Dailyhunt
BANGLADESH : ಅಕ್ರಮ ವಲಸಿಗರ ಹಸ್ತಾಂತರಕ್ಕೆ ಬಾಂಗ್ಲಾದೇಶ ಅಸಹಕಾರ -1,000 ಬಾರಿ ಪತ್ರ ಬರೆದರೂ ಸ್ಪಂದಿಸದ ಢಾಕಾ

BANGLADESH : ಅಕ್ರಮ ವಲಸಿಗರ ಹಸ್ತಾಂತರಕ್ಕೆ ಬಾಂಗ್ಲಾದೇಶ ಅಸಹಕಾರ -1,000 ಬಾರಿ ಪತ್ರ ಬರೆದರೂ ಸ್ಪಂದಿಸದ ಢಾಕಾ

Navasamaja.com 1 week ago

ವದೆಹಲಿ: ಅಕ್ರಮ ವಲಸಿಗರನ್ನು(Illegal immigrants) ವಾಪಸ್ ಕಳುಹಿಸುವ ವಿಚಾರದಲ್ಲಿ ಬಾಂಗ್ಲಾದೇಶವು(Bangladesh) ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ ಎಂದು ಭಾರತ(India) ಅಸಮಾಧಾನ ವ್ಯಕ್ತಪಡಿಸಿದೆ.
ಸೆಪ್ಟೆಂಬರ್ 2020 ರಿಂದ ಅಕ್ರಮ ಬಾಂಗ್ಲಾದೇಶಿ ವಲಸಿಗರನ್ನು ವಾಪಸ್ ಕಳುಹಿಸುವ (Repatriation) ವಿಷಯವಾಗಿ ಭಾರತವು 1,000ಕ್ಕೂ ಹೆಚ್ಚು ರಾಜತಾಂತ್ರಿಕ ಪತ್ರಗಳನ್ನು ಮತ್ತು 456 ನೆನಪೋಲೆಗಳನ್ನು ಢಾಕಾಗೆ ಕಳುಹಿಸಿದ್ದರೂ, ಯಾವುದೇ "ಪ್ರತಿಕ್ರಿಯೆ" ಬಂದಿಲ್ಲ ಎಂದು ರಾಜತಾಂತ್ರಿಕ ದಾಖಲೆಯೊಂದು ಬಹಿರಂಗಪಡಿಸಿದೆ.

ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಹೇಳಿಕೆಯ ವಿರುದ್ಧ ಬಾಂಗ್ಲಾದೇಶ ಪ್ರತಿಭಟಿಸಿದ ಬೆನ್ನಲ್ಲೇ, ಏಪ್ರಿಲ್ 30 ರಂದು ಭಾರತದ ವಿದೇಶಾಂಗ ಸಚಿವಾಲಯವು ಈ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

ರಾಜತಾಂತ್ರಿಕ ಸಂಘರ್ಷದ ಹಿನ್ನೆಲೆ:ಅಸ್ಸಾಂನ ಅಂದಿನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ನೀಡಿದ್ದ ಹೇಳಿಕೆಯೊಂದರಿಂದ ಈ ವಿವಾದ ಆರಂಭವಾಯಿತು. "ನನ್ನ ಸರ್ಕಾರದ ಅವಧಿಯಲ್ಲಿ ಭಾರತೀಯ ಗಡಿ ಭದ್ರತಾ ಸಿಬ್ಬಂದಿ ಅಕ್ರಮ ವಲಸಿಗರನ್ನು ಗಡಿಯ ಮೂಲಕ ವಾಪಸ್ ಬಾಂಗ್ಲಾದೇಶಕ್ಕೆ ತಳ್ಳುತ್ತಿದ್ದಾರೆ" ಎಂದು ಅವರು ಮಾಧ್ಯಮ ಸಂದರ್ಶನದಲ್ಲಿ ಹೇಳಿದ್ದರು.

ಬಾಂಗ್ಲಾದೇಶದ ಪ್ರತಿಭಟನೆ: ಶರ್ಮಾ ಅವರ ಹೇಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಬಾಂಗ್ಲಾದೇಶ ಸರ್ಕಾರವು, ಢಾಕಾದಲ್ಲಿರುವ ಭಾರತೀಯ ರಾಯಭಾರಿಯನ್ನು ಕರೆಸಿಕೊಂಡು ತನ್ನ ಪ್ರತಿಭಟನೆಯನ್ನು ದಾಖಲಿಸಿತು. ಇದಕ್ಕೆ ಪ್ರತಿಯಾಗಿ ಭಾರತವು ಏಪ್ರಿಲ್ 30ರಂದು ಖಾರವಾದ ರಾಜತಾಂತ್ರಿಕ ಟಿಪ್ಪಣಿಯನ್ನು ಕಳುಹಿಸಿ, ಅಕ್ರಮ ವಲಸಿಗರನ್ನು ವಾಪಸ್ ಪಡೆಯುವಲ್ಲಿ ಬಾಂಗ್ಲಾದೇಶದ ವಿಳಂಬ ನೀತಿಯನ್ನು ಎತ್ತಿ ತೋರಿಸಿದೆ.

ಭಾರತದ ವಾದ:
ಭಾರತದ ಪ್ರಕಾರ, ಗಡಿಯುದ್ದಕ್ಕೂ ಅಕ್ರಮವಾಗಿ ಪ್ರವೇಶಿಸಿ ಬಂಧಿತರಾದವರನ್ನು ಬಾಂಗ್ಲಾದೇಶದ ಪ್ರಜೆಗಳೆಂದು ಗುರುತಿಸಲು ಮತ್ತು ಅವರನ್ನು ವಾಪಸ್ ಕಳುಹಿಸಲು (Repatriation) ಬಾಂಗ್ಲಾದೇಶದ ಕಡೆಯಿಂದ ಅಗತ್ಯ ಸಹಕಾರ ಸಿಗುತ್ತಿಲ್ಲ. ಇದು ಗಡಿ ಭದ್ರತೆ ಮತ್ತು ಆಡಳಿತಕ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja