Dailyhunt Logo
  • Light mode
    Follow system
    Dark mode
    • Play Story
    • App Story
ACTOR CHIKKANNA :ಒಂಟಿ ಬಾಳು ಮುಗೀತು, ಜಂಟಿ  ಪಯಣ ಶುರುವಾಯ್ತು - ಸಪ್ತಪದಿ ತುಳಿದ ಚಿಕ್ಕಣ್ಣ!VIDEO

ACTOR CHIKKANNA :ಒಂಟಿ ಬಾಳು ಮುಗೀತು, ಜಂಟಿ ಪಯಣ ಶುರುವಾಯ್ತು - ಸಪ್ತಪದಿ ತುಳಿದ ಚಿಕ್ಕಣ್ಣ!VIDEO

Navasamaja.com 1 week ago

ಮೈಸೂರು: ಸ್ಯಾಂಡಲ್‌ವುಡ್‌ನ ಖ್ಯಾತ ಹಾಸ್ಯನಟ ಚಿಕ್ಕಣ್ಣ(chikkanna) ಅವರು 'ಸಿಂಗಲ್ ಸೀನ್'ಗೆ ಫುಲ್‌ಸ್ಟಾಪ್ ಇಟ್ಟು ದಾಂಪತ್ಯ ಜೀವನಕ್ಕೆ(married) ಕಾಲಿಟ್ಟಿದ್ದಾರೆ. ಮಂಡ್ಯ(Mandya) ಮೂಲದ ಪಾವನಾ ಅವರೊಂದಿಗೆ ಚಿಕ್ಕಣ್ಣ ಅವರ ವಿವಾಹ ಮೈಸೂರಿನಲ್ಲಿ ಅತ್ಯಂತ ಸಂಭ್ರಮ ಹಾಗೂ ಅದ್ಧೂರಿಯಾಗಿ ನೆರವೇರಿದೆ.

ತುಲಾ ಲಗ್ನದಲ್ಲಿ ಮಾಂಗಲ್ಯಧಾರಣೆ
ಇಂದು ಬೆಳಿಗ್ಗೆ 10:45 ರಿಂದ 11:25ರ ಶುಭ ಮುಹೂರ್ತದಲ್ಲಿ, ತುಲಾ ಲಗ್ನದಲ್ಲಿ ಚಿಕ್ಕಣ್ಣ ಅವರು ಪಾವನಾ ಅವರ ಕೊರಳಿಗೆ ಮಾಂಗಲ್ಯಧಾರಣೆ ಮಾಡಿದರು. ಕುಟುಂಬಸ್ಥರು, ಆಪ್ತರು ಹಾಗೂ ಚಿತ್ರರಂಗದ ಗಣ್ಯರ ಸಮ್ಮುಖದಲ್ಲಿ ಈ ಸುಂದರ ಕಲ್ಯಾಣ ಮಹೋತ್ಸವ ಜರುಗಿತು.

ಕಳೆಕಟ್ಟಿದ್ದ ಸಿನಿತಾರೆಯರ ಸಮಾಗಮ
ಮದುವೆಗೂ ಮುನ್ನ ಶನಿವಾರ ಸಂಜೆ ಅದ್ಧೂರಿ ಆರತಕ್ಷತೆ (Reception) ಕಾರ್ಯಕ್ರಮ ನೆರವೇರಿತ್ತು. ಈ ಕಾರ್ಯಕ್ರಮದಲ್ಲಿ ಸ್ಯಾಂಡಲ್‌ವುಡ್ ನಟರಾದ ಡಾಲಿ ಧನಂಜಯ್, ಶ್ರೀಮುರಳಿ, ಹಿರಿಯ ನಟಿ ತಾರಾ ಅನುರಾಧ, ರಂಗಾಯಣ ರಘು, ಮೇಘನಾ ಗಾಂವ್ಕರ್ ಸೇರಿದಂತೆ ಚಿತ್ರರಂಗದ ಪ್ರಮುಖ ತಾರೆಯರು ಭಾಗವಹಿಸಿ ನವಜೋಡಿಗೆ ಶುಭ ಹಾರೈಸಿದರು.

ತಮ್ಮ ವಿಶಿಷ್ಟ ಹಾಸ್ಯ ನಟನೆಯ ಮೂಲಕವೇ ಕನ್ನಡಿಗರ ಮನಗೆದ್ದಿರುವ ಚಿಕ್ಕಣ್ಣ ಅವರು ಈಗ ಪಾವನಾ ಅವರೊಂದಿಗೆ ಹೊಸ ಜೀವನದ ಪ್ರಯಾಣ ಆರಂಭಿಸಿದ್ದಾರೆ. ನೆಚ್ಚಿನ ನಟನ ಮದುವೆಗೆ ಸ್ಯಾಂಡಲ್‌ವುಡ್ ಗಣ್ಯರು ಹಾಗೂ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja