Dailyhunt
ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಆಚರಣೆ

ಶರವು ಶ್ರೀಮಹಾಗಣಪತಿ ದೇವಸ್ಥಾನದಲ್ಲಿ ಗಣೇಶ ಚತುರ್ಥಿ ಆಚರಣೆ

ಮಂಗಳೂರು : ಶರವು ಶ್ರೀಮಹಾಗಣಪತಿ ದೇವಸ್ಥಾನ ದಲ್ಲಿ ಗಣೇಶ ಚತುರ್ಥಿ ಚೌತಿ ಪ್ರಯುಕ್ತ ಮಹಾ ಗಣಪತಿ ಹೋಮ, 5000 ತೆಂಗಿನ ಕಾಯಿಯ ಪಲ್ಲ ಪೂಜೆ, ಮಹಾಪೂಜೆಯು ಸೆಪ್ಟೆಂಬರ್ 10 ಶುಕ್ರವಾರ ನಡೆಯಿತು.

ತಾ. 10-09-2021 ಶುಕ್ರವಾರ ಸೂರ್ಯೋದಯಕ್ಕೆ ಊಷಕಾಲ ಪೂಜೆ.

ಬೆಳಿಗ್ಗೆ ಘಂಟೆ 8 ಕ್ಕೆ ಶ್ರೀ ಮಹಾಗಣಪತಿ ದೇವರಿಗೆ ಕಳ್ಪೋಕ್ತ ಪೂಜೆ, ಬೆಳಿಗ್ಗೆ ಘಂಟೆ 9:30 ಕ್ಕೆ ಆಗ್ನಿ ಜನನ, ಚೌತಿ ಮಹಾಗಣಪತಿ ಹೋಮ, ಬೆಳಿಗ್ಗೆ ಘಂಟೆ 11:45 ಕ್ಕೆ ಮಹಾಗಣಪತಿ ಹೋಮದ ಪೂರ್ಣಾಹುತಿ, ಬೆಳಿಗ್ಗೆ ಘಂಟೆ 12 :16 ಕ್ಕೆ 5000 ತೆಂಗಿನ ಕಾಯಿಯ ಪಲ್ಲ ಪೂಜೆ, ಬೆಳಿಗ್ಗೆ ಘಂಟೆ 12:30 ಕ್ಕೆ ಮಹಾಪೂಜೆ ಪಲ್ಲಕ್ಕಿ ಉತ್ಸವ , ಬಂಡಿ ಪೇಟೆಸವಾರಿ ಹಾಗೂ ಚೌತಿ ಮಹಾ ಗಣಪತಿ ಹೋಮದ ಸೇವಾ ಪ್ರಸಾದ ವಿತರಣೆ ನಡೆಯಿತು. ರಾತ್ರಿ 8.30 ಕ್ಕೆ ಹೂವಿನ ಪೂಜೆ ಹಾಗೂ ಮಹಾ ಪೂಜೆ ನಡೆಯಲಿದೆ

ಶರವು ರಾಘವೇಂದ್ರ ಶಾಸ್ತ್ರಿ ಅನುವಂಶಿಕ ಅರ್ಚಕರು ಭಕ್ತಾಧಿಗಳಿಗೆ ಪ್ರಸಾದ ನೀಡಿ ಆಶೀರ್ವಚಿಸಿದರು. ಕೊರೋನಾ ಹಿನ್ನಲೆಯಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಸರಕಾರದ ನಿಯಮಗಳಂತೆ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು.

Dailyhunt
Disclaimer: This content has not been generated, created or edited by Dailyhunt. Publisher: Megamedia News Kannada