Dailyhunt Logo
  • Light mode
    Follow system
    Dark mode
    • Play Story
    • App Story
ACTRESS RAKSHITHA : ಅಪಪ್ರಚಾರಕ್ಕೆ ಕಿವಿಗೊಡಬೇಡಿ - ತಪ್ಪದೇ ಟಾಕ್ಸಿಕ್ ನೋಡಿ ಎಂದ ರಕ್ಷಿತಾ!

ACTRESS RAKSHITHA : ಅಪಪ್ರಚಾರಕ್ಕೆ ಕಿವಿಗೊಡಬೇಡಿ - ತಪ್ಪದೇ ಟಾಕ್ಸಿಕ್ ನೋಡಿ ಎಂದ ರಕ್ಷಿತಾ!

Navasamaja.com 1 week ago

ಬೆಂಗಳೂರು : ರಾಕಿಂಗ್ ಸ್ಟಾರ್ ಯಶ್ ( Yash ) ಅಭಿನಯದ ಬಹುನಿರೀಕ್ಷಿತ 'ಟಾಕ್ಸಿಕ್' (Toxic )ಸಿನಿಮಾ ಬಿಡುಗಡೆಯಾಗಿ ಚಿತ್ರಮಂದಿರಗಳಲ್ಲಿ ಪ್ರದರ್ಶನ ಕಾಣುತ್ತಿದ್ದು, ನಟಿ ರಕ್ಷಿತಾ ಪ್ರೇಮ್ ( Actress Rakshitha ) ಚಿತ್ರ ವೀಕ್ಷಿಸಿ ಅತ್ಯುತ್ತಮ ಪಾಸಿಟಿವ್ ರಿವ್ಯೂ ನೀಡಿದ್ದಾರೆ.

ಸಿನಿಮಾ ವೀಕ್ಷಿಸಿದ ಬಳಿಕ ಸಾಮಾಜಿಕ ಜಾಲತಾಣದಲ್ಲಿ ವೀಡಿಯೋ ಹಂಚಿಕೊಂಡಿರುವ ಅವರು, ಚಿತ್ರದ ಮೇಕಿಂಗ್ ಹಾಗೂ ಯಶ್ ಅವರ ಅಭಿನಯವನ್ನು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿರುವ ನೆಗಟಿವ್ ರಿವ್ಯೂಗಳು ಹಾಗೂ ಅಪಪ್ರಚಾರಗಳಿಗೆ ಕಿವಿ ಕೊಡಬೇಡಿ ಎಂದು ರಕ್ಷಿತಾ ಪ್ರೇಮ್ ಅಭಿಮಾನಿಗಳು ಹಾಗೂ ಪ್ರೇಕ್ಷಕರಲ್ಲಿ ವಿನಂತಿಸಿದ್ದಾರೆ. ಸಾಮಾಜಿಕ ಮಾಧ್ಯಮದಲ್ಲಿ ಹರಡುವ ಟ್ರೋಲ್ ಹಾಗೂ ನಕಾರಾತ್ಮಕ ಅಭಿಪ್ರಾಯಗಳನ್ನು ನಂಬದೆ, ಪ್ರತಿಯೊಬ್ಬರೂ ಚಿತ್ರಮಂದಿರಕ್ಕೆ ತೆರಳಿ ಸ್ವತಃ ಸಿನಿಮಾ ನೋಡಿ ಅನುಭವಿಸಬೇಕು ಎಂದು ಪ್ರೇಕ್ಷಕರಿಗೆ ಸಲಹೆ ನೀಡಿದ್ದಾರೆ.

ಸಿನಿಮಾದ ತಾಂತ್ರಿಕ ಅಂಶಗಳು, ನಿರ್ದೇಶನ ಹಾಗೂ ಹಿನ್ನೆಲೆ ಸಂಗೀತ ಅತ್ಯುತ್ತಮವಾಗಿ ಮೂಡಿಬಂದಿದೆ ಎಂದಿದ್ದಾರೆ. ಚಿತ್ರತಂಡದ ಶ್ರಮ ಹಾಗೂ ಭಾರತೀಯ ಚಿತ್ರರಂಗದಲ್ಲಿ 'ಟಾಕ್ಸಿಕ್' ಸೃಷ್ಟಿಸಿರುವ ಹೊಸ ಅಲೆಯನ್ನು ಕೊಂಡಾಡಿರುವ ಅವರು, ಪ್ರೇಕ್ಷಕರು ಚಿತ್ರಮಂದಿರದಲ್ಲೇ ಬಿಗ್ ಸ್ಕ್ರೀನ್ ಅನುಭವ ಪಡೆಯಬೇಕು ಎಂದು ಹೇಳಿದ್ದಾರೆ.

ರಕ್ಷಿತಾ ಅವರ ಈ ಇನ್‌ಸ್ಟಾಗ್ರಾಮ್ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದ್ದು, ಯಶ್ ಅಭಿಮಾನಿಗಳಿಂದ ಭಾರೀ ಬೆಂಬಲ ವ್ಯಕ್ತವಾಗಿದೆ. ನಟಿಯ ಈ ಪಾಸಿಟಿವ್ ಮಾತುಗಳು ಚಿತ್ರಕ್ಕೆ ಇನ್ನಷ್ಟು ಮೆರಗು ತಂದಿದ್ದು, ಚಿತ್ರಮಂದಿರಗಳತ್ತ ಪ್ರೇಕ್ಷಕರನ್ನು ಸೆಳೆಯಲು ಹೊಸ ಉತ್ಸಾಹ ನೀಡಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja