Dailyhunt Logo
  • Light mode
    Follow system
    Dark mode
    • Play Story
    • App Story
BENGALURU : ಪ್ರತಿಷ್ಠಿತ ಪೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ ಬಾಲಕಿ!

BENGALURU : ಪ್ರತಿಷ್ಠಿತ ಪೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರಿನ ಬಾಲಕಿ!

Navasamaja.com 1 week ago

ಬೆಂಗಳೂರು: ಸಿಲಿಕಾನ್‌ ಸಿಟಿ ಬೆಂಗಳೂರಿನ(Bengaluru) 17 ವರ್ಷದ ಪ್ರತಿಭಾವಂತ ಬಾಲಕಿ ದಿವಾ ಉತ್ಕರ್ಷ (Divaa Uthkarsha) ಪ್ರತಿಷ್ಠಿತ 'ಫೋರ್ಬ್ಸ್ 30 ಅಂಡರ್ 30' (Forbes 30 Under 30) ಏಷ್ಯಾ ಪಟ್ಟಿಯಲ್ಲಿ ಸ್ಥಾನ ಪಡೆಯುವ ಮೂಲಕ ಜಾಗತಿಕ ಮಟ್ಟದಲ್ಲಿ ಭಾರತದ ಕೀರ್ತಿ ಹೆಚ್ಚಿಸಿದ್ದಾರೆ.

ತಾವು ಆರಂಭಿಸಿದ 'ಪ್ರಾಜೆಕ್ಟ್ ಸೂರ್ಯ' (Project Surya) ಎಂಬ ವಿನೂತನ ಸಾಮಾಜಿಕ ಉಪಕ್ರಮಕ್ಕಾಗಿ ಅವರಿಗೆ ಈ ಗೌರವ ಒಲಿದುಬಂದಿದೆ.

ಟೈಪ್ 1 ಮಧುಮೇಹ ಮಕ್ಕಳ ನೆರವು: ದಿವಾ ಉತ್ಕರ್ಷ ಅವರು ಆರಂಭಿಸಿದ ಈ ಯೋಜನೆಯು ಟೈಪ್ 1 ಮಧುಮೇಹದಿಂದ (Type 1 Diabetes) ಬಳಲುತ್ತಿರುವ ಮತ್ತು ಆರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೆ ಉಚಿತ ವೈದ್ಯಕೀಯ ಕಿಟ್‌ಗಳನ್ನು ಒದಗಿಸಲು ಶ್ರಮಿಸುತ್ತಿದೆ.

4 ಲಕ್ಷ ಜನರಿಗೆ ಜಾಗೃತಿ: ಈ ಯೋಜನೆ ಆರಂಭವಾದ ಅತ್ಯಲ್ಪ ಅವಧಿಯಲ್ಲೇ ಸುಮಾರು 4,02,000 ಕ್ಕೂ ಹೆಚ್ಚು ಜನರನ್ನು ತಲುಪಿ ಜಾಗೃತಿ ಮೂಡಿಸಿದೆ.

ಲಕ್ಷಾಂತರ ರೂಪಾಯಿ ನಿಧಿ ಸಂಗ್ರಹ: ಸಾಮಾಜಿಕ ಜಾಲತಾಣಗಳು ಹಾಗೂ ಕ್ರೌಡ್‌ಫಂಡಿಂಗ್ ಮೂಲಕ ಈ ಯೋಜನೆಗಾಗಿ ₹20 ಲಕ್ಷಕ್ಕೂ ಹೆಚ್ಚು ಧನಸಹಾಯವನ್ನು ಸಂಗ್ರಹಿಸಲಾಗಿದೆ. ಈ ಹಣದ ಮೂಲಕ ಮಧುಮೇಹ ಹೊಂದಿರುವ 3,190 ಕ್ಕೂ ಹೆಚ್ಚು ಮಕ್ಕಳಿಗೆ ನೇರ ಆರ್ಥಿಕ ಮತ್ತು ವೈದ್ಯಕೀಯ ನೆರವು ನೀಡಲಾಗಿದೆ.

ಫೋರ್ಬ್ಸ್ ಪಟ್ಟಿಯಲ್ಲಿ ಸ್ಥಾನ ಕೇವಲ 17ನೇ ವಯಸ್ಸಿಗೆ ಮಧುಮೇಹ ಪೀಡಿತ ಮಕ್ಕಳ ಬದುಕಿನಲ್ಲಿ ಭರವಸೆಯ ಬೆಳಕಾಗಿ ಮೂಡಿಬಂದಿರುವ ದಿವಾ ಅವರ ನಿಸ್ವಾರ್ಥ ಸೇವೆಯನ್ನು ಗುರುತಿಸಿ, ಫೋರ್ಬ್ಸ್ ಸಂಸ್ಥೆಯು ತನ್ನ ಏಷ್ಯಾದ ಅತ್ಯಂತ ಪ್ರಭಾವಶಾಲಿ ಯುವ ಸಾಧಕರ ಪಟ್ಟಿಯಲ್ಲಿ ಇವರ ಹೆಸರನ್ನು ಸೇರಿಸಿದೆ. ಈ ಮೂಲಕ ಬೆಂಗಳೂರಿನ ಹೆಣ್ಣುಮಗಳೊಬ್ಬಳು ಜಾಗತಿಕ ವೇದಿಕೆಯಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja