರೆ.

ನಿಮ್ಮ ಇಮೇಲ್ ವಿಳಾಸವನ್ನು ಪ್ರಕಟಿಸಲಾಗುವುದಿಲ್ಲ.ಕಡ್ಡಾಯ ಫೀಲ್ಡ್ಗಳನ್ನು * ಮೂಲಕ ಗುರುತಿಸಲಾಗಿದೆ

ಪ್ರತಿಕ್ರಿಯೆ

ಹೆಸರು

ಇಮೇಲ್

ಊರು

ನಂತರದ ಪ್ರತಿಕ್ರಿಯೆಗಾಗಿ ನನ್ನ ಹೆಸರು, ಇಮೇಲ್ ಮತ್ತು ವೆಬ್‌ಸೈಟ್ ಅನ್ನು ಈ ಬ್ರೌಸರ್‌ನಲ್ಲಿ ಉಳಿಸಿ.

Dailyhunt
Disclaimer: This content has not been generated, created or edited by Dailyhunt. Publisher: Megamedia News Kannada