Dailyhunt Logo
  • Light mode
    Follow system
    Dark mode
    • Play Story
    • App Story
BIG NEWS : ರಾಜ್ಯದ ಈ ಭಾಗದಲ್ಲಿ ಇಂದು ಮದ್ಯ ಮಾರಾಟ ಬಂದ್!

BIG NEWS : ರಾಜ್ಯದ ಈ ಭಾಗದಲ್ಲಿ ಇಂದು ಮದ್ಯ ಮಾರಾಟ ಬಂದ್!

Navasamaja.com 3 months ago

ವಿಜಯನಗರ: ರಾಜ್ಯದಲ್ಲಿ (Karnataka) ಕಾನೂನು ಸುವ್ಯವಸ್ಥೆ ಮತ್ತು ಶಾಂತಿ ಕಾಪಾಡುವ ನಿಟ್ಟಿನಲ್ಲಿ ಹೊಸಪೇಟೆ (Hospet) ನಗರದಲ್ಲಿ ಇಂದು (ಜುಲೈ 4) ಮದ್ಯ ಮಾರಾಟವನ್ನು (Liquor sales ban) ಸಂಪೂರ್ಣವಾಗಿ ನಿಷೇಧಿಸಿ ವಿಜಯನಗರ (Vijayanagara) ಜಿಲ್ಲಾಧಿಕಾರಿ ಕವಿತಾ ಎಸ್.

ಮನ್ನಿಕೇರಿ ಅವರು ಆದೇಶ ಹೊರಡಿಸಿದ್ದಾರೆ.

ನಿಷೇಧಕ್ಕೆ ಕಾರಣವೇನು?

ಹೊಸಪೇಟೆ ಉಪವಿಭಾಗದ ಒಟ್ಟು 75 ಪ್ರಮುಖ ಸ್ಥಳಗಳಲ್ಲಿ ಜುಲೈ 5ರವರೆಗೆ 'ಛೋಟಾ ಮೊಹರಂ' ಅಂಗವಾಗಿ ಪಂಜಾಗಳನ್ನು ಪ್ರತಿಷ್ಠಾಪಿಸಲಾಗುತ್ತಿದೆ. ಈ ಹಬ್ಬವು ಯಾವುದೇ ಅಹಿತಕರ ಘಟನೆಗಳು ನಡೆಯದಂತೆ, ಅತ್ಯಂತ ಶಾಂತಿಯುತವಾಗಿ ಮತ್ತು ಸೌಹಾರ್ದತೆಯಿಂದ ಜರುಗಲಿ ಎಂಬ ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತ ಈ ನಿರ್ಧಾರ ಕೈಗೊಂಡಿದೆ.

ನಿಯಮಗಳು ಮತ್ತು ಸಮಯದ ವಿವರ

ಜುಲೈ 4ರ ಶನಿವಾರ ಬೆಳಗ್ಗೆ 6 ಗಂಟೆಯಿಂದ ಜುಲೈ 5ರ ಭಾನುವಾರ ಬೆಳಗ್ಗೆ 6 ಗಂಟೆಯವರೆಗೆ (ಒಟ್ಟು 24 ಗಂಟೆಗಳು) ಈ ಆದೇಶ ಜಾರಿಯಲ್ಲಿರಲಿದೆ.

ಏನೆಲ್ಲಾ ಬಂದ್?

ನಿಗದಿಪಡಿಸಿದ ಅವಧಿಯಲ್ಲಿ ಹೊಸಪೇಟೆ ನಗರ ವ್ಯಾಪ್ತಿಯಲ್ಲಿ ಮದ್ಯ ಮಾರಾಟ ಮತ್ತು ಸಾಗಾಟವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಎಲ್ಲಾ ರೀತಿಯ ಮದ್ಯದಂಗಡಿಗಳು, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಕಡ್ಡಾಯವಾಗಿ ಮುಚ್ಚಲು ಸೂಚಿಸಲಾಗಿದೆ.

ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ಎಚ್ಚರಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja