Dailyhunt Logo
  • Light mode
    Follow system
    Dark mode
    • Play Story
    • App Story
AMERICA : ಹುವಾಂಗ್ ರಾಜೀನಾಮೆ ಬೆನ್ನಲ್ಲೇ ಎನ್​​​​​​​​​​​​​​ವೀಡಿಯಾಗೆ ತಾತ್ಕಾಲಿಕ ಮುಖ್ಯಸ್ಥೆ ನೇಮಕ

AMERICA : ಹುವಾಂಗ್ ರಾಜೀನಾಮೆ ಬೆನ್ನಲ್ಲೇ ಎನ್​​​​​​​​​​​​​​ವೀಡಿಯಾಗೆ ತಾತ್ಕಾಲಿಕ ಮುಖ್ಯಸ್ಥೆ ನೇಮಕ

Navasamaja.com 6 hrs ago

ಅಮೆರಿಕ : ವಿವಾಹೇತರ ಸಂಬಂಧ ಹಾಗೂ ಶಂಕಿತ ಚೀನಾ ಗೂಢಚಾರಿಯೊಂದಿಗಿನ ಸಂಪರ್ಕದ ವಿವಾದದ ಹಿನ್ನೆಲೆಯಲ್ಲಿ ಜೆನ್ಸನ್ ಹುವಾಂಗ್ (Jensen huang) ಅವರು ಎನ್‌ವಿಡಿಯಾ (NVIDIA) ಮುಖ್ಯ ಕಾರ್ಯನಿರ್ವಾಹಕ ಹುದ್ದೆಗೆ ರಾಜೀನಾಮೆ (Resignation) ನೀಡಿದ್ದಾರೆ.

ಅವರ ಸ್ಥಾನಕ್ಕೆ ಕಂಪನಿಯ ಪ್ರಸ್ತುತ ಮುಖ್ಯ ಹಣಕಾಸು ಅಧಿಕಾರಿ ಕೋಲೆಟ್ ಕ್ರೆಸ್ (Colette Kress) ಅವರನ್ನು ತಾತ್ಕಾಲಿಕ ಸಿಇಒ ಆಗಿ ನೇಮಿಸಲಾಗಿದೆ. ಶಾಶ್ವತ ಉತ್ತರಾಧಿಕಾರಿ ಆಯ್ಕೆಯಾಗುವವರೆಗೂ ಅವರು ಈ ಜವಾಬ್ದಾರಿ ನಿರ್ವಹಿಸಲಿದ್ದಾರೆ. ಇದರ ಜೊತೆಗೆ ಕಾರ್ಯನಿರ್ವಾಹಕ ಉಪಾಧ್ಯಕ್ಷೆ ಮತ್ತು ಸಿಎಫ್‌ಒ ಹುದ್ದೆಯಲ್ಲೂ ಅವರು ಮುಂದುವರಿಯಲಿದ್ದಾರೆ.

ಕ್ರೆಸ್ ಅವರು 2013ರಲ್ಲಿ ಎನ್‌ವಿಡಿಯಾ ಸೇರಿದ್ದು, ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲ ಕಂಪನಿಯ ಹಣಕಾಸು ವಿಭಾಗದ ನೇತೃತ್ವ ವಹಿಸಿದ್ದಾರೆ. ಎನ್‌ವಿಡಿಯಾ ಸೇರುವ ಮೊದಲು ಸುಮಾರು 25 ವರ್ಷಗಳ ಕಾಲ ಪ್ರಮುಖ ತಂತ್ರಜ್ಞಾನ ಸಂಸ್ಥೆಗಳಲ್ಲಿ ಹಣಕಾಸು ಹುದ್ದೆಗಳಲ್ಲಿ ಕೆಲಸ ಮಾಡಿದ್ದರು. ಸಿಸ್ಕೋದಲ್ಲಿ ಹಿರಿಯ ಉಪಾಧ್ಯಕ್ಷೆ ಮತ್ತು ಸಿಎಫ್‌ಒ ಆಗಿ, ಮೈಕ್ರೋಸಾಫ್ಟ್‌ನಲ್ಲಿ ಕಾರ್ಪೊರೇಟ್ ಉಪಾಧ್ಯಕ್ಷೆಯಾಗಿ ಸೇವೆ ಸಲ್ಲಿಸಿದ್ದರು. ಎಸ್‌ಎಂಯು ಕಾಕ್ಸ್ ಸ್ಕೂಲ್ ಆಫ್ ಬ್ಯುಸಿನೆಸ್‌ನಿಂದ ಹಣಕಾಸು ವಿಷಯದಲ್ಲಿ ಎಂಬಿಎ ಪದವಿ ಪಡೆದಿದ್ದಾರೆ.

ಕಂಪನಿಯ ಅಸಾಧಾರಣ ಬೆಳವಣಿಗೆಯಲ್ಲಿ ಕ್ರೆಸ್ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದು ಎನ್‌ವಿಡಿಯಾ ಮಂಡಳಿ ಅಧ್ಯಕ್ಷ ಹಾರ್ವೆ ಜೋನ್ಸ್ ಹೇಳಿದ್ದಾರೆ. ಅವರಿಗೆ ವ್ಯವಹಾರ, ಗ್ರಾಹಕರು, ಕಾರ್ಯಾಚರಣೆ ಮತ್ತು ಆರ್ಥಿಕ ಸ್ಥಿತಿಯ ಬಗ್ಗೆ ಆಳವಾದ ತಿಳಿವಳಿಕೆ ಇದೆ ಎಂದು ಮಂಡಳಿ ವಿಶ್ವಾಸ ವ್ಯಕ್ತಪಡಿಸಿದೆ. ಅಧಿಕಾರ ವಹಿಸಿಕೊಂಡ ಕ್ರೆಸ್, ಕಳೆದ 33 ವರ್ಷಗಳಲ್ಲಿ ಜೆನ್ಸನ್ ನಿರ್ಮಿಸಿದ ಬಲವಾದ ಅಡಿಪಾಯದ ಮೇಲೆ ಕಂಪನಿಯನ್ನು ಮುನ್ನಡೆಸುವುದಾಗಿ, ಗ್ರಾಹಕರು, ಪಾಲುದಾರರು ಮತ್ತು ಷೇರುದಾರರ ಸೇವೆಗೆ ಆದ್ಯತೆ ನೀಡುವುದಾಗಿ ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja