Dailyhunt Logo
  • Light mode
    Follow system
    Dark mode
    • Play Story
    • App Story
BANDIPURA : ಹುಲಿಯಲ್ಲ, ಸಿಂಹವಲ್ಲ - ಇನ್ಮುಂದೆ ದಿಗಿಲು ಬೀಳಿಸಲಿದೆ ಬಂಡಿಪುರ ಸಫಾರಿ ಶುಲ್ಕ!

BANDIPURA : ಹುಲಿಯಲ್ಲ, ಸಿಂಹವಲ್ಲ - ಇನ್ಮುಂದೆ ದಿಗಿಲು ಬೀಳಿಸಲಿದೆ ಬಂಡಿಪುರ ಸಫಾರಿ ಶುಲ್ಕ!

Navasamaja.com 2 days ago

ಗುಂಡ್ಲುಪೇಟೆ (ಚಾಮರಾಜನಗರ): ಬಂಡೀಪುರ (Bandipura ) ರಾಷ್ಟ್ರೀಯ ಉದ್ಯಾನವನದ ಸಫಾರಿ (Safari ) ಶುಲ್ಕದಲ್ಲಿ ಶೇ. 40 ರಷ್ಟು ಭಾರಿ ಏರಿಕೆ ಮಾಡಲಾಗಿದ್ದು, ಪರಿಷ್ಕೃತ ದರಗಳು ಸೆಪ್ಟೆಂಬರ್ 1 ರಿಂದ ಜಾರಿಗೆ ಬಂದಿವೆ.

ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕುಮಾರ್ ಪುಷ್ಕರ್ ಅವರ ಆದೇಶದಂತೆ ಸಫಾರಿ ವೀಕ್ಷಣೆ, ವಾಹನ ಪಾರ್ಕಿಂಗ್ ಮತ್ತು ಕ್ಯಾಮೆರಾ ಕೊಂಡೊಯ್ಯುವ ಶುಲ್ಕಗಳನ್ನು ಪರಿಷ್ಕರಿಸಲಾಗಿದೆ.

ಸಫಾರಿ ಕೌಂಟರ್ ಅನ್ನು ಬಂಡೀಪುರದಿಂದ ಮೇಲುಕಾಮನಹಳ್ಳಿಗೆ ಸ್ಥಳಾಂತರಿಸಲಾಗಿದೆ. ಮೇಲುಕಾಮನಹಳ್ಳಿಯಿಂದ ಪ್ರಯಾಣಿಸುವ ಸಮಯವನ್ನು ಪರಿಗಣಿಸಿ ಸಫಾರಿ ವೀಕ್ಷಣೆಯ ಸಮಯವನ್ನು ಈ ಹಿಂದೆ 2.30 ಗಂಟೆಗೆ ನಿಗದಿಪಡಿಸಲಾಗಿತ್ತು. ಪ್ರವಾಸಿಗರ ಅನುಕೂಲಕ್ಕಾಗಿ ಈಗ ಸಫಾರಿ ಅವಧಿಯನ್ನು ಅರ್ಧ ಗಂಟೆ ಹೆಚ್ಚಿಸಿ, ಒಟ್ಟು 3 ಗಂಟೆಗಳಿಗೆ ವಿಸ್ತರಿಸಲಾಗಿದೆ.

ಇಲಾಖೆಯ ಬಸ್ ಸಫಾರಿಗೆ ಹಿರಿಯರಿಗೆ ₹1000 (ಹಿಂದೆ ₹650) ಹಾಗೂ ಮಕ್ಕಳಿಗೆ ₹500 (ಹಿಂದೆ ₹325) ದರ ನಿಗದಿ ಮಾಡಲಾಗಿದೆ. ಜೀಪ್ ಸಫಾರಿಗೆ ಹಿರಿಯರಿಗೆ ₹1,500 (ಹಿಂದೆ ₹1,100) ಮತ್ತು ಮಕ್ಕಳಿಗೆ ₹750 (ಹಿಂದೆ ₹550) ದರ ಜಾರಿಗೆ ಬಂದಿದೆ.

ಉಳಿದಂತೆ 200 ಎಂಎಂ ಗಿಂತ ಹೆಚ್ಚಿನ ಲೆನ್ಸ್ ಕ್ಯಾಮೆರಾಗಳಿಗೆ ₹1,500 ಹಾಗೂ ಜಿಎಸ್‌ಟಿ ವಿಧಿಸಲಾಗಿದೆ. ಕಾರು ಪಾರ್ಕಿಂಗ್‌ಗೆ ₹100, ಲಘು ವಾಹನಗಳಿಗೆ ₹200 ಮತ್ತು ಬಸ್‌ಗಳಿಗೆ ₹300 ದರ ನಿಗದಿಪಡಿಸಲಾಗಿದೆ. ಉಚಿತ ಪ್ರವೇಶಕ್ಕೆ ಇದ್ದ ಮಕ್ಕಳ ವಯೋಮಿತಿಯನ್ನು 5 ವರ್ಷದಿಂದ 3 ವರ್ಷಕ್ಕೆ ಇಳಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja