Dailyhunt Logo
  • Light mode
    Follow system
    Dark mode
    • Play Story
    • App Story
ACTOR DARSHAN : ನಟ ದರ್ಶನ್‌ಗೆ ಬಿಗ್ ಶಾಕ್, ಮಾಫಿ ಸಾಕ್ಷಿಯಾಗಿ ಸಾಕ್ಷ್ಯ ನೀಡಲು ಆರೋಪಿ ಪ್ರದೋಷ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ!

ACTOR DARSHAN : ನಟ ದರ್ಶನ್‌ಗೆ ಬಿಗ್ ಶಾಕ್, ಮಾಫಿ ಸಾಕ್ಷಿಯಾಗಿ ಸಾಕ್ಷ್ಯ ನೀಡಲು ಆರೋಪಿ ಪ್ರದೋಷ್‌ಗೆ ಕೋರ್ಟ್‌ನಿಂದ ಸಮನ್ಸ್ ಜಾರಿ!

Navasamaja.com 1 week ago

ಬೆಂಗಳೂರು: ಕನ್ನಡ ಚಿತ್ರರಂಗದ ನಟ ದರ್ಶನ್ ತೂಗುದೀಪ (Actor Darshan) ಅವರಿಗೆ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renuka swamy murder case) ಮತ್ತೊಂದು ಭಾರಿ ಹಿನ್ನಡೆಯಾಗಿದೆ. ಈ ಕೊಲೆ ಪ್ರಕರಣದ 14ನೇ ಆರೋಪಿಯಾಗಿರುವ ಪ್ರದೋಷ್ ಎಸ್.

ರಾವ್ (Pradosh) ಅವರನ್ನು 'ಮಾಫಿ ಸಾಕ್ಷಿ'ಯಾಗಿ (ಅಪ್ರೂವರ್) ಪರಿಗಣಿಸಿ ನ್ಯಾಯಾಲಯಕ್ಕೆ ಸಾಕ್ಷ್ಯ ನುಡಿಯಲು 59ನೇ ಸಿಸಿಎಚ್ ನ್ಯಾಯಾಲಯ ಅಧಿಕೃತ ಸಮನ್ಸ್ ಜಾರಿಗೊಳಿಸಿದೆ.

ನ್ಯಾಯಾಲಯದ ಈ ನಿರ್ಣಾಯಕ ಆದೇಶದಿಂದಾಗಿ ಪ್ರಕರಣದಲ್ಲಿ ಬಂಧಿತರಾಗಿರುವ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ಕಾನೂನು ಸಂಕಷ್ಟ ಮತ್ತಷ್ಟು ಬಿಗಿಗೊಂಡಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ಬಳಿ ಇರುವ ಎಲ್ಲಾ ನೈಜ ಸಂಗತಿಗಳು ಮತ್ತು ಸತ್ಯಾಂಶಗಳನ್ನು ಕೋರ್ಟ್ ಮುಂದೆ ಬಹಿರಂಗಪಡಿಸಲು ಸಿದ್ಧವಿರುವುದಾಗಿ ತಿಳಿಸಿ ಪ್ರದೋಷ್ ಮಾಫಿ ಸಾಕ್ಷಿಯಾಗಲು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಪೀಠವು, ಪ್ರದೋಷ್ ಮನವಿಯನ್ನು ಅಂಗೀಕರಿಸಿ ಅವರಿಗೆ ಸಾಕ್ಷ್ಯ ನೀಡುವಂತೆ ಸಮನ್ಸ್ ನೀಡಿದೆ.

ನ್ಯಾಯಾಲಯವು ಪ್ರದೋಷ್ ಅವರಿಗೆ ಕೆಲವು ಪ್ರಮುಖ ಷರತ್ತುಗಳನ್ನು ವಿಧಿಸಿದೆ. ಪ್ರಕರಣದ ವಿಚಾರಣೆ ಹಾಗೂ ಪ್ರಕ್ರಿಯೆಗಳು ಪೂರ್ಣಗೊಳ್ಳುವವರೆಗೆ ಅವರು ಜೈಲಿನಲ್ಲೇ ಇರಬೇಕಾಗುತ್ತದೆ. ವಿಚಾರಣೆಯ ಸಂದರ್ಭದಲ್ಲಿ ಯಾವುದೇ ಸತ್ಯವನ್ನು ಮುಚ್ಚಿಡದೆ ಸಂಪೂರ್ಣ ನಿಜಾಂಶವನ್ನು ತನಿಖೆಗೆ ಒದಗಿಸಬೇಕಾಗಿದೆ. ಒಂದು ವೇಳೆ ಸುಳ್ಳು ಸಾಕ್ಷಿ ನೀಡಿದರೆ ಅಥವಾ ಷರತ್ತುಗಳನ್ನು ಉಲ್ಲಂಘಿಸಿದರೆ ಅವರ ಮಾಫಿ ಸಾಕ್ಷಿ ಸ್ಥಾನಮಾನವನ್ನು ರದ್ದುಗೊಳಿಸಿ, ಮತ್ತೆ ಆರೋಪಿಯನ್ನಾಗಿಯೇ ವಿಚಾರಣೆಗೊಳಪಡಿಸಲಾಗುವುದು ಎಂದು ನ್ಯಾಯಾಲಯ ಎಚ್ಚರಿಸಿದೆ.

ಕೊಲೆ ನಡೆದ ದಿನದ ಪ್ರತಿಯೊಂದು ಹಂತದಲ್ಲೂ ಪ್ರದೋಷ್ ಪ್ರತ್ಯಕ್ಷದರ್ಶಿಯಾಗಿದ್ದರು ಹಾಗೂ ಹಣದ ವಹಿವಾಟು ಸೇರಿದಂತೆ ಹಲವು ಪ್ರಮುಖ ವಿಚಾರಗಳಲ್ಲಿ ಭಾಗಿಯಾಗಿದ್ದರು ಎನ್ನಲಾಗಿದೆ. ಇದೀಗ ಅವರು ಪ್ರಾಸಿಕ್ಯೂಷನ್ ಪರವಾಗಿ ನೀಡುವ ಸಾಕ್ಷ್ಯವು ದರ್ಶನ್ ಮತ್ತು ಇತರ ಆರೋಪಿಗಳಿಗೆ ವಿಧಿಸಲ್ಪಡುವ ಶಿಕ್ಷೆಯ ಪ್ರಮಾಣವನ್ನು ನಿರ್ಧರಿಸುವಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಲಿದೆ. ಪ್ರದೋಷ್ ಸಲ್ಲಿಸಿರುವ ಈ ಸಾಕ್ಷ್ಯ ಹೇಳಿಕೆಯಿಂದಾಗಿ ಇಡೀ ಪ್ರಕರಣಕ್ಕೆ ಈಗ ದೊಡ್ಡ ತಿರುವು ಸಿಕ್ಕಂತಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja