Dailyhunt Logo
  • Light mode
    Follow system
    Dark mode
    • Play Story
    • App Story
BIG NEWS : ಶಿಕ್ಷಕಿಯರಿಗೆ ಗುಡ್‌ ನ್ಯೂಸ್‌ - ಹೆರಿಗೆಯ ಬಳಿಕ 5 ವರ್ಷ ಕೇಳಿದ ಕಡೆ ಕೆಲಸ!

BIG NEWS : ಶಿಕ್ಷಕಿಯರಿಗೆ ಗುಡ್‌ ನ್ಯೂಸ್‌ - ಹೆರಿಗೆಯ ಬಳಿಕ 5 ವರ್ಷ ಕೇಳಿದ ಕಡೆ ಕೆಲಸ!

Navasamaja.com 6 months ago

ಬೆಂಗಳೂರು : ಹೆರಿಗೆ (Pregnant ) ನಂತರ ಮಕ್ಕಳ ಪಾಲನೆಯಲ್ಲಿ ತೊಡಗುವ ತಾಯoದರಿಗೆ ಸರ್ಕಾರ ಗುಡ್ ನ್ಯೂಸ್ (Good News ) ಕೊಟ್ಟಿದೆ.

ಹೆರಿಗೆ ರಜೆ ನಂತರ ಕರ್ತವ್ಯಕ್ಕೆ ಮರಳುವ ಶಿಕ್ಷಕಿಯರು ಮಕ್ಕಳ ಪಾಲನೆಗಾಗಿ ತಾವು ಇಚ್ಚಿಸಿದ ಶಾಲೆಯಲ್ಲೇ 5 ವರ್ಷ ಕೆಲಸ ಮಾಡುವ ಅವಕಾಶವನ್ನು ಶಿಕ್ಷಣ ಇಲಾಖೆ ಕಲ್ಪಿಸಲಿದೆ.

ಈ ಸಂಬಂಧ ವಿಧಾನ ಪರಿಷತ್ ನಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ (Madhu bangarappa )ಮಾಹಿತಿ ನೀಡಿದ್ದಾರೆ.
ಮಗುವಿನ ವಯಸ್ಸು ಐದು ವರ್ಷ ಪೂರ್ಣಗೊಳ್ಳುವವರೆಗೆ ಅದರ ಲಾಲನೆ-ಪಾಲನೆಗೆ ಹೆಚ್ಚಿನ ಸಮಯ ನೀಡಬೇಕಾಗುತ್ತದೆ. ಇಲಾಖೆಯ ಮಹಿಳಾ ನೌಕರರು ಮತ್ತು ಅವರ ಮಕ್ಕಳ ಆರೈಕೆ, ಪೋಷಣೆ, ಆರೋಗ್ಯ, ವಿಶ್ರಾಂತಿಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದಿದ್ದಾರೆ.

ಕರ್ನಾಟಕದಲ್ಲಿ ಮಹಿಳಾ ಸರ್ಕಾರಿ ನೌಕರರಿಗೆ 180 ದಿನಗಳ ವೇತನ ಸಹಿತ ಹೆರಿಗೆ ರಜೆ ನೀಡಲಾಗಿದೆ. ಈ ಸೌಲಭ್ಯ ಎರಡು ಮಕ್ಕಳಿಗೆ ಅನ್ವಯಿಸುತ್ತದೆ. ಜತೆಗೆ ಆರು ತಿಂಗಳ ಶಿಶುಪಾಲನಾ ರಜೆಯನ್ನು ಸರ್ಕಾರಿ ಉದ್ಯೋಗದಲ್ಲಿದ್ದ ಮಹಿಳೆಯರು ತಮ್ಮ ಮಕ್ಕಳಿಗೆ 18 ವರ್ಷ ತುಂಬುವುದರ ಒಳಗೆ ಪಡೆಯಬಹುದು.

ಶಿಕ್ಷಕಿಯರು ಹೆರಿಗೆ ರಜೆಯ ಜತೆಗೆ ಶಿಶುಪಾಲನಾ ರಜೆಯನ್ನೂ ಸಂಯೋಜಿಸಿಕೊಂಡು ರಜೆ ತೆಗೆದುಕೊಳ್ಳಬಹುದು. ಎರಡೂ ರಜೆಗಳ ಅವಧಿ ಮುಗಿದ ನಂತರ ಮತ್ತೆ ನಾಲ್ಕು ವರ್ಷ ತಮಗೆ ಅನುಕೂಲವಾಗುವ ಶಾಲೆಗಳಿಗೆ ಸ್ಥಳ ನಿಯೋಜನೆ ಮಾಡಿಸಿಕೊಳ್ಳಬಹುದು. ಒಂದೇ ಶಾಲೆಗೆ ಹೆಚ್ಚಿನ ಶಿಕ್ಷಕಿಯರು ಬೇಡಿಕೆ ಸಲ್ಲಿಸಿದರೆ ಕೌನ್ಸೆಲಿಂಗ್‌ ಮೂಲಕ ಸ್ಥಳ ನಿಯುಕ್ತಿ ಆದೇಶ ನೀಡಲಾಗುವುದು ಎಂದರು.

Dailyhunt
Disclaimer: This content has not been generated, created or edited by Dailyhunt. Publisher: Navasamaja