ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ವಾಸಯೋಗ್ಯ ಮನೆ (Homes) ಹುಡುಕುವುದು ಈಗ ಸಾಮಾನ್ಯ ಜನರಿಗೆ ಅಗ್ನಿಪರೀಕ್ಷೆಯಂತಾಗಿದೆ. ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ (Social media) ವ್ಯಕ್ತಿಯೊಬ್ಬರು ಹಂಚಿಕೊಂಡಿರುವ ಮಾಹಿತಿ ನಗರದ ರಿಯಲ್ ಎಸ್ಟೇಟ್ (Real estate) ದರದ ಭೀಕರತೆಯನ್ನು ಅನಾವರಣಗೊಳಿಸಿದೆ.
ಹೌದು ಬೆಂಗಳೂರಲ್ಲಿ ಕೇವಲ ಎರಡು ಬೆಡ್‌ರೂಮ್‌ಗಳಿರುವ (2BHK) ಫ್ಲಾಟ್‌ಗೆ ತಿಂಗಳಿಗೆ 70,000 ರೂಪಾಯಿ ಬಾಡಿಗೆ ಕೇಳುತ್ತಿರುವುದು ಎಲ್ಲರನ್ನೂ ದಬ್ಬಾಳಿಕೆಗೆ ಸಿಲುಕಿಸಿದೆ. ಮೂರು ವರ್ಷಗಳ ಹಿಂದೆ 1.4 ಕೋಟಿ ಬೆಲೆ ಬಾಳುತ್ತಿದ್ದ ಫ್ಲಾಟ್‌ಗಳು ಇಂದು 2 ಕೋಟಿ ಗಡಿ ದಾಟಿವೆ.ಐಟಿ ಕಂಪನಿಗಳಿಗೆ ಹತ್ತಿರವಿದೆ ಎಂಬ ಒಂದೇ ಕಾರಣಕ್ಕೆ, ಮೂಲಭೂತ ಸೌಕರ್ಯಗಳ ಕೊರತೆ ಹಾಗೂ ನೀರಿನ ಸಮಸ್ಯೆಗಳಿದ್ದರೂ ಮನೆ ಮಾಲೀಕರು ಅತಿಯಾದ ದರ ನಿಗದಿಪಡಿಸುತ್ತಿದ್ದಾರೆ. ಹೀಗಾಗಿ ಮಧ್ಯಮ ವರ್ಗದವರು ಹಣ ಉಳಿಸಿ ಸ್ವಂತ ಮನೆ ಖರೀದಿಸುವ ಕನಸು ಕಾಣುವುದು ಕೂಡ ಈ ಗಗನಚುಂಬಿ ಬೆಲೆ ಏರಿಕೆಯಿಂದಾಗಿ ಅಸಾಧ್ಯವೆನಿಸುತ್ತಿದೆ. ಅನೇಕ ಅಪಾರ್ಟ್‌ಮೆಂಟ್‌ಗಳು ರಾಜಕಾಲುವೆಗಳ ಪಕ್ಕದಲ್ಲಿದ್ದರೂ ಮತ್ತು ಟ್ಯಾಂಕರ್ ನೀರಿನ ಅವಲಂಬನೆಯಂತಹ ಗಂಭೀರ ಸಮಸ್ಯೆಗಳನ್ನು ಹೊಂದಿದ್ದರೂ, ವಸತಿ ಬೇಡಿಕೆಯ ಲಾಭ ಪಡೆದು ಇಷ್ಟೊಂದು ದೊಡ್ಡ ಮೊತ್ತದ ಬಾಡಿಗೆ ವಸೂಲಿ ಮಾಡುವುದು ಖಂಡಿತವಾಗಿಯೂ ಸಮಂಜಸವಲ್ಲ ಎಂಬುದು ಸಂಕಷ್ಟಕ್ಕೊಳಗಾದ ನಿವಾಸಿಗಳ ಅಭಿಪ್ರಾಯವಾಗಿದೆ.

