Dailyhunt Logo
  • Light mode
    Follow system
    Dark mode
    • Play Story
    • App Story
BOLLYWOOD: ಬಾಬಿ ಡಿಯೋಲ್ ಜೊತೆಗಿನ ಹಳೇ ಪ್ರೀತಿಯ ನೆನಪು ಹಂಚಿಕೊಂಡ ಪೂಜಾ ಭಟ್!

BOLLYWOOD: ಬಾಬಿ ಡಿಯೋಲ್ ಜೊತೆಗಿನ ಹಳೇ ಪ್ರೀತಿಯ ನೆನಪು ಹಂಚಿಕೊಂಡ ಪೂಜಾ ಭಟ್!

Navasamaja.com 1 week ago

ಮುಂಬೈ: ಬಾಲಿವುಡ್‌ನ ಹಿರಿಯ ನಟ ಬಾಬಿ ಡಿಯೋಲ್ ಹಾಗೂ ಅವರ ಪತ್ನಿ ತಾನ್ಯಾ ಡಿಯೋಲ್ ಮದುವೆಯಾಗಿ ಮೂರು ದಶಕಗಳಾಗುತ್ತಾ ಬಂದಿವೆ. ಆದರೆ, ತಾನ್ಯಾ ಅವರ ಕೈ ಹಿಡಿಯುವ ಮುನ್ನ ಬಾಬಿ ಡಿಯೋಲ್ ಅವರು ಖ್ಯಾತ ನಟಿ (Bollywood) ಹಾಗೂ ನಿರ್ಮಾಪಕಿ ಪೂಜಾ ಭಟ್ ಅವರೊಂದಿಗೆ ಪ್ರೀತಿಯಲ್ಲಿದ್ದರು ಎಂಬ ವಿಷಯ ಸಿನಿಮಾ ವಲಯದಲ್ಲಿ ಗುಟ್ಟಾಗಿ ಉಳಿದಿಲ್ಲ.

ಇತ್ತೀಚೆಗೆ ನೀಡಿದ ಸಂದರ್ಶನವೊಂದರಲ್ಲಿ ಪೂಜಾ ಭಟ್ ಅವರು ಬಾಬಿ ಡಿಯೋಲ್ ಜೊತೆಗಿನ ತಮ್ಮ ಹಳೆಯ ಸಂಬಂಧವನ್ನು ತಮ್ಮ ಜೀವನದ ಒಂದು "ಸುಂದರ ಸಮಯ" ಎಂದು ಬಣ್ಣಿಸಿದ್ದು, ಆ ಪ್ರೀತಿ ಮುರಿದುಬೀಳಲು ಕಾರಣವೇನು ಎಂಬುದರ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಬಾಬಿ ಡಿಯೋಲ್‌ರನ್ನ ತುಂಬಾ ಪ್ರೀತಿಸಿದ್ದ ಎಂದ ಪೂಜಾ
ತಮ್ಮ ಮೊದಲ ಸಿನಿಮಾ 'ಡ್ಯಾಡಿ' ಯಶಸ್ವಿಯಾದ ನಂತರವೂ ತಂದೆ ಮಹೇಶ್ ಭಟ್ ಅವರ ಸೂಪರ್‌ಹಿಟ್ 'ಆಶಿಕಿ' ಚಿತ್ರದ ಆಫರ್ ಅನ್ನು ತಾವು ಏಕೆ ತಿರಸ್ಕರಿಸಿದೆ ಎಂಬುದನ್ನು ಪೂಜಾ ಭಟ್ ನೆನಪಿಸಿಕೊಂಡಿದ್ದಾರೆ. ಆ ಸಮಯದಲ್ಲಿ ತಮಗೆ ಚಿತ್ರರಂಗದಲ್ಲಿ ನಟನೆಯನ್ನು ವೃತ್ತಿಯನ್ನಾಗಿ ಮುಂದುವರಿಸಲು ಆಸಕ್ತಿ ಇರಲಿಲ್ಲ ಮತ್ತು ಅಂದಿನ ತಮ್ಮ ಪ್ರಿಯಕರನಿಗೂ ತಾವು ಸಿನಿಮಾದಲ್ಲಿ ನಟಿಸುವುದು ಇಷ್ಟವಿರಲಿಲ್ಲ ಎಂದು ಪೂಜಾ ಬಹಿರಂಗಪಡಿಸಿದ್ದಾರೆ. ಆ ಪ್ರಿಯಕರ ಬಾಬಿ ಡಿಯೋಲ್ ಅವರೇನಾ ಎಂದು ಪ್ರಶ್ನಿಸಿದಾಗ, ತಾವು ಬಾಬಿ ಅವರನ್ನು ಭೇಟಿಯಾಗಿದ್ದು ಅದಕ್ಕಿಂತ ಬಹಳ ವರ್ಷಗಳ ನಂತರ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಬಿ ಡಿಯೋಲ್ ಅವರನ್ನು ತಾವು ಗಾಢವಾಗಿ ಪ್ರೀತಿಸಿದ್ದಾಗಿ ಒಪ್ಪಿಕೊಂಡ ಪೂಜಾ, ಅವರಂತಹ ಅದ್ಭುತ ವ್ಯಕ್ತಿಯನ್ನು ಪ್ರೀತಿಸದಿರಲು ಹೇಗೆ ಸಾಧ್ಯ ಎಂದಿದ್ದಾರೆ. ಆದರೆ ಕಾಲಾನಂತರದಲ್ಲಿ ಇಬ್ಬರ ಆಲೋಚನೆಗಳು ಬೇರೆ ಬೇರೆ ದಿಕ್ಕಿನಲ್ಲಿ ಸಾಗಿದ್ದರಿಂದ ತಾವು ದೂರಾಗಬೇಕಾಯಿತು ಎಂದು ಅವರು ತಿಳಿಸಿದ್ದಾರೆ. ಬಾಬಿ ಡಿಯೋಲ್ ಅವರೊಂದಿಗಿನ ಬ್ರೇಕಪ್ ಬಗ್ಗೆ ಹೆಚ್ಚಿನ ವಿವರ ನೀಡಲು ನಿರಾಕರಿಸಿದ ಪೂಜಾ ಭಟ್, ಇಂದು ಅವರೊಬ್ಬರು ವಿವಾಹಿತ ಪುರುಷ ಹಾಗೂ ಮಕ್ಕಳ ತಂದೆಯಾಗಿದ್ದಾರೆ. ಅವರ ವೈಯಕ್ತಿಕ ಜೀವನದ ಗೌರವವನ್ನು ಕಾಯ್ದುಕೊಳ್ಳುವುದು ಮುಖ್ಯ ಎಂದಿದ್ದಾರೆ.

ಹಳೆ ಪ್ರೇಮಿಯನ್ನ ಹಾಡಿ ಹೊಗಳಿದ ನಟಿ
ಬಾಬಿ ಅವರ ವೃತ್ತಿಜೀವನದಲ್ಲಿ ಈಗ ಹೊಸ ಅಲೆಯೇ ಸೃಷ್ಟಿಯಾಗಿದ್ದು, 'ಅನಿಮಲ್' ಚಿತ್ರದಲ್ಲಿ ಅವರ ನಟನೆಯನ್ನು ನೋಡಿ ತಮಗೆ ಭಾರಿ ಸಂತೋಷವಾಗಿದೆ, ಆ ಇಡೀ ಚಿತ್ರಕ್ಕೆ ಅವರೇ ಕಳೆ ತಂದಿದ್ದರು ಎಂದು ಪೂಜಾ ಪ್ರಶಂಸಿಸಿದ್ದಾರೆ. ಹಳೆಯ ಸಂಬಂಧಗಳು ಎಷ್ಟು ದಿನ ಚೆನ್ನಾಗಿರಬೇಕಿತ್ತೋ ಅಷ್ಟು ದಿನ ಇದ್ದವು, ಈಗ ಅವರಿಗೂ ಮತ್ತು ತಮಗೂ ಪ್ರತ್ಯೇಕ ಜೀವನವಿದ್ದು, ಹಳೆಯ ವಿಷಯಗಳನ್ನು ಕೆದಕಿ ಇಂದಿನ ನೆಮ್ಮದಿಯನ್ನು ಹಾಳುಗೆಡವುವುದು ಸರಿಯಲ್ಲ ಎಂದು ಅವರು ತಿಳಿಸಿದ್ದಾರೆ.

ಬಾಬಿ ಡಿಯೋಲ್ 1996 ರಲ್ಲಿ ತಾನ್ಯಾ ಅವರನ್ನು ವಿವಾಹವಾಗಿ ಆರ್ಯಮನ್ ಮತ್ತು ಧರಂ ಎಂಬ ಇಬ್ಬರು ಗಂಡು ಮಕ್ಕಳ ತಂದೆಯಾಗಿದ್ದಾರೆ, ಪೂಜಾ ಭಟ್ 2003ರಲ್ಲಿ ಮನೀಶ್ ಮಖಿಜಾ ಅವರನ್ನು ಮದುವೆಯಾಗಿ 11 ವರ್ಷಗಳ ನಂತರ ವಿಚ್ಛೇದನ ಪಡೆದಿದ್ದರು.

ಇನ್ನು ನಟ ಬಾಬಿ ಡಿಯೋಲ್ ಅವರ ಮುಂದಿನ ಸಿನಿಮಾಗಳ ಬಗ್ಗೆ ಹೇಳುವುದಾದರೆ, ಅವರು ಸದ್ಯ ಅನುರಾಗ್ ಕಶ್ಯಪ್ ನಿರ್ದೇಶನದ ಬಹುನಿರೀಕ್ಷಿತ 'ಬಂದರ್' ಚಿತ್ರದ ಬಿಡುಗಡೆಗಾಗಿ ಕಾಯುತ್ತಿದ್ದಾರೆ. ನೈಜ ಘಟನೆಗಳಿಂದ ಪ್ರೇರಿತವಾಗಿರುವ ಈ ಚಿತ್ರವನ್ನು ನಿಖಿಲ್ ದ್ವಿವೇದಿ ನಿರ್ಮಿಸಿದ್ದು, ಸನ್ಯಾ ಮಲ್ಹೋತ್ರಾ, ಸಬಾ ಆಜಾದ್ ಮತ್ತು ರಾಜ್ ಬಿ ಶೆಟ್ಟಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. 2025ರ ಟೊರೊಂಟೊ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ರದರ್ಶನ ಕಂಡು ಭಾರಿ ಪ್ರಶಂಸೆ ಗಳಿಸಿರುವ ಈ ಸಿನಿಮಾ ಜೂನ್ 5 ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲು ಸಜ್ಜಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja