Dailyhunt Logo
  • Light mode
    Follow system
    Dark mode
    • Play Story
    • App Story
BENGALURU: ಮತಾಂತರ ನಿಷೇಧ ಕಾಯ್ದೆಯಡಿ ದಾಖಲಾಗಿರುವ ಕೇಸ್ ಹಿಂಪಡೆಯಲು ಆಗ್ರಹ!

BENGALURU: ಮತಾಂತರ ನಿಷೇಧ ಕಾಯ್ದೆಯಡಿ ದಾಖಲಾಗಿರುವ ಕೇಸ್ ಹಿಂಪಡೆಯಲು ಆಗ್ರಹ!

Navasamaja.com 9 hrs ago

ಬೆಂಗಳೂರು: ಚುನಾವಣಾ ಭರವಸೆಗಳನ್ನು ಈಡೇರಿಸುವಂತೆ ಹಾಗೂ ಮತಾಂತರ ನಿಷೇಧ ಮತ್ತು ಜಾನುವಾರು ಹತ್ಯೆ ನಿಷೇಧ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಅಲ್ಪಸಂಖ್ಯಾತರು, ರೈತರು ಹಾಗೂ ದಲಿತ ಸಂಘಟನೆಗಳು (Dalit Groups) ಬೆಂಗಳೂರಿನ (bengaluru) ಫ್ರೀಡಂಪಾರ್ಕ್‌ನಲ್ಲಿ (Freedom Park) ಪ್ರತಿಭಟನೆ ನಡೆಸಿವೆ.

2023ರ ಚುನಾವಣೆಯ ಹಲವು ಭರವಸೆಗಳನ್ನು ಈಡೇರಿಸಿಲ್ಲ!

ಕ್ರೈಸ್ತ, ಮುಸ್ಲಿಂ ಧಾರ್ಮಿಕ ಮುಖಂಡರು, ನಾಗರಿಕ ಸಂಘಟನೆಗಳು ಹೋರಾಟದಲ್ಲಿ ಭಾಗಿಯಾಗಿದ್ದು, 2023ರ ಚುನಾವಣೆಯ ಹಲವು ಭರವಸೆಗಳನ್ನು ಈಡೇರಿಸಿಲ್ಲ. ಮತಾಂತರ ನಿಷೇಧ ಕಾಯ್ದೆ ರದ್ದುಗೊಳಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿರುವ ಪ್ರತಿಭಟನಾಕಾರರು, ಮತಾಂತರ ನಿಷೇಧ ಕಾಯ್ದೆಯಡಿ ದಾಖಲಾಗಿರುವ ಕೇಸ್ ಹಿಂಪಡೆಯಿವಂತೆಯೂ ಆಗ್ರಹಿಸಿದ್ದಾರೆ.

ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸಬೇಕು!

ದ್ವೇಷ ಭಾಷಣ, ದ್ವೇಷಾಧಾರಿತ ಅಪರಾಧಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹದ ಜೊತೆಗೆ ಕೋಮು ಹಿಂಸೆ ತಡೆಗೆ ಸುಪ್ರೀಂಕೋರ್ಟ್ ನಿರ್ದೇಶನ ಜಾರಿಗೆ ಸರ್ಕಾರವನ್ನು ಒತ್ತಾಯಿಸಲಾಗಿದೆ. ಅಲ್ಪಸಂಖ್ಯಾತರು, ದುರ್ಬಲ ಸಮುದಾಯಗಳಿಗೆ ರಕ್ಷಣೆ ನೀಡಬೇಕು. ರೈತರು, ಜಾನುವಾರು ವ್ಯಾಪಾರಿಗಳ ಜೀವನೋಪಾಯಕ್ಕೆ ಹೊಡೆತವಾಗುತ್ತಿರುವ ಹಿನ್ನೆಲೆ ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದುಗೊಳಿಸಬೇಕು. ನಾಗರಿಕ ಆಹಾರ ಆಯ್ಕೆಯನ್ನೂ ಕಾಯ್ದೆ ನಿರ್ಬಂಧಿಸಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ಬೇಡಿಕೆ ಈಡೇರಿಕೆಗೆ ಕಾಲಮಿತಿಯ ಕ್ರಮ ಘೋಷಿಸುವಂತೆ ಸರ್ಕಾರವನ್ನವರು ಆಗ್ರಹಿಸಿದ್ದಾರೆ.

ರಾಜ್ಯ ಸರ್ಕಾರದ ಮೇಲೆ ಮತಾಂತರ ನಿಷೇಧ ಹಾಗೂ ಗೋ ಹತ್ಯಾ ನಿಷೇಧ ಕಾಯ್ದೆ ವಾಪಸತಿ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಅವರಿಂದಲೇ ಒತ್ತಡ ವಿದೆ ಎನ್ನಲಾಗಿದೆ. ಈ ಸಂಬಂಧ ಮುಂದಿನ ಬೆಳಗಾವಿ ಅಧಿವೇಶನದಲ್ಲಿ ಕಾಯ್ದೆ ವಾಪಸತಿಗೆ ಹರಿಪ್ರಸಾದ್​​ ಸರ್ಕಾರದ ಮೇಲೂ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಬಿಜೆಪಿ ಮಾತ್ರ ಈ ವಿಚಾರವಾಗಿ ಕಿಡಿ ಕಾರಿದ್ದು, ಮತಾಂತರ ನಿಷೇಧ ಕಾಯ್ದೆ ಹಿಂಪಡೆದರೆ ನಮ್ಮ ವಿರೋಧ ಇದೆ ಎಂದಿದೆ. ಎಲ್ಲ ಸಮುದಾಯದ ಅಭಿಪ್ರಾಯ ಪಡೆದು ಕಾನೂನು ರೂಪಿಸಿದ್ದೇವೆ. ಸರ್ಕಾರ ಹಾಗೂ ಬಿ.ಕೆ.ಹರಿಪ್ರಸಾದ್​ಗೆ ನಾವು ಎಚ್ಚರಿಕೆ ಕೊಡುತ್ತಿದ್ದು, ರಾಜ್ಯಾದ್ಯಂತ ಆಂದೋಲನ ಮಾಡ್ತೇವೆ ಎಂದು ಎಂಎಲ್​ಸಿ ಎನ್.ರವಿಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ: SHIVAMOGGA: ಅಡುಗೆ ಕೋಣೆಗೆ ಬೆಂಕಿ ಹಚ್ಚಿದ ಕಿಡಿಗೇಡಿಗಳು, ಹೆದ್ದಾರಿ ತಡೆದು ಗ್ರಾಮಸ್ಥರ ಆಕ್ರೋಶ

Dailyhunt
Disclaimer: This content has not been generated, created or edited by Dailyhunt. Publisher: Navasamaja