Dailyhunt
AMIT SHAH: ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ, ಅಮಿತ್‌ ಶಾ ಚುನಾವಣಾ ರ‍್ಯಾಲಿ ಕ್ಯಾನ್ಸಲ್‌!

AMIT SHAH: ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ, ಅಮಿತ್‌ ಶಾ ಚುನಾವಣಾ ರ‍್ಯಾಲಿ ಕ್ಯಾನ್ಸಲ್‌!

Navasamaja.com 2 weeks ago

ಗೊಲಕ್‌ಗಂಜ್: ಅಸ್ಸಾಂ ವಿಧಾನಸಭೆ ಚುನಾವಣೆಯ ಪ್ರಚಾರಕ್ಕಾಗಿ ಗೊಲಕ್‌ಗಂಜ್‌ಗೆ ಆಗಮಿಸಬೇಕಿದ್ದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪ್ರವಾಸದಲ್ಲಿ ಕೊನೆಯ ಕ್ಷಣದಲ್ಲಿ ವ್ಯತ್ಯಯ ಉಂಟಾಗಿದೆ. ಅಮಿತ್ ಶಾ (Amit Shah) ಅವರು ಪ್ರಯಾಣಿಸಬೇಕಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವರು ಶುಕ್ರವಾರದ ರ‍್ಯಾಲಿಯನ್ನ ರದ್ದು ಮಾಡಲಾಗಿದೆ.

ಮೊಬೈಲ್‌ ಮೂಲಕ ಜನರ ಜೊತೆ ಅಮಿತ್‌ ಶಾ ಮಾತು
ಧುಬ್ರಿ ಜಿಲ್ಲೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಪರವಾಗಿ ಆಯೋಜಿಸಲಾಗಿದ್ದ 'ವಿಜಯ ಸಂಕಲ್ಪ ಯಾತ್ರೆ'ಯ ಬೃಹತ್ ಸಮಾವೇಶದಲ್ಲಿ ಅಮಿತ್ ಶಾ ಪಾಲ್ಗೊಳ್ಳಬೇಕಿತ್ತು. ಕೊನೆಯ ಕ್ಷಣದಲ್ಲಿ ಭೇಟಿ ರದ್ದು ಮಾಡಲಾಗಿದೆ. ಆದರೆ, ತಮ್ಮನ್ನು ನೋಡಲು ಸಾವಿರಾರು ಸಂಖ್ಯೆಯಲ್ಲಿ ನೆರೆದಿದ್ದ ಅಭಿಮಾನಿಗಳನ್ನು ನಿರಾಸೆಗೊಳಿಸದ ಶಾ, ಮೊಬೈಲ್ ಫೋನ್ ಕರೆ ಮೂಲಕವೇ ಜನರನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಅಲ್ಲದೇ, ತಮಗೆ ಬೆಂಬಲ ನೀಡಿದ ಜನರಿಗೆ ಧನ್ಯವಾದ ಅರ್ಪಿಸಿದರು. ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಬಲವಾಗಿ ಬೆಂಬಲಿಸಬೇಕು ಎಂದು ಮನವಿ ಮಾಡಿದ್ದಲ್ಲದೆ, ಬಿಜೆಪಿ ಅಭ್ಯರ್ಥಿ ಅಶ್ವಿನಿ ರಾಯ್ ಸರ್ಕಾರ್ ಅವರು ಈ ಭಾಗದ ಸಮಸ್ಯೆಗಳನ್ನು ಅರಿತಿರುವ ಅನುಭವಿ ನಾಯಕರಾಗಿದ್ದು, ಅವರನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸುವಂತೆ ಮತದಾರರಲ್ಲಿ ವಿನಂತಿ ಮಾಡಿದ್ದಾರೆ.

ಅಮಿತ್ ಶಾ ಅವರು ಸದ್ಯ ಎರಡು ದಿನಗಳ ಅಸ್ಸಾಂ ಪ್ರವಾಸದಲ್ಲಿದ್ದು, ಮೊದಲ ದಿನದ ಎಲ್ಲಾ ಕಾರ್ಯಕ್ರಮಗಳು ಸುಗಮವಾಗಿ ಜರುಗಿದ್ದವು. ಎರಡನೇ ದಿನದ ಪ್ರವಾಸದ ಭಾಗವಾಗಿ ಗೊಲಕ್‌ಗಂಜ್ ರ‍್ಯಾಲಿಯಲ್ಲಿ ಅವರು ಭಾಗವಹಿಸಬೇಕಿತ್ತು. ಸಚಿವರ ಭೇಟಿ ರದ್ದಾದರೂ ಸಹ ಸ್ಥಳೀಯ ಬಿಜೆಪಿ ನಾಯಕರು ಪ್ರಚಾರ ಕಾರ್ಯವನ್ನು ಮುಂದುವರಿಸಿದ್ದು, ಅಶ್ವಿನಿ ರಾಯ್ ಸರ್ಕಾರ್ ಅವರ ಗೆಲುವಿನಿಂದ ಈ ಭಾಗದಲ್ಲಿ ಅಭಿವೃದ್ಧಿ ವೇಗ ಪಡೆದುಕೊಳ್ಳಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಸ್ಸಾಂ ರಣಕಣದಲ್ಲಿ ರಾಹುಲ್‌ ಗಾಂಧಿ ಮಹತ್ವದ ಘೋಷಣೆ

ಅಸ್ಸಾಂ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದೆ. ಕರ್ಬಿ ಆಂಗ್ಲಾಂಗ್‌ನ ದಿಫು ಮತ್ತು ಬೊಕಾಜಾನ್‌ನಲ್ಲಿ ನಡೆದ ಬೃಹತ್ ಚುನಾವಣಾ ರ್ಯಾಲಿಯಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul gandhi) ಅವರು ಗುಡುಗಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಮತ್ತು ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಪ್ರಚಾರಕ್ಕೆ ಹೊಸ ವೇಗ ನೀಡಿದ್ದಾರೆ.

ರಾಹುಲ್ ಗಾಂಧಿ ಅಸ್ಸಾಂ ರಾಜ್ಯವನ್ನು ವಿವಿಧ ಧರ್ಮ, ಜಾತಿ ಮತ್ತು ಸಿದ್ಧಾಂತಗಳ ಜನರು ಸೌಹಾರ್ದತೆಯಿಂದ ಬಾಳುವ ಒಂದು ಹೂವಿನ ಗುಚ್ಛ ಎಂದು ಬಣ್ಣಿಸಿದರು. ಅಧಿಕಾರವು ಜನರ ಕೈಯಲ್ಲಿರಬೇಕು ಮತ್ತು ಪ್ರತಿಯೊಬ್ಬರಿಗೂ ಆಡಳಿತದಲ್ಲಿ ಸಮಾನ ಪಾಲು ಇರಬೇಕು ಎಂಬುದು ಕಾಂಗ್ರೆಸ್‌ನ ಮೂಲ ಮಂತ್ರ ಎಂದು ರಾಹುಲ್‌ ಪ್ರತಿಪಾದಿಸಿದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja