Dailyhunt
ASHAKIRANA SCHEME : ಮನೆ ಬಾಗಿಲಿಗೆ ನೇತ್ರ ತಪಾಸಣೆ ಸೇವೆ ನೀಡುವ 'ಆಶಾಕಿರಣ' ಯೋಜನೆಗೆ ಚಾಲನೆ

ASHAKIRANA SCHEME : ಮನೆ ಬಾಗಿಲಿಗೆ ನೇತ್ರ ತಪಾಸಣೆ ಸೇವೆ ನೀಡುವ 'ಆಶಾಕಿರಣ' ಯೋಜನೆಗೆ ಚಾಲನೆ

Navasamaja.com 2 years ago

ಬೆಂಘಳೂರು : ಇಂದು (ಮಾ.13) ಮನೆ ಬಾಗಿಲಿಗೆ ನೇತ್ರ ತಪಾಸಣೆ(Eye Test) ಸೇವೆ ತಲುಪಿಸುವ 'ಆಶಾಕಿರಣ'(Ashakirana) ಯೋಜನೆಗೆ ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್ ಚಾಲನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಾರಿಗೆ ಸಚಿವ ರಾಮಲಿಂಗರೆಡ್ಡಿ, ಸಿ-ಕ್ಯಾಂಪ್‌ ನಿರ್ದೇಶಕ ಡಾ.ತಸ್ಲೀಮಾರೀಫ್‌ ಸಯ್ಯದ್‌, ಆಕ್ಟ್‌ ಸಂಸ್ಥೆಯ ಸದಸ್ಯ ಸಂದೀಪ್‌ ಸಿಂಘಲ್, ಕ್ರಿಶಾ ಮಾಥುರ್‌ ಉಪಸ್ಥಿತರಿದ್ದರು.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಿನೇಶ್ ಗುಂಡೂರಾವ್, ಜನರಲ್ಲಿ ಜಾಗೃತಿ ಮೂಡಿಸುವ
ಸಲುವಾಗಿ, ಮತ್ತು ಅವರ ಮನೆ ಬಾಗಿಲಿಗೇ ನೇತ್ರ ಅರೋ ಗ್ಯ ತಪಾಸಣೆ ಮತ್ತು ಆರೈಕೆಯನ್ನು ತಲುಪಿಸುವ
ಉದ್ದೇಶದಿಂದ ಈ ಆಶಾಕಿರಣ ಯೋಜನೆಯನ್ನು ರಾಜ್ಯಾದ್ಯಂತ ಪ್ರಾರಂಭಿಸಲಾಗಿದೆ. ಈ ಪ್ರಯತ್ನವನ್ನು ಇನ್ನಷ್ಟು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ, ಆರೋಗ್ಯ ಇಲಾಖೆಯು ನವೀನ, ಡಿಜಿಟಲ್ ಆರೋಗ್ಯ ತಂತ್ರಜ್ಞಾನಗಳನ್ನು ಬಳಸಿಕೊಂಡು ಸಮಗ್ರ ಕಣ್ಣಿನ ಆರೈಕೆ ಕಾರ್ಯಕ್ರಮವನ್ನು ಕಾರ್ಯಗತಗೊಳಿಸಲು, ಕರ್ನಾಟಕ ಸರ್ಕಾರದ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು, ಸಿ-ಕ್ಯಾಂಪ್ ಮತ್ತುಆಕ್ಟ್ ಫಾರ್ ಹೆಲ್ತ್‌ನೊಂದಿಗೆ ಸಹಕರಿಸುತ್ತಿದೆ. ಈ ವಿಸ್ತರಣೆಯ ಭಾಗವಾಗಿ, ಈ ಯೋಜನೆಯನ್ನು ಈಗ ಸಾರಿಗೆ ಇಲಾಖೆಯ ಎಲ್ಲಾ ಉದ್ಯೋಗಿಗಳಿಗೆ ವಿಸ್ತರಿಸಲಾಗುತ್ತಿದೆ," ಎಂದರು.

ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳು, ತಾಲೂಕು ಆಸ್ಪತ್ರೆಗಳು ಮತ್ತು ಬಸ್
ಡಿಪೋಗಳಲ್ಲಿ ಕಣ್ಣಿನ ವಕ್ರೀಕಾರಕ ದೋಷಗಳು ಮತ್ತು ರೆಟಿನೋಪತಿಗಳಂತಹ ಸಮಸ್ಯೆಗಳಿಗೆ ಸುಧಾರಿತ ನೇತ್ರ
ತಪಾಸಣೆ ನಡೆಸಲು ಸಜ್ಜುಗೊ ಳಿಸಲಾಗುತ್ತಿದೆ. ಈ ಉಚಿತ ತಪಾಸಣೆಗಳ ಜೊತೆಗೆ, ಸಾರ್ವಜನಿಕರಿಗೆ ಉಚಿತ
ಕನ್ನಡಕಗಳನ್ನೂ ಸಹ ವಿತರಿಸಗಾಗುವುದು. ರಾಜ್ಯದಲ್ಲಿ ಅಂಧತ್ವವನ್ನು ಪೂರ್ಣತಃ ನಿರ್ಮೂಲನೆ ಮಾಡುವ ಉದ್ದೇಶದಿಂದ, ಈಗಾಗಲೇ 1 ಕೋಟಿಗೂ ಹೆಚ್ಚು ವ್ಯಕ್ತಿಗಳು ಕಣ್ಣಿನ ತಪಾಸಣೆಗೆ ಒಳಗಾಗಿದ್ದಾರೆ, 39,000 ಉಚಿತ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯಿಂದ ಪ್ರಯೋಜನ ಪಡೆಯುತ್ತಿದ್ದಾರೆ, ಮತ್ತು 2.45 ಲಕ್ಷ ಜನರು ಆಶಾಕಿರಣ ಕಾರ್ಯಕ್ರಮದ ಅಡಿಯಲ್ಲಿಉಚಿತ ಕನ್ನಡಕದಿಂದ ಪ್ರಯೋಜನವನ್ನು ಪಡೆಯುತ್ತಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ದಿನೇಶ್ ಗುಂಡೂರಾವ್‌ ಸಚಿವ ರಾಮಲಿಂಗ ರೆಡ್ಡಿ ಅವರ ಕಣ್ಣನ್ನು ಪರೀಕ್ಷಿಸಿದ ಪ್ರಸಂಗವೂ ನಡೆಯಿತು.

Dailyhunt
Disclaimer: This content has not been generated, created or edited by Dailyhunt. Publisher: Navasamaja