ಬೆಂಗಳೂರು: ರಾಜಧಾನಿ ಬೆಂಗಳೂರಿನ (Bengaluru) ಕೋರಮಂಗಲದಲ್ಲಿರುವ ಅತ್ಯಂತ ಜನಪ್ರಿಯ 'ನೆಕ್ಸಸ್ ಮಾಲ್' (Nexus Mall) ಮೇಲೆ ಶುಕ್ರವಾರ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಶಾಕ್ ನೀಡಿದ್ದಾರೆ.
ಮಾಲ್‌ನಲ್ಲಿ ಸ್ವಚ್ಛತೆ ಹಾಗೂ ಘನತ್ಯಾಜ್ಯ ನಿರ್ವಹಣೆಯಲ್ಲಿ ಭಾರಿ ಲೋಪವೆಸಗಿರುವುದು ತಪಾಸಣೆ ವೇಳೆ ಕಂಡುಬಂದಿದ್ದು, ನಿಯಮ ಉಲ್ಲಂಘಿಸಿದ ವ್ಯಾಪಾರಿಗಳಿಗೆ ಅಧಿಕಾರಿಗಳು ಬಿಸಿ ಮುಟ್ಟಿಸಿದ್ದಾರೆ. ಫುಡ್ ಕೋರ್ಟ್‌ನಲ್ಲಿ ನಿಯಮ ಉಲ್ಲಂಘನೆ ವಿಶೇಷವಾಗಿ ಮಾಲ್‌ನ ಫುಡ್ ಕೋರ್ಟ್ (ಆಹಾರ ಸಂಕೀರ್ಣ) ಭಾಗದಲ್ಲಿ ಅಧಿಕಾರಿಗಳು ಪರಿಶೀಲನೆ ನಡೆಸಿದಾಗ, ಜಾರಿಯಲ್ಲಿರುವ ಘನತ್ಯಾಜ್ಯ ನಿರ್ವಹಣಾ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿರುವುದು ಬೆಳಕಿಗೆ ಬಂದಿದೆ. ಆಹಾರ ಮತ್ತು ತ್ಯಾಜ್ಯವನ್ನು ಹಸಿ ಹಾಗೂ ಒಣ ಕಸವಾಗಿ ಸಮರ್ಪಕವಾಗಿ ವಿಂಗಡಿಸದೆ, ರಾಶಿ ರಾಶಿ ಕಸವನ್ನು ಅಸಡ್ಡೆಯಿಂದ ಹಾಕಲಾಗಿತ್ತು. ಇದು ಸಾರ್ವಜನಿಕ ಆರೋಗ್ಯಕ್ಕೆ ಧಕ್ಕೆ ತರುವಂತಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮಕೈಗೊಂಡಿದ್ದಾರೆ. 85,000 ರೂಪಾಯಿ ದಂಡ ವಿಧಿಸಿದ ಅಧಿಕಾರಿಗಳು ಸಾರ್ವಜನಿಕರ ಆರೋಗ್ಯ ಮತ್ತು ನಗರದ ನೈರ್ಮಲ್ಯದ ಹಿತದೃಷ್ಟಿಯಿಂದ ನಿಯಮಗಳನ್ನು ಪಾಲಿಸದ ಪ್ರಸಿದ್ಧ ಮೆಕ್‌ಡೊನಾಲ್ಡ್ಸ್ (McDonald's) ಸಂಸ್ಥೆ ಸೇರಿದಂತೆ ಮಾಲ್‌ನ ಒಟ್ಟು 10 ಪ್ರಮುಖ ಮಳಿಗೆಗಳಿಗೆ ಅಧಿಕಾರಿಗಳು ಸ್ಥಳದಲ್ಲೇ ಒಟ್ಟು 85,000 ರೂಪಾಯಿ ದಂಡ ವಿಧಿಸಿದ್ದಾರೆ. ಅಲ್ಲದೆ, ಮುಂಬರುವ ದಿನಗಳಲ್ಲಿ ತ್ಯಾಜ್ಯ ವಿಂಗಡಣೆ ಹಾಗೂ ಸ್ವಚ್ಛತಾ ನಿಯಮಗಳನ್ನು ಸರಿಯಾಗಿ ಪಾಲಿಸದಿದ್ದರೆ ಮಾಲ್ ಮತ್ತು ಮಳಿಗೆಗಳ ವಿರುದ್ಧ ಮತ್ತಷ್ಟು ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಬಿಎ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಆಪರೇಷನ್ ಆಹಾರ..! ರೈಲು ನಿಲ್ದಾಣಗಳ ಹೋಟೆಲ್ಗಳ ಮೇಲೆ ಅಧಿಕಾರಿಗಳಿಂದ ರೇಡ್! ಕರ್ನಾಟಕದ ರೈಲ್ವೆ ನಿಲ್ದಾಣಗಳು (Railway Sತation), ಆವರಣದಲ್ಲಿರುವ ಹೋಟೆಲ್‌ಗಳು ಹಾಗೂ ರೈಲುಗಳ ಪ್ಯಾಂಟ್ರಿ ಕಾರುಗಳಲ್ಲಿ ಪೂರೈಸಲಾಗುವ ಆಹಾರದ ಗುಣಮಟ್ಟ ಮತ್ತು ನೈರ್ಮಲ್ಯವನ್ನು ತಪಾಸಣೆ ನಡೆಸಲು ಆಹಾರ ಸುರಕ್ಷತಾ (Food Safety) ಇಲಾಖೆಯು ರಾಜ್ಯವ್ಯಾಪಿ ಬೃಹತ್ ಕಾರ್ಯಾಚರಣೆ ನಡೆಸಿದೆ. ಆಗಸ್ಟ್ 20ರಂದು ನಡೆದ ಈ ದಿಢೀರ್ ದಾಳಿಯಲ್ಲಿ (Big News) ಕಳಪೆ ಮತ್ತು ಅನೈರ್ಮಲ್ಯದ ಭೀಕರ ಸತ್ಯಗಳು ಬೆಳಕಿಗೆ ಬಂದಿವೆ. 112ಕ್ಕೂ ಹೆಚ್ಚು ಘಟಕಗಳ ಪರಿಶೀಲನೆ ಸಾರ್ವಜನಿಕರ ಆರೋಗ್ಯದ ದೃಷ್ಟಿಯಿಂದ ಹಮ್ಮಿಕೊಳ್ಳಲಾಗಿದ್ದ ಈ ವಿಶೇಷ ಅಭಿಯಾನದಲ್ಲಿ ಬೆಂಗಳೂರು ಕೆಎಸ್‌ಆರ್, ಯಶವಂತಪುರ, ಕೆ.ಆರ್. ಪುರಂ, ಯಲಹಂಕ, ಮೈಸೂರು, ಹಾವೇರಿ, ಉಡುಪಿ, ಹುಬ್ಬಳ್ಳಿ, ಮಂಗಳೂರು, ಬಳ್ಳಾರಿ, ದಾವಣಗೆರೆ ಸೇರಿದಂತೆ ಒಟ್ಟು 36 ಪ್ರಮುಖ ರೈಲು ನಿಲ್ದಾಣಗಳಲ್ಲಿದ್ದ 112ಕ್ಕೂ ಹೆಚ್ಚು ಕ್ಯಾಂಟೀನ್, ಹೋಟೆಲ್ ಹಾಗೂ ಪ್ಯಾಂಟ್ರಿ ಘಟಕಗಳನ್ನು ಪರಿಶೀಲಿಸಲಾಯಿತು. ತಪಾಸಣೆ ವೇಳೆ ಹುಬ್ಬಳ್ಳಿ-ಬೆಂಗಳೂರು ಮತ್ತು ಮಂಗಳೂರು-ಕೇರಳ ವಂದೇ ಭಾರತ್ ರೈಲುಗಳಲ್ಲಿ ಶುಚಿತ್ವ ಕಾಯ್ದುಕೊಂಡಿರುವುದು ಕಂಡುಬಂದಿದೆ. ಆದರೆ, ಪ್ರಮುಖ ರೈಲು ನಿಲ್ದಾಣಗಳಲ್ಲಿರುವ ಹೋಟೆಲ್‌ಗಳಲ್ಲಿ ಭೀಕರ ಅಕ್ರಮಗಳು ಬಯಲಾಗಿವೆ. ಜಿಲೇಬಿಗೆ ಅಪಾಯಕಾರಿ ಹಳದಿ ಬಣ್ಣ ಮತ್ತು ಖೋವಾ ಪೇಡಾಗೆ ನಕಲಿ ಗುಲಾಬಿ ಬಣ್ಣದ ರಾಸಾಯನಿಕಗಳನ್ನು ಬಳಸಲಾಗುತ್ತಿತ್ತು. ಹಾವೇರಿ ನಿಲ್ದಾಣದಲ್ಲಿ ದಿನಾಂಕ ಮುಗಿದ ನಂದಿನಿ ಮೊಸರು ಹಾಗೂ ದೊಡ್ಲಾ ಹಾಲಿನ ಪ್ಯಾಕೆಟ್‌ಗಳು ಪತ್ತೆಯಾಗಿದ್ದರೆ, ಬೆಂಗಳೂರಿನ ಕೆ.ಆರ್. ಪುರಂ ನಿಲ್ದಾಣದ ಹೋಟೆಲ್ ಅಡುಗೆಮನೆ ತೀವ್ರ ಅನೈರ್ಮಲ್ಯದಿಂದ ಕೂಡಿತ್ತು.

