Dailyhunt
BIG NEWS: ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿಚಾರ, ಸುಪ್ರೀಂ ಕೋರ್ಟ್​​​ ಮಹತ್ವದ ಆದೇಶ

BIG NEWS: ಲಿಂಗಾಯತ ಜಂಗಮರಿಗೆ ಪರಿಶಿಷ್ಟ ಜಾತಿ ಪ್ರಮಾಣಪತ್ರ ವಿಚಾರ, ಸುಪ್ರೀಂ ಕೋರ್ಟ್​​​ ಮಹತ್ವದ ಆದೇಶ

Navasamaja.com 2 weeks ago

ವದೆಹಲಿ: ಲಿಂಗಾಯತ ಜಂಗಮರೇ (Lingayath jangamas) ಬೇರೆ, ಬೇಡ ಜಂಗಮರೇ (Beda angamas) ಬೇರೆ ಅಂತಾ ಹೈ ಕೋರ್ಟ್‌ (High court) ಮಹತ್ವದ ತೀರ್ಪು ಕೊಟ್ಟಿದೆ. ಬೀದರ್‌ ಮೂಲದ ವೀರಶೈವ ಲಿಂಗಾಯತ ಧರ್ಮಕ್ಕೆ ಸೇರಿದ ರವೀಂದ್ರಸ್ವಾಮಿ ಅವರು ಬೇಡ ಜಂಗಮ ಎಸ್‌ಸಿ ಪ್ರಮಾಣ ಪತ್ರ ಪಡೆದಿದ್ದರು.

ಈ ಪ್ರಕರಣ ಕೋರ್ಟ್‌ ಮೆಟ್ಟಿಲು ಹತ್ತಿತ್ತು. ಈ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್‌ (Supreme) ವೀರಶೈವ ಲಿಂಗಾಯತ ಜಂಗಮರು ಬೇಡ ಜಂಗಮ ಅಥವಾ ಬುಡ್ಗ ಜಂಗಮರಲ್ಲ ಅನ್ನೋ ಹೈಕೋಟ್‌ ನೀಡಿದ್ದ ಮಹತ್ವ ಆದೇಶವನ್ನು ಎತ್ತಿ ಹಿಡಿದಿದೆ.

ರವೀಂದ್ರ ಸ್ವಾಮಿ ಅವರು ವೀರಶೈವ ಜಂಗಮರಾಗಿದ್ದುಕೊಂಡು ಪರಿಶಿಷ್ಟ ಜಾತಿಯ ಬೇಡ ಜಂಗಮ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದುಕೊಂಡಿದ್ದರು. ಇದರ ವಿರುದ್ಧ ನಿರಂತರ ಹೋರಾಟ, ಪ್ರತಿಭಟನೆ ನಡೆದಿದ್ದವು. ಕಲಬುರಗಿಯ ಹೈಕೋರ್ಟ್‌ ಪೀಠದಲ್ಲಿಜಾತಿ ಪ್ರಮಾಣ ಪತ್ರ ನೀಡಿರುವುದನ್ನು ಪ್ರಶ್ನಿಸಲಾಗಿತ್ತು. ಆಗ ಹೈಕೋರ್ಟ್‌ ಸ್ವಾಮಿ ಅವರ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿತ್ತು. ಅದನ್ನು ಪ್ರಶ್ನಿಸಿ ಸ್ವಾಮಿ ಅವರು ಸುಪ್ರಿಂಕೋರ್ಟ್‌ ಮೆಟ್ಟಿಲೇರಿದ್ದರು. 2025ರ ನವೆಂಬರ್‌ 11ರಂದು ಸುಪ್ರಿಂಕೋರ್ಟ್‌ ಸಹ ಹೈಕೋರ್ಟ್‌ ಆದೇಶವನ್ನು ಎತ್ತಿ ಹಿಡಿದಿತ್ತು. ಬಳಿಕ ಸ್ವಾಮಿ ಅವರು ಸುಪ್ರಿಂಕೋರ್ಟ್‌ನಲ್ಲಿಮರು ಪರಿಶೀಲನೆಗೆ ಅರ್ಜಿ ಸಲ್ಲಿಸಿದ್ದರು. ಅದನ್ನೂ ಸುಪ್ರೀಂಕೋರ್ಟ್‌ ವಜಾಗೊಳಿಸಿದೆ.

ಅರ್ಜಿದಾರರು, ಜಂಗಮ ಎಂಬುದು ಮೂಲತಃ ಅಲೆಮಾರಿ ಸಮುದಾಯವಾಗಿದ್ದು, ಅವರು ಐತಿಹಾಸಿಕವಾಗಿ ಸಾಮಾಜಿಕ ಬಹಿಷ್ಕಾರ ಮತ್ತು ಅಸ್ಪೃಶ್ಯತೆಯನ್ನು ಅನುಭವಿಸಿದ್ದಾರೆ. ಆದ್ದರಿಂದ ಅವರನ್ನು ಎಸ್‌ಸಿ ಪಟ್ಟಿಗೆ ಸೇರಿಸಬೇಕು ಎಂದು ವಾದಿಸಿದ್ದರು. ಆದರೆ, ಲಿಂಗಾಯತ ಜಂಗಮ ಸಮುದಾಯವು ಲಿಂಗಾಯತ ಧರ್ಮದ ಒಂದು ಭಾಗವಾಗಿದ್ದು, ಅವರು ಶೈಕ್ಷಣಿಕವಾಗಿ ಮತ್ತು ಸಾಮಾಜಿಕವಾಗಿ ಮುಂದುವರಿದಿದ್ದಾರೆ ಎಂಬ ಪ್ರತಿವಾದವನ್ನು ಕೋರ್ಟ್ ಪುರಸ್ಕರಿಸಿತು. ಕೋರ್ಟ್‌ನ ಈ ಆದೇಶದ ಮೂಲಕ ಈ ಪ್ರಕರಣಕ್ಕೆ ಅಂತಿಮ ಮೊಳೆ ಬಿದ್ದಂತಾಗಿದೆ.

ಕರ್ನಾಟಕದಲ್ಲಿ ಈ ವಿಷಯವು ದಶಕಗಳಿಂದ ಚರ್ಚೆಯಲ್ಲಿದೆ. ಈ ತೀರ್ಪಿನಿಂದಾಗಿ ಲಿಂಗಾಯತ ಜಂಗಮರು ಎಸ್‌ಸಿ ಪ್ರಮಾಣಪತ್ರ ಪಡೆಯುವ ಹಾದಿ ಸದ್ಯಕ್ಕೆ ಮುಚ್ಚಿದಂತಾಗಿದೆ. ಒಂದು ವೇಳೆ ಜಾತಿ ಪಟ್ಟಿಯಲ್ಲಿ ಬದಲಾವಣೆ ಬೇಕಿದ್ದಲ್ಲಿ, ಸಮುದಾಯವು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿ ಸಂಸತ್ತಿನ ಮೂಲಕ ಕಾನೂನು ತಿದ್ದುಪಡಿ ತರಬೇಕಾಗುತ್ತದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಈ ತೀರ್ಪು ರಾಜ್ಯದ ಮೀಸಲಾತಿ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದ್ದು, ಲಿಂಗಾಯತ ಜಂಗಮ ಸಮುದಾಯದ ಮುಂದಿನ ಹೋರಾಟದ ಹಾದಿ ಯಾವ ರೀತಿ ಇರಲಿದೆ ಎಂಬುದು ಕುತೂಹಲಕಾರಿಯಾಗಿದೆ.

ಇದನ್ನೂಓದಿ: ಪಾಠ, ಪರೀಕ್ಷೆ ನಡುವೆ ಈಗ ಜನಗಣತಿ ಜವಾಬ್ದಾರಿ- ರಜೆ ಇಲ್ಲದೆ ಶಿಕ್ಷಕರು ಕಂಗಾಲು

Dailyhunt
Disclaimer: This content has not been generated, created or edited by Dailyhunt. Publisher: Navasamaja