ದಿನದ ಆರಂಭದಲ್ಲಿ ಪೌಷ್ಟಿಕಾಂಶಯುಕ್ತ ಹಾಗೂ ಆರೋಗ್ಯಕರ ಆಹಾರ (Breakfast Recipe) ಸೇವಿಸುವುದು ದೇಹಕ್ಕೆ ಅಗತ್ಯ ಶಕ್ತಿಯನ್ನು ನೀಡುತ್ತದೆ. ಕಡಿಮೆ ಸಮಯದಲ್ಲಿ ಮತ್ತು ಸುಲಭವಾಗಿ ತಯಾರಿಸಬಹುದಾದ ಮೊಳಕೆ ಕಾಳುಗಳ ಒಗ್ಗರಣೆ (Tadka Sprouts) ಬೆಳಗಿನ ತಿಂಡಿಗೆ ಅತ್ಯುತ್ತಮ ಆಯ್ಕೆಯಾಗಿದೆ.
ಕೆಲವೇ ನಿಮಿಷಗಳಲ್ಲಿ ತಯಾರಿಸುವ ಈ ಉಪಹಾರ ಹೇಗೆ ಮಾಡುವುದೆಂದು ನೋಡೋಣ. ಬೇಕಾಗುವ ಪದಾರ್ಥಗಳು: ಮಾಡುವ ವಿಧಾನ:
* ಮೊಳಕೆ ಬಂದ ಹೆಸರು ಕಾಳು - 1 ಸಣ್ಣ ಬೌಲ್
* ಎಣ್ಣೆ - 2 ದೊಡ್ಡ ಚಮಚ
* ಸಣ್ಣಗೆ ಹೆಚ್ಚಿದ ಈರುಳ್ಳಿ - 2
* ಸಣ್ಣಗೆ ಹೆಚ್ಚಿದ ಟೊಮೆಟೊ- 2
* ಸಣ್ಣಗೆ ಹೆಚ್ಚಿದ ಹಸಿ ಮೆಣಸಿನಕಾಯಿ - 2
* ಜೀರಿಗೆ - ಕಾಲು
* ಅರಿಶಿನ ಪುಡಿ - ಅರ್ಧ ಚಮಚ
* ಉಪ್ಪು - ರುಚಿಗೆ ತಕ್ಕಷ್ಟು
* ನೀರು - 1 ದೊಡ್ಡ ಚಮಚ
* ಮೊದಲಿಗೆ ಪಾತ್ರೆಯಲ್ಲಿ ಎಣ್ಣೆ ಕಾಯಿಸಿ, ಜೀರಿಗೆ ಹಾಕಿ ಸಿಡಿಯಲು ಬಿಡಿ.
* ನಂತರ ಹೆಚ್ಚಿದ ಹಸಿ ಮೆಣಸಿನಕಾಯಿ ಮತ್ತು ಈರುಳ್ಳಿ ಸೇರಿಸಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
* ಈಗ ಟೊಮೆಟೊ, ಅರಿಶಿನ ಪುಡಿ ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಟೊಮೆಟೊ ಮೆತ್ತಗಾಗುವವರೆಗೆ ಚೆನ್ನಾಗಿ ಬೇಯಿಸಿ.
* ಕೊನೆಯಲ್ಲಿ ಮೊಳಕೆ ಬಂದ ಕಾಳುಗಳನ್ನು ಹಾಕಿ ಮಿಕ್ಸ್ ಮಾಡಿ, ಒಂದು ಚಮಚ ನೀರು ಚಿಮುಕಿಸಿ ಸಣ್ಣ ಉರಿಯಲ್ಲಿ ಮುಚ್ಚಳ ಮುಚ್ಚಿ ಬೇಯಿಸಿದರೆ ರುಚಿಕರ ಮೊಳಕೆ ಕಾಳುಗಳ ಒಗ್ಗರಣೆ ಸಿದ್ಧ.

