Dailyhunt Logo
  • Light mode
    Follow system
    Dark mode
    • Play Story
    • App Story
BIG NEWS ‌:  ಬಾಹ್ಯಾಕಾಶದಲ್ಲಿ ಭೀಮ ಗೃಹ - ಶುಭಾಂಶು ಶುಕ್ಲಾ ಪರಿಕಲ್ಪನೆ ಹೇಗಿದೆ ನೋಡಿ

BIG NEWS ‌: ಬಾಹ್ಯಾಕಾಶದಲ್ಲಿ ಭೀಮ ಗೃಹ - ಶುಭಾಂಶು ಶುಕ್ಲಾ ಪರಿಕಲ್ಪನೆ ಹೇಗಿದೆ ನೋಡಿ

Navasamaja.com 2 weeks ago

ಬೆಂಗಳೂರು: ಭಾರತದ ಗಗನಯಾತ್ರಿ, ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲ(Shubhaanshu Shukla) ಅವರು ಭೂಮಿಯ ಆಚೆಗೆ ಅಂದರೆ ಚಂದ್ರ ಮತ್ತು ಮಂಗಳ ಗ್ರಹಗಳಲ್ಲಿ ಮಾನವ ವಾಸಕ್ಕೆ ಅನುಕೂಲವಾಗುವಂತಹ 'ಭೀಮ್' (BHEEM - Bharatiya Habitable Expandable Extraterrestrial Habitat) ಎಂಬ ವಿಶೇಷ ಯೋಜನೆಯ ಪರಿಕಲ್ಪನೆಯನ್ನು ಅನಾವರಣಗೊಳಿಸಿದ್ದಾರೆ.

ಐಐಎಸ್‌ಸಿಯಲ್ಲಿ ರೂಪುಗೊಂಡ 'ಭೀಮ್' ಯೋಜನೆ
ರಷ್ಯಾದಲ್ಲಿ ತರಬೇತಿ ಮುಗಿಸಿ ಭಾರತಕ್ಕೆ ಮರಳಿದ ನಂತರ, ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಕೈಗೊಂಡ ತರಬೇತಿಯ ಭಾಗವಾಗಿ ಶುಭಾಂಶು ಶುಕ್ಲ ಅವರು ಈ ಶೈಕ್ಷಣಿಕ ಸಂಶೋಧನೆ ನಡೆಸಿದ್ದಾರೆ. ಬೆಂಗಳೂರಿನ ಪ್ರತಿಷ್ಠಿತ ಭಾರತೀಯ ವಿಜ್ಞಾನ ಸಂಸ್ಥೆಯ (IISc) 'ಅಲೋಕ್ ಲ್ಯಾಬ್'ನಲ್ಲಿ (Aloke Lab) ಈ 'ಭೀಮ್' (B.H.E.E.M.) ಯೋಜನೆಯ ನಮೂನೆಯನ್ನು ಸಿದ್ಧಪಡಿಸಲಾಗಿದೆ.

ಭವಿಷ್ಯದ ಬಾಹ್ಯಾಕಾಶ ವಾಸದ ಸವಾಲುಗಳು
ಬಾಹ್ಯಾಕಾಶ ಯಾತ್ರೆಗಳ ಮೂಲಕ ಗಗನಯಾತ್ರಿಗಳು ಇತರ ಗ್ರಹಗಳಿಗೆ ತಲುಪಬಹುದಾದರೂ, ಅಲ್ಲಿ ದೀರ್ಘಕಾಲ ನೆಲೆಸುವುದು ದೊಡ್ಡ ತಾಂತ್ರಿಕ ಸವಾಲಾಗಿದೆ.

"ನಾವು 20 ವರ್ಷಗಳ ನಂತರ ಭೂಮಿಯ ಹೊರಗೆ ನೆಲೆಸಬೇಕೆಂದರೆ, ಅದಕ್ಕಾಗಿ ಸಂಶೋಧನೆಗಳು ಇಂದಿನಿಂದಲೇ ಪ್ರಾರಂಭವಾಗಬೇಕು" ಎಂದು ಗಗನಯಾತ್ರಿ ಶುಭಾಂಶು ಶುಕ್ಲ ತಮ್ಮ ಸಂಶೋಧನೆಯ ಮಹತ್ವವನ್ನು ವಿವರಿಸಿದ್ದಾರೆ. ಭಾರತದ 'ಗಗನ್‌ಯಾನ್' ಯೋಜನೆಯು ಭವಿಷ್ಯದ ಸುದೀರ್ಘ ಬಾಹ್ಯಾಕಾಶ ಅನ್ವೇಷಣೆಗಳಿಗೆ ತಡಿಪಾಯ ಹಾಕುತ್ತಿದ್ದು, 'ಭೀಮ್' ಕಲ್ಪನೆಯು ಈ ದಿಸೆಯಲ್ಲಿ ಪ್ರಮುಖ ಮೈಲಿಗಲ್ಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja