Dailyhunt Logo
  • Light mode
    Follow system
    Dark mode
    • Play Story
    • App Story
BREAKFAST RECIPE: ಐದು ಬೇಳೆಗಳಿಂದ ಮಾಡಿ ಈ ವಿಭಿನ್ನ ಚೀಸ್ ಚಿಲ್ಲಾ

BREAKFAST RECIPE: ಐದು ಬೇಳೆಗಳಿಂದ ಮಾಡಿ ಈ ವಿಭಿನ್ನ ಚೀಸ್ ಚಿಲ್ಲಾ

Navasamaja.com 1 day ago

ತಣ್ಣಗಿನ ಈ ದಿನಗಳಲ್ಲಿ ಬಿಸಿಬಿಸಿಯಾಗಿ ಹಾಗೂ ವಿಭಿನ್ನವಾಗಿ ಉಪಹಾರಗಳನ್ನು (Breakfast Recipe) ಸವಿಯಬೇಕು ಎನಿಸಿದರೆ ಐದು ರೀತಿಯ ಬೇಳೆಗಳಿಂದ ಮಾಡಲಾಗುವ ಈ ಚೀಸ್ ಚಿಲ್ಲಾ (Panchdaal Cheese Chilla) ಅತ್ಯುತ್ತಮ ಆಯ್ಕೆಯಾಗಿದೆ. ಸಾಮಾನ್ಯವಾಗಿ ಬೇಳೆ ಪಾಕೋಡಾ ಅಥವಾ ಪುಡ್ಲಾವನ್ನು ನೀವು ಸವಿದಿರಬಹುದು.

ಆದರೆ, ಐದು ಬೇಳೆಗಳ ಮಿಶ್ರಣ ಹಾಗೂ ಚೀಸ್ ಬಳಸಿ ತಯಾರಿಸುವ ಈ ರೆಸಿಪಿ ಅತ್ಯಂತ ರುಚಿಕರವಾಗಿದ್ದು, ಮಕ್ಕಳಿಗೂ ಕೂಡ ತುಂಬಾ ಇಷ್ಟವಾಗುತ್ತದೆ. ಮನೆಯಲ್ಲೇ ಸುಲಭವಾಗಿ ಈ ವಿಶಿಷ್ಟ ತಿಂಡಿಯನ್ನು ತಯಾರಿಸುವುದು ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಇಲ್ಲಿದೆ.

ಬೇಕಾಗುವ ಪದಾರ್ಥಗಳು:
* ಹಳದಿ ಹೆಸರು ಬೇಳೆ - 1 ಚಮಚ
* ಸಿಪ್ಪೆ ಸಹಿತ ಹಸಿರು ಹೆಸರು ಬೇಳೆ - 2 ಚಮಚ
* ಉದ್ದಿನ ಬೇಳೆ - 2 ಚಮಚ
* ತೊಗರಿ ಬೇಳೆ - 1 ಚಮಚ
* ಕಡಳೆ ಬೇಳೆ - ಅರ್ಧ ಚಮಚ
* ಬೆಳ್ಳುಳ್ಳಿ ಪೇಸ್ಟ್ - 2 ಟೀಸ್ಪೂನ್
* ಹಸಿಮೆಣಸಿನಕಾಯಿ ಪೇಸ್ಟ್ - 1 ಟೀಸ್ಪೂನ್
* ಚೀಸ್ ಕ್ಯೂಬ್ಸ್ - 2
* ಅಡುಗೆ ಸೋಡಾ - ಅರ್ಧ ಟೀಸ್ಪೂನ್
* ಉಪ್ಪು - ರುಚಿಗೆ ತಕ್ಕಷ್ಟು

ತಯಾರಿಸುವ ವಿಧಾನ:
* ಮೊದಲಿಗೆ ಎಲ್ಲಾ ಬೇಳೆಗಳನ್ನು ಸರಿಯಾಗಿ ತೊಳೆದು, ಸ್ವಲ್ಪ ನೀರುಹಾಕಿ ರುಬ್ಬಿಕೊಂಡು ದಪ್ಪ ಹದದ ಹಿಟ್ಟು ತಯಾರಿಸಿಕೊಳ್ಳಿ.
* ಈ ಹಿಟ್ಟಿಗೆ ಬೆಳ್ಳುಳ್ಳಿ ಪೇಸ್ಟ್, ಹಸಿಮೆಣಸಿನಕಾಯಿ ಪೇಸ್ಟ್, ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅಡುಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
* ಈಗ ಒಲೆಯ ಮೇಲೆ ದೋಸೆ ಹಂಚನ್ನು ಇಟ್ಟು ಕಾಯಿಸಿ. ಹಂಚಿನ ಮೇಲೆ ಸ್ವಲ್ಪ ಎಣ್ಣೆ ಸವರಿ.
* ತಯಾರಿಸಿಟ್ಟ ಬೇಳೆಯ ಹಿಟ್ಟನ್ನು ಹಂಚಿನ ಮೇಲೆ ಹಾಕಿ ವೃತ್ತಾಕಾರವಾಗಿ ತೆಳುವಾಗಿ ಹರಡಿ.
* ಚಿಲ್ಲಾದ ಮೇಲ್ಭಾಗವು ಬೆಂದ ಬಳಿಕ, ಅದರ ಮೇಲೆ ಚೀಸ್ ಅನ್ನು ತುರಿದು ಹಾಕಿ.
* ಚಿಲ್ಲಾವು ಗೋಲ್ಡನ್ ಬ್ರೌನ್ ಬಣ್ಣಕ್ಕೆ ಬರುವವರೆಗೆ ಮತ್ತು ಚೀಸ್ ಚೆನ್ನಾಗಿ ಕರಗುವವರೆಗೆ ಎರಡೂ ಕಡೆ ಬೇಯಿಸಿ.
* ಬಿಸಿಬಿಸಿಯಾದ ರುಚಿಕರವಾದ ಪಂಚ ಬೇಳೆಯ ಚೀಸ್ ಚಿಲ್ಲಾ ಸವಿಯಲು ಸಿದ್ಧ. ಇದನ್ನು ಹಸಿರು ಚಟ್ನಿ ಅಥವಾ ಟೊಮೆಟೊ ಸಾಸ್ ಜೊತೆ ಸವಿಯಲು ಅತ್ಯಂತ ರುಚಿಯಾಗಿರುತ್ತದೆ. ವಿಶೇಷವೆಂದರೆ ಇದು ಕಡಿಮೆ ಕ್ಯಾಲೊರಿಯನ್ನು ಹೊಂದಿದ್ದು, ಆರೋಗ್ಯಕ್ಕೂ ಬಹಳ ಒಳ್ಳೆಯದು.

Dailyhunt
Disclaimer: This content has not been generated, created or edited by Dailyhunt. Publisher: Navasamaja