Dailyhunt Logo
  • Light mode
    Follow system
    Dark mode
    • Play Story
    • App Story
B NAGENDRA: ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುವೆ: ರೆಡ್ಡಿ, ರಾಮುಲು ವಿರುದ್ಧ ತೊಡೆ ತಟ್ಟಿದ ನಾಗೇಂದ್ರ-VIDEO

B NAGENDRA: ಶಾಸಕ ಸ್ಥಾನಕ್ಕೂ ರಾಜೀನಾಮೆ ಕೊಡುವೆ: ರೆಡ್ಡಿ, ರಾಮುಲು ವಿರುದ್ಧ ತೊಡೆ ತಟ್ಟಿದ ನಾಗೇಂದ್ರ-VIDEO

Navasamaja.com 1 week ago

ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಅವ್ಯವಹಾರದ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ (B Nagendra) ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ (Resignation) ನೀಡುವುದಾಗಿ ಪ್ರಕಟಿಸಿದ್ದಾರೆ. ಬೆಂಗಳೂರಿನ (Bengaluru) ವಿಧಾನಸೌಧದಲ್ಲಿ ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಈ ನಿರ್ಧಾರವನ್ನು ಅಧಿಕೃತವಾಗಿ ತಿಳಿಸಿದರು.

ಈ ಬಗ್ಗೆ ಮಾತನಾಡುವಾಗ ಭಾವುಕರಾದ ನಾಗೇಂದ್ರ ಅವರು ಕಣ್ಣೀರು ಹಾಕಿದರು. ತಮ್ಮ ರಾಜಕೀಯ ನಡೆಯಿಂದ ಪಕ್ಷಕ್ಕೆ ಯಾವುದೇ ರೀತಿಯ ಮುಜುಗರವಾಗಬಾರದು ಎಂಬ ಕಾರಣಕ್ಕೆ ತಾವೇ ಖುದ್ದಾಗಿ ಈ ತೀರ್ಮಾನ ಕೈಗೊಂಡಿರುವುದಾಗಿ ಸ್ಪಷ್ಟಪಡಿಸಿದರು. ಸಚಿವ ಸ್ಥಾನ ಮಾತ್ರವಲ್ಲದೆ, ಅಗತ್ಯಬಿದ್ದರೆ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲು ಸಿದ್ಧನಿದ್ದೇನೆ ಎಂದು ಹೇಳಿದರು. ಅಲ್ಲದೆ ಜನಾರ್ದನ ರೆಡ್ಡಿ ಮತ್ತು ರಾಮುಲುಗೆ ಬಹಿರಂಗವಾಗಿ ಸವಾಲು ಹಾಕಿ, ಜನರೇ ತೀರ್ಪು ನೀಡುವ ಜನತಾ ನ್ಯಾಯಾಲಯದ ಮುಂದೆ ಬಂದು ಇದನ್ನು ಎದುರಿಸೋಣ ಎಂದು ಸವಾಲು ಹಾಕಿದ್ದಾರೆ.

ಬಿಜೆಪಿಯವರು ಮನುಸ್ಮೃತಿಯ ಸಿದ್ಧಾಂತದ ಮೇಲೆ ನಡೆದುಕೊಳ್ಳುತ್ತಿದ್ದಾರೆ, ಆದರೆ ಸಂವಿಧಾನವೇ ನಮ್ಮೆಲ್ಲರಿಗೂ ರಕ್ಷಣೆಯಾಗಿದೆ ಎಂಬ ನಂಬಿಕೆ ತಮಗಿದೆ ಎಂದು ಹೇಳಿದರು. ದಲಿತರು, ಬಡವರು ಮತ್ತು ಆದಿವಾಸಿ ಸಮುದಾಯದವರು ಬದುಕಬಾರದು ಎಂಬ ಮನೋಭಾವ ಬಿಜೆಪಿ ನಾಯಕರಲ್ಲಿದೆ ಎಂದು ಆರೋಪಿಸಿದರು. 2024ರಲ್ಲಿಯೇ ಒಮ್ಮೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೆ, ಯಾವುದೇ ಕಾರಣವಿಲ್ಲದೆ ನನ್ನನ್ನು ಬಂಧಿಸಿ ಮೂರು ತಿಂಗಳು ಜೈಲಿನಲ್ಲಿಡಲಾಗಿತ್ತು, ನಂತರ ನ್ಯಾಯಾಲಯದಿಂದ ಜಾಮೀನು ಪಡೆದು ಹೊರಬಂದಿದ್ದೇನೆ. ಮನುವಾದಿಗಳ ತಂತ್ರಕ್ಕೆ ನಾನು ಮಣಿಯುವುದಿಲ್ಲ, ನಾನು ತಲೆಬಾಗುವುದು ಸಂವಿಧಾನಕ್ಕೆ ಮಾತ್ರ ಎಂದು ಹೇಳಿದರು.

ಬಿಜೆಪಿ ನಾಯಕರಾದ ಜನಾರ್ದನ ರೆಡ್ಡಿ ಮತ್ತು ಶ್ರೀರಾಮುಲು ಅವರ ಹೆಸರುಗಳನ್ನು ಪ್ರಸ್ತಾಪಿಸಿ ಆಕ್ರೋಶ ವ್ಯಕ್ತಪಡಿಸಿದ ನಾಗೇಂದ್ರ ಅವರು, ಬಳ್ಳಾರಿಯಲ್ಲಿರುವ ಸ್ವಯಂಘೋಷಿತ ನಾಯಕರಿಗೆ ನೇರ ಸವಾಲು ಹಾಕಿದರು. ಧೈರ್ಯವಿದ್ದರೆ ಅಖಾಡಕ್ಕೆ ಬನ್ನಿ, ಜನರ ಮುಂದೆ ನಿಂತು ಮಾತನಾಡೋಣ ಎಂದು ಹೇಳಿದರು. ಬಿಜೆಪಿ ನಾಯಕರಿಗೆ ನನ್ನ ಸವಾಲು ಇದೆ, ಶಕ್ತಿ ಇದ್ದರೆ ನೇರವಾಗಿ ನಮ್ಮ ಪಕ್ಷವನ್ನು ಎದುರಿಸಿ.

ಇಡಿ ಮತ್ತು ಸಿಬಿಐ ಮೂಲಕ ಪ್ರಕರಣ ದಾಖಲಿಸುವುದು, ಬೆದರಿಕೆ ಹಾಕುವುದು ಮಾಡುತ್ತಿದ್ದಾರೆ, ಇಂತಹ ಟೊಳ್ಳು ಬೆದರಿಕೆಗಳಿಗೆ ನಾನು ಹೆದರುವುದಿಲ್ಲ ಎಂದರು. ರೆಡ್ಡಿ ಮತ್ತು ರಾಮುಲು ಅವರೇ ಬನ್ನಿ, ಜನತಾ ನ್ಯಾಯಾಲಯಕ್ಕೆ ಹೋಗೋಣ ಎಂದು ಹೇಳಿದ ಅವರು, ಬಳ್ಳಾರಿಯಲ್ಲಿ ನೀವು ಜನರಿಂದ ತಿರಸ್ಕೃತಗೊಂಡವರು, ಚಲಾವಣೆಯಲ್ಲಿಲ್ಲದ ನಾಣ್ಯಗಳಿದ್ದಂತೆ ಎಂದು ವಾಗ್ದಾಳಿ ನಡೆಸಿದರು. ಅಂತಿಮವಾಗಿ ಈ ಪ್ರಕರಣದಿಂದ ಆರೋಪ ಮುಕ್ತನಾಗಿ ಹೊರಬರುತ್ತೇನೆ ಎಂಬ ಸಂಪೂರ್ಣ ವಿಶ್ವಾಸ ತಮಗಿದೆ ಎಂದು ಅವರು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja