Dailyhunt
BIHAR: ಬಿಹಾರಕ್ಕೆ ಯಾರಾಗಲಿದ್ದಾರೆ ಹೊಸ ಸಿಎಂ..? ಹೆಸರು ಹೇಳಿದ ನಿತೀಶ್ ಆಪ್ತರು!

BIHAR: ಬಿಹಾರಕ್ಕೆ ಯಾರಾಗಲಿದ್ದಾರೆ ಹೊಸ ಸಿಎಂ..? ಹೆಸರು ಹೇಳಿದ ನಿತೀಶ್ ಆಪ್ತರು!

Navasamaja.com 0 months ago

ಪಾಟ್ನಾ : ಬಿಹಾರದಲ್ಲಿ (Bihar) ಬಿಜೆಪಿ (BJP) ದರ್ಬಾರ್ ಶುರುವಾಗಲಿದೆ. ಈಗಾಗಲೇ ನಿತೀಶ್ ಕುಮಾರ್ (Nithish Kumar) ರಾಜೀನಾಮೆ ನೀಡಿ, ರಾಜ್ಯಸಭೆಗೆ ಹೋಗಿದ್ದಾರೆ. ಹಾಗಾದ್ರೆ ಮುಂದೆ ಯಾರು ಸಿಎಂ ಆಗುತ್ತಾರೆ ಎಂಬ ಚರ್ಚೆ ಶುರುವಾಗಿದೆ. ಆ ಪ್ರಶ್ನೆಗಳಿಗೆ ನಿತೀಶ್ ಸಂಪುಟದಲ್ಲಿದ್ದ ಸಚಿವರೇ ಉತ್ತರ ನೀಡುತ್ತಿದ್ದಾರೆ.

ಸಮಾಜ ಕಲ್ಯಾಣ ಸಚಿವ ಮದನ್ ಸಾಹ್ನಿ ಪ್ರಮುಖ ಹೇಳಿಕೆ ನೀಡುವ ಮೂಲಕ ರಾಜಕೀಯ ಗೊಂದಲಗಳಿಗೆ ಕಾರಣರಾಗಿದ್ದಾರೆ. ಸಾಮ್ರಾಟ್ ಚೌಧರಿ ಮತ್ತು ನಿಶಾಂತ್ ಜೋಡಿ ಭವಿಷ್ಯದಲ್ಲಿ ಹಿಟ್ ಆಗಬಹುದು ಎಂದು ಹೇಳಿದ್ದು, ಈ ಹೇಳಿಕೆ ಭಾರೀ ಸಂಚಲನ ಸೃಷ್ಟಿಸಿದೆ.

ಸಮಾಜ ಕಲ್ಯಾಣ ಸಚಿವ ಮದನ್ ಸಾಹ್ನಿ, ಸಾಮ್ರಾಟ್ ಚೌಧರಿ ಮತ್ತು ನಿಶಾಂತ್ ಜೋಡಿ ಭವಿಷ್ಯದಲ್ಲಿ ಹಿಟ್ ಆಗಬಹುದು ಎಂದು ಹೇಳಿದ್ದಾರೆ. ಬಿಹಾರದ ಜನರು ಸಹ ಸಾಮ್ರಾಟ್ ಚೌಧರಿ ಅವರನ್ನು ಮುಖ್ಯಮಂತ್ರಿಯಾಗಿ ಬಯಸುತ್ತಾರೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಬಿಹಾರ ರಾಜಕೀಯದಲ್ಲಿ ಭಾರೀ ಸಂಚಲನ ಸೃಷ್ಟಿಯಾಗಿದೆ.

ಏಪ್ರಿಲ್ 10ರಂದು ಬಿಹಾರ ಸಿಎಂ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ಸಾಧ್ಯತೆ.

​ರಾಜ್ಯಸಭಾ ಸದಸ್ಯರಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿದ್ದು, ಏಪ್ರಿಲ್ 10ರಂದು ಈ ಪ್ರಕ್ರಿಯೆ ನಡೆಯುವ ಸಾಧ್ಯತೆಯಿದೆ ಎಂದು ಜೆಡಿಯು ಹಿರಿಯ ನಾಯಕರೊಬ್ಬರು ತಿಳಿಸಿದ್ದಾರೆ.

​​ಏಪ್ರಿಲ್ ಮಧ್ಯಭಾಗದಲ್ಲಿ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರುವ ಸಾಧ್ಯತೆಯಿದೆ. "ನಿತೀಶ್ ಕುಮಾರ್ ಅವರು ರಾಜೀನಾಮೆ ನೀಡಿದ ಕೂಡಲೇ ಹೊಸ ಸರ್ಕಾರ ರಚನೆಯ ಪ್ರಕ್ರಿಯೆಗಳು ಶುರುವಾಗಲಿವೆ. ಏಪ್ರಿಲ್ 9ರಂದು ದೆಹಲಿಗೆ ತೆರಳಲಿರುವ ಅವರು, ಏಪ್ರಿಲ್ 11ರಂದು ಹಿಂದಿರುಗುವ ನಿರೀಕ್ಷೆಯಿದೆ.

ನಾಲ್ಕು ದಶಕಗಳ ಸುದೀರ್ಘ ರಾಜಕೀಯ ಪಯಣ
ಬಿಹಾರ ಸಿಎಂ ನಿತೀಶ್ ಕುಮಾರ್ ಅವರ ರಾಜಕೀಯ ಪಯಣ ನಾಲ್ಕು ದಶಕಗಳಿಗೂ ಹಳೆಯದು. 1985ರಲ್ಲಿ ಹರ್ನೌತ್ ಕ್ಷೇತ್ರದಿಂದ ಅವಿಭಜಿತ ಜನತಾದಳದಿಂದ ಬಿಹಾರ ವಿಧಾನಸಭೆಗೆ ಆಯ್ಕೆಯಾಗುವ ಮೂಲಕ ಅವರ ಯಶಸ್ವಿ ಪ್ರಯಾಣ ಆರಂಭವಾಯಿತು. ಕೇವಲ ನಾಲ್ಕು ವರ್ಷಗಳ ಬಳಿಕ, 1989ರಲ್ಲಿ ಆಗಿನ ಬಾರ್ ಕ್ಷೇತ್ರದಿಂದ ಲೋಕಸಭೆ ಪ್ರವೇಶಿಸಿದ ಅವರು, 1990ರಲ್ಲಿ ವಿ ಪಿ ಸಿಂಗ್ ಸರ್ಕಾರದಲ್ಲಿ ರಾಜ್ಯ ಸಚಿವರಾಗಿ ನೇಮಕಗೊಂಡರು.

​1994ರಲ್ಲಿ ಅವರು ಸಮತಾ ಪಕ್ಷವನ್ನು ಸ್ಥಾಪಿಸಿದರು. ಎರಡು ವರ್ಷಗಳ ನಂತರ ಈ ಪಕ್ಷವು ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿತು. ತರುವಾಯ ಸಮತಾ ಪಕ್ಷವು 2003ರಲ್ಲಿ ಜೆಡಿಯು ಜೊತೆ ವಿಲೀನಗೊಂಡಿತು. ಅಂತಿಮವಾಗಿ 2005ರಲ್ಲಿ ಎನ್‌ಡಿಎ ಮೈತ್ರಿಕೂಟದ ಭಾಗವಾಗಿ ಅವರು ಬಿಹಾರದ ಅಧಿಕಾರ ಚುಕ್ಕಾಣಿ ಹಿಡಿಯುವಲ್ಲಿ ಯಶಸ್ವಿಯಾದರು.

​ಅದಕ್ಕೂ ಮುನ್ನ, 1998ರಿಂದ 2004ರವರೆಗೆ ಅಟಲ್ ಬಿಹಾರಿ ವಾಜಪೇಯಿ ಅವರ ಸಂಪುಟದಲ್ಲಿ ರೈಲ್ವೆ, ಮೇಲ್ಮೈ ಸಾರಿಗೆ ಮತ್ತು ಕೃಷಿ ಸಚಿವರಾಗಿ ಅವರು ಸೇವೆ ಸಲ್ಲಿಸಿದ್ದರು. 2005ರಲ್ಲಿ ಎರಡನೇ ಬಾರಿಗೆ ಮುಖ್ಯಮಂತ್ರಿಯಾಗುವ ಮೊದಲು ಅವರು ಬರೋಬ್ಬರಿ ಆರು ಬಾರಿ ಲೋಕಸಭೆಗೆ ಆಯ್ಕೆಯಾಗಿದ್ದರು. 2014-15ರ ಅಲ್ಪಾವಧಿಯನ್ನು ಹೊರತುಪಡಿಸಿ ಅಂದಿನಿಂದ ಅವರು ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಇದನ್ನೂಓದಿ: ನರೇಂದ್ರ ಮೋದಿ ಮನೆಗೆ ಮುತ್ತಿಗೆ ಹಾಕಬೇಕು: ಸಿಎಂ ಸಿದ್ದರಾಮಯ್ಯ

Dailyhunt
Disclaimer: This content has not been generated, created or edited by Dailyhunt. Publisher: Navasamaja