Dailyhunt
ತುಳುವಿನಲ್ಲಿ ಗಣರಾಜ್ಯೋತ್ಸವದ  ಶುಭಾಶಯ ಕೋರಿದ ನಗರ ಪೊಲೀಸ್ ಕಮಿಷನರ್

ತುಳುವಿನಲ್ಲಿ ಗಣರಾಜ್ಯೋತ್ಸವದ ಶುಭಾಶಯ ಕೋರಿದ ನಗರ ಪೊಲೀಸ್ ಕಮಿಷನರ್

ಮಂಗಳೂರು : ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ತುಳು ಭಾಷೆಯಲ್ಲಿ ಮಂಗಳೂರಿನ ಜನತೆಗೆ ಗಣರಾಜ್ಯೋತ್ಸವ ಕುರಿತು ಶುಭ ಕೋರಿ ಟ್ವೀಟ್ ಮಾಡಿದ್ದಾರೆ.

ಪ್ರತಿವರ್ಷ ಜ.26ರಂದು ವಿಶ್ವದೆಲ್ಲೆಡೆ ದೇಶದ ಗಣರಾಜ್ಯೋತ್ಸವವನ್ನು ಭಾರೀ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ನಗರದ ಸಮಸ್ತ ನಾಗರಿಕರಿಗೆ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು ಎಂದು ಟ್ವೀಟ್ ಮಾಡಿದ್ದಾರೆ. ಟ್ವೀಟ್ ತುಳು ಭಾಷೆಯಲ್ಲಿದ್ದು, ಕರಾವಳಿಯ ಜನತೆ ಸಂತಸ ವ್ಯಕ್ತಪಡಿಸಿ ಕಮೆಂಟ್ ಮಾಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Megamedia News Kannada