Dailyhunt
ACTOR VIJAY: ಪ್ರಥಮ ಚುಂಬನಂ ದಂತ ಭಗ್ನಂ, ಚುನಾವಣೆಗೂ ಮೊದಲೇ ದಳಪತಿ ವಿಜಯ್‌ ಪಕ್ಷಕ್ಕೆ ಒಂದು ಕ್ಷೇತ್ರದಲ್ಲಿ ಸೋಲು

ACTOR VIJAY: ಪ್ರಥಮ ಚುಂಬನಂ ದಂತ ಭಗ್ನಂ, ಚುನಾವಣೆಗೂ ಮೊದಲೇ ದಳಪತಿ ವಿಜಯ್‌ ಪಕ್ಷಕ್ಕೆ ಒಂದು ಕ್ಷೇತ್ರದಲ್ಲಿ ಸೋಲು

Navasamaja.com 1 week ago

ಚೆನ್ನೈ: ಬಿರು ಬಿಸಿಲಿನ ನಡುವೆ ದೇಶದಲ್ಲಿ ಪಂಚರಾಜ್ಯ ಚುನಾವಣೆ ಕಾವು ಜೋರಾಗಿದೆ. ತಮಿಳುನಾಡು ರಾಜಕಾರಣಕ್ಕೆ ಭರ್ಜರಿಯಾಗಿ ಪದಾರ್ಪಣೆ ಮಾಡಿರುವ ನಟ ವಿಜಯ್ (Actor Vijay) ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷಕ್ಕೆ ಮೊದಲ ಚುನಾವಣಾ ಕಣದಲ್ಲೇ ಹಿನ್ನಡೆಯಾಗಿದೆ.

ಅತ್ಯಂತ ಮಹತ್ವದ ಚುನಾವಣಾ ಅಖಾಡದಲ್ಲಿ ಟಿವಿಎಕೆ ಅಭ್ಯರ್ಥಿಯ ನಾಮಪತ್ರವನ್ನು ತಾಂತ್ರಿಕ ಕಾರಣಗಳ ಮೇಲೆ ಚುನಾವಣಾ ಆಯೋಗವು ತಿರಸ್ಕರಿಸಿದೆ.

ನಾಮಪತ್ರದಲ್ಲಿ ತಾಂತ್ರಿಕ ದೋಷ

ನಟ ವಿಜಯ್ ಅವರು ಸಕ್ರಿಯ ರಾಜಕಾರಣಕ್ಕೆ ಇಳಿದ ನಂತರ ಎದುರಿಸುತ್ತಿರುವ ಮೊದಲ ಪ್ರಮುಖ ಪರೀಕ್ಷೆ ಇದು. ಒಂದು ಕಡೆ ರಾಜ್ಯಾದ್ಯಂತ ಭಾರಿ ಜನಬೆಂಬಲ ವ್ಯಕ್ತವಾಗುತ್ತಿದ್ದರೂ, ಚುನಾವಣಾ ಪ್ರಕ್ರಿಯೆಯ ಸಣ್ಣ ತಪ್ಪಿನಿಂದಾಗಿ ಪಕ್ಷದ ಅಭ್ಯರ್ಥಿ ಈಗ ಸ್ಪರ್ಧೆಯಿಂದ ಹೊರಗುಳಿಯುವಂತಾಗಿದೆ. ನಾಮಪತ್ರದಲ್ಲಿ ಸಲ್ಲಿಸಲಾದ ಕೆಲವು ಪ್ರಮುಖ ಮಾಹಿತಿಗಳು ಮತ್ತು ಅಫಿಡವಿಟ್‌ಗಳಲ್ಲಿ ಕಂಡುಬಂದ ತಾಂತ್ರಿಕ ದೋಷಗಳನ್ನು ಆಧರಿಸಿ ಚುನಾವಣಾ ಅಧಿಕಾರಿಗಳು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.

ತಮಿಳುನಾಡಿನ ಎಡಪ್ಪಾಡಿ ವಿಧಾನಸಭಾ ಕ್ಷೇತ್ರವನ್ನು ಟಿವಿಕೆ ಪಕ್ಷ ಕಳೆದುಕೊಂಡಿದೆ. ಈ ಕ್ಷೇತ್ರದಲ್ಲಿ ಟಿವಿಕೆ ಪಕ್ಷದಿಂದ ಅರುಣ್ ಕುಮಾರ್ ಎಂ ನಾಪತ್ರ ಸಲ್ಲಿಸಿದ್ದರು. ಆದರೆ ಈ ನಾಮಪತ್ರ ತಿರಸ್ಕೃತಗೊಂಡಿದೆ. ಸಹಿ ವಿಚಾರದಲ್ಲಿ ಅರುಣ್ ಕುಮಾರ್ ಎಂ ನಾಪತ್ರ ತಿರಸ್ಕೃತವಾಗಿದೆ. ಮುಖ್ಯ ಅಭ್ಯರ್ಥಿ ನಾಮಪತ್ರದಲ್ಲಿ ಸಮಸ್ಯೆಗಳು ಎದುರಾಗದೆ ಎಂದು ಎರಡನೇ ಅಭ್ಯರ್ಥಿಯಾಗಿ ನಿತ್ಯಾ ಅವರನ್ನು ಟಿವಿಕೆ ಕಳಣಕ್ಕಿಳಿಸಿತ್ತು. ಆದರೆ ನಿತ್ಯಾ ಅವರ ನಾಮಪತ್ರವೂ ತಿರಸ್ಕೃತಗೊಂಡಿದೆ. ಪ್ರತಿ ನಾಮಪತ್ರದಲ್ಲಿ ಕನಿಷ್ಠ 10 ಮಂದಿ ಸಹಿ ಹಾಕಿರಬೇಕು. ಆದರೆ ಅರುಣ್ ಕುಮಾರ್ ನಾಪತ್ರದಲ್ಲಿ 7 ಮಂದಿ ಹಾಗೂ ನಿತ್ಯ ನಾಮಪತ್ರದಲ್ಲಿ 7 ಮಂದಿ ಸಹಿ ಹಾಕಿದ್ದಾರೆ. ಕೆಲ ಪ್ರಮುಖ ಮಾಹಿತಿ ಭರ್ತಿ ಮಾಡದ ಕಾರಣ ಚುನಾವಣಾ ಆಯೋಗ ನಾಮಪತ್ರವನ್ನು ತಿರಸ್ಕೃತಗೊಳಿಸಿದೆ.

ಕುತೂಹಲ ಮೂಡಿಸಿದ್ದ ಎಡಪ್ಪಾಡಿ ಕ್ಷೇತ್ರ

ಎಡಪ್ಪಾಡಿ ವಿಧಾನಸಭಾ ಕ್ಷೇತ್ರ ತಮಿಳುನಾಡು ಮಾಜಿ ಮುಖ್ಯಮಂತ್ರಿ, ಎಐಎಡಿಎಂಕೆ ಪ್ರಮುಖ ನಾಯಕ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರ ಭದ್ರಕೋಟೆ. ಈ ಬಾರಿ ತ್ರಿಕೋನ ಸ್ಪರ್ಧೆಯಿಂದ ಮತಗಳು ಹಂಚಿಕೆಯಾಗಲಿದೆ ಅಂತಾ ಭಾವಿಸಲಾಗಿತ್ತು. ಇದರಿಂದ ಎಡಪ್ಪಾಡಿ ಕ್ಷೇತ್ರ ತೀವ್ರ ಕುತೂಹಲಕ್ಕೆ ಕಾರಣವಾಗಿತ್ತು. ಆದರೆ ಚುನಾವಣೆಗೂ ಮೊದಲೆ ವಿಜಯ್‌ ಪಕ್ಷದ ಅಭ್ಯರ್ಥಿ ನಾಮಪತ್ರ ತಿರಸ್ಕತಕೊಂಡಿರೋದು ಅಚ್ಚರಿಕೆ ಕಾರಣ ಆಗಿದೆ.

ವಿಜಯ್ ಅವರು ತಮ್ಮ ಪಕ್ಷವನ್ನು ರಾಜ್ಯದ ಮೂಲೆ ಮೂಲೆಗೂ ತಲುಪಿಸಲು ಭಾರಿ ತಯಾರಿ ನಡೆಸುತ್ತಿದ್ದರು. ಆದರೆ, ನಾಮಪತ್ರ ತಿರಸ್ಕೃತಗೊಂಡಿರುವುದು ಕಾರ್ಯಕರ್ತರಲ್ಲಿ ಮತ್ತು ವಿಜಯ್ ಅಭಿಮಾನಿಗಳಲ್ಲಿ ಭಾರಿ ನಿರಾಸೆ ಮೂಡಿಸಿದೆ. ಇದು ಪಕ್ಷದ ಸಿದ್ಧತೆಯ ಮೇಲೆ ಕೆಲವು ಪ್ರಶ್ನೆಗಳನ್ನು ಎತ್ತಿದೆ. ತಮಿಳುನಾಡಿನ ಎಲ್ಲಾ 234 ವಿಧಾನಸಭಾ ಕ್ಷೇತ್ರಗಳಿಗೆ ಏಪ್ರಿಲ್ 23 ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದೆ. ಮೇ 4 ರಂದು ಫಲಿತಾಶ ಹೊರ ಬೀಳಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja