Dailyhunt
ಅನಾರೋಗ್ಯ ಪೀಡಿತರಿಗೆ ನೆರವಾಗಲು ಗಣೇಶೋತ್ಸವದಲ್ಲಿ ವೇಷ ಹಾಕಿದ ಯುವಕ

ಅನಾರೋಗ್ಯ ಪೀಡಿತರಿಗೆ ನೆರವಾಗಲು ಗಣೇಶೋತ್ಸವದಲ್ಲಿ ವೇಷ ಹಾಕಿದ ಯುವಕ

ಮಂಗಳೂರು: ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ವೇಷ ಧರಿಸಿದ ಯುವಕನೊಬ್ಬ ಅದರಿಂದ ಸಂಗ್ರವಾದ ಹಣವನ್ನು ಅನಾರೋಗ್ಯದಿಂದ ಬಳಲುತ್ತಿರುವ ಮೂವರಿಗೆ ನೀಡಲು ಮುಂದಾಗಿದ್ದಾರೆ.

ನಗರದ ಹೊರವಲಯದ ಸುರತ್ಕಲ್ ಸಮೀಪದ ಜನತಾ ಕಾಲೋನಿಯ ನಿವಾಸಿ ಧನಂಜಯ(ಧನು) ಪೂಜಾರಿಯವರು ಕೃಷ್ಣಾಪುರ ಸಾರ್ವಜನಿಕ ಗಣೇಶೋತ್ಸವದ ಸಂದರ್ಭದಲ್ಲಿ ವೇಷ ಧರಿಸಿ ಸಂಗ್ರಹಿಸಿದ ರೂ 26,994 ವನ್ನು ಮೂವರು ಅನಾರೋಗ್ಯ ಪೀಡಿತರಿಗೆ ನೀಡಲಿದ್ದಾರೆ.

ಕಲಾವಿದರಾಗಿರುವ ಧನಂಜಯ(ಧನು) ಪೂಜಾರಿಯ ಸುರತ್ಕಲ್ ಆಪತ್ಬಾಂಧವ ಸಮಾಜ ಸೇವಾ ಸಂಘದ ಸದಸ್ಯರಾಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Megamedia News Kannada