Dailyhunt Logo
  • Light mode
    Follow system
    Dark mode
    • Play Story
    • App Story
BK HARIPRASAD: ಆರ್​​​​​​​​​ಎಸ್​​​​ಎಸ್​​​​-ಬಿಜೆಪಿಯವರನ್ನು ಬೆಂಗಳೂರಿನಿಂದಲೇ ಓಡಿಸಬೇಕು: ಬಿಕೆ ಹರಿಪ್ರಸಾದ್

BK HARIPRASAD: ಆರ್​​​​​​​​​ಎಸ್​​​​ಎಸ್​​​​-ಬಿಜೆಪಿಯವರನ್ನು ಬೆಂಗಳೂರಿನಿಂದಲೇ ಓಡಿಸಬೇಕು: ಬಿಕೆ ಹರಿಪ್ರಸಾದ್

Navasamaja.com 3 hrs ago

ಬೆಂಗಳೂರು: RSS, ಬಿಜೆಪಿಯವರನ್ನು (bjp) ಬೆಂಗಳೂರಿನಿಂದಲೇ (bengaluru) ಓಡಿಸಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಬಿಕೆ ಹರಿಪ್ರಸಾದ್​ (pcc president bk hariprasad) ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ.

ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿದ ಮಾತನಾಡಿದ ಅವರು, ವಂದೇ ಮಾತರಂ ಗೀತೆ ಏನಿದ್ದರೂ ನಮ್ಮದು.

ನೀವು ಖಾಕಿ ಚಡ್ಡಿ ಹಾಕಿ, ಕೈಯಲ್ಲಿ ದೊಣ್ಣೆ ಹಿಡಿದು ಸಂಜೆ ವೇಳೆ ಹೋಗಿ. ಬಿಜೆಪಿ ಶಾಸಕರು ಬೋಗಸ್​ಗಳು. ಅವರಿಗೆ ವಂದೇ ಮಾತರಂ ಗೀತೆಯನ್ನು ನೋಡಿಕೊಂಡು ಸಹ ಹೇಳಲು ಬರುವುದಿಲ್ಲ. ಆದರೆ, ವಂದೇ ಮಾತರಂ ಗೀತೆಯನ್ನು ಕಾಂಗ್ರೆಸ್‌ನವರಾದ ನಾವು ಚೆನ್ನಾಗಿ ಹಾಡುತ್ತೇವೆ ಎಂದರು.

ಕಾಂಗ್ರೆಸ್ ಪಕ್ಷ ನಿಂತ ನೀರಲ್ಲ, ಹರಿಯುವ ನೀರು. ಇವತ್ತು ನಾನು ಇರುತ್ತೇನೆ, ನಾಳೆ ಹೋಗಬಹುದು. ಯಾರೂ ಬೇಸರ ಮಾಡಿಕೊಳ್ಳುವ ಹಾಗಿಲ್ಲ. ಕಾಂಗ್ರೆಸ್ ಯಾರನ್ನೂ ಕೈಬಿಟ್ಟಿಲ್ಲ, ಬಿಡೋದು ಇಲ್ಲ. ನಿರಂತರವಾಗಿ ಕೆಲಸ ಮಾಡಿದ್ರೆ ಪಕ್ಷದಲ್ಲಿ ಸ್ಥಾನಮಾನ ಸಿಗುತ್ತೆ ಎನ್ನುವುದಕ್ಕೆ ನಾನೇ ದೊಡ್ಡ ಉದಾಹರಣೆ ಎಂದು ಹೇಳಿದರು.

ಕಾಂಗ್ರೆಸ್​ನಲ್ಲಿ ಹಲವು ದಶಕಗಳಿಂದ ಕೆಲಸ ಮಾಡಿಕೊಂಡು ಬಂದಿದ್ದೇನೆ. ಐವತ್ಮೂರು ವರ್ಷಗಳಾದ ಮೇಲೆ ಕೆಪಿಸಿಸಿ ಅಧ್ಯಕ್ಷನಾಗುವ ಅವಕಾಶ ಬಂದಿದೆ. ಹೀಗಾಗಿ ನಿರಂತರವಾಗಿ‌ ಪಕ್ಷದಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿರಬೇಕು. ಒಂದಲ್ಲ ಒಂದು ದಿನ ಅವಕಾಶ ಸಿಕ್ಕೇ ಸಿಗುತ್ತದೆ. ಅದಕ್ಕಾಗಿ ಕಾಯಬೇಕಷ್ಟೆ ಎಂದು ಹರಿಪ್ರಸಾದ್ ತಿಳಿಸಿದರು.

ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್​ ಕುಮಾರ್​ ಒಬ್ಬ ಅಜ್ಞಾನಿ. ಜ್ಞಾನೇಶ್ ಕುಮಾರ್ ಹೋಗುವ ತನಕ ಹೋರಾಟ ಮಾಡಿ. ಅವನ ಬಗ್ಗೆ ನಿರ್ಲಕ್ಷ್ಯವಹಿಸಿದ್ರೆ, ಅರ್ಹ ಮತದಾರನ್ನು ಕೈಬಿಡ್ತಾನೆ. ನೀವೆಲ್ಲ ಮತದಾರರ ಪಟ್ಟಿಯ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದಿದ್ದಾರೆ.

ಇದನ್ನೂ ಓದಿ: SUPREME COURT: ಟ್ರಾಫಿಕ್ ಚಲನ್ ಕಟ್ಟದಿದ್ದರೆ ಸಂಕಷ್ಟ ಖಚಿತ, ಸುಪ್ರೀಂ ಕೋರ್ಟ್ ಮಹತ್ವದ ಸಲಹೆ

Dailyhunt
Disclaimer: This content has not been generated, created or edited by Dailyhunt. Publisher: Navasamaja