Dailyhunt Logo
  • Light mode
    Follow system
    Dark mode
    • Play Story
    • App Story
BREAKING: ಅಮಿತಾಭ್ ಬಚ್ಚನ್ ನಿವಾಸ, ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ!

BREAKING: ಅಮಿತಾಭ್ ಬಚ್ಚನ್ ನಿವಾಸ, ಸರ್ಕಾರಿ ಕಚೇರಿಗಳಿಗೆ ಬಾಂಬ್ ಬೆದರಿಕೆ!

Navasamaja.com 13 hrs ago

ಮುಂಬೈ: ಮೇಯರ್ ಕಚೇರಿ, ನಟ ಅಮಿತಾಬ್ ಬಚ್ಚನ್ (Amitabh Bachchan) ಅವರ ಬಂಗಲೆ ಹಾಗೂ ಛತ್ರಪತಿ ಶಿವಾಜಿ ಮಹಾರಾಜ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸೇರಿದಂತೆ ಮುಂಬೈನ ಪ್ರಮುಖ ಸ್ಥಳಗಳಲ್ಲಿ ಸರಣಿ ಬಾಂಬ್ ( bomb threat) ಸ್ಫೋಟಿಸುವುದಾಗಿ ಬಂದ ಹೊಸ ಇಮೇಲ್ ಬೆದರಿಕೆಯಿಂದಾಗಿ ನಗರದಲ್ಲಿ ಭದ್ರತಾ ದಳಗಳು (Mumbai) ತೀವ್ರ ಎಚ್ಚರಿಕೆ ವಹಿಸಿವೆ.

ತಪಾಸಣೆಯಲ್ಲಿ ಲಭಿಸದ ಯಾವುದೇ ಸುಳಿವು
ಬೆದರಿಕೆ ಇಮೇಲ್ ಬಂದ ಹಿನ್ನೆಲೆಯಲ್ಲಿ ಬಾಂಬ್ ನಿಷ್ಕ್ರಿಯ ದಳ ಮತ್ತು ಭದ್ರತಾ ತಂಡಗಳು ಕೂಡಲೇ ಸೂಚಿತ ಸ್ಥಳಗಳಲ್ಲಿ ಕೂಲಂಕಷ ತಪಾಸಣೆ ನಡೆಸಿದವು. ಆದರೆ, ಯಾವುದೇ ಸ್ಫೋಟಕ ವಸ್ತುಗಳು ಅಥವಾ ಸಂಶಯಾಸ್ಪದ ಸಾಮಗ್ರಿಗಳು ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಇತ್ತೀಚಿನ ವಾರಗಳಲ್ಲಿ ಇಂತಹ ನಕಲಿ ಬೆದರಿಕೆ ಇಮೇಲ್‌ಗಳು ಪದೇ ಪದೇ ಬರುತ್ತಿರುವುದು ಮುಂದುವರಿದಿದೆ.

ಹಿಂದಿನ ಬೆದರಿಕೆಗಳ ಸರಣಿ
ಅಕ್ಟೋಬರ್ 23 ರಂದು ಬಿಎಂಸಿ ಕಚೇರಿಯಲ್ಲಿರುವ ಮುಂಬೈ ಮೇಯರ್ ಕಚೇರಿ, ಅಮಿತಾಬ್ ಬಚ್ಚನ್ ಅವರ ನಿವಾಸ ಹಾಗೂ ನವೆಂಬರ್ 27ರಂದು ಮಹಾಲಕ್ಷ್ಮಿ ರೇಸ್‌ಕೋರ್ಸ್‌ನಲ್ಲಿ ನಡೆಯಲಿರುವ ಗಾಯಕ ದಿಲ್ಜಿತ್ ದೋಸಾಂಜ್ ಅವರ ಸಂಗೀತ ಕಾರ್ಯಕ್ರಮದ ಸ್ಥಳದಲ್ಲಿ ಸ್ಫೋಟ ನಡೆಸುವುದಾಗಿ ಬೆದರಿಕೆ ಹಾಕಲಾಗಿತ್ತು. ಅಂದೆಯೂ ಅಧಿಕಾರಿಗಳು ಮೇಯರ್ ಕಚೇರಿಯಲ್ಲಿ ತೀವ್ರ ತಪಾಸಣೆ ನಡೆಸಿದ್ದು ಯಾವುದೇ ಅನುಮಾನಾಸ್ಪದ ವಸ್ತುಗಳು ಸಿಕ್ಕಿರಲಿಲ್ಲ. ಇದಲ್ಲದೆ, ಬಾಂಬೆ ಹೈಕೋರ್ಟ್, ಬಾಂಬೆ ಸ್ಟಾಕ್ ಎಂಚ್ ಹಾಗೂ ಬಚ್ಚನ್ ಅವರ ಜುಹು ಬಂಗಲೆ 'ಜಲ್ಸಾ' ಹೆಸರನ್ನೂ ಇತರೆ ಇಮೇಲ್‌ಗಳಲ್ಲಿ ಉಲ್ಲೇಖಿಸಲಾಗಿತ್ತು.

ಪೊಲೀಸರಿಂದ ಮುಂದುವರಿದ ತನಿಖೆ
ಸದ್ಯ ಪೊಲೀಸರು ಈ ಇಮೇಲ್‌ಗಳ ಮೂಲ ಹಾಗೂ ಕಳುಹಿಸಿದವರ ಪತ್ತೆಗಾಗಿ ತೀವ್ರ ತನಿಖೆ ಮುಂದುವರಿಸಿದ್ದಾರೆ. ತಪಾಸಣೆ ವೇಳೆ ಯಾವುದೇ ಅಪಾಯಕಾರಿ ವಸ್ತುಗಳು ಪತ್ತೆಯಾಗಿಲ್ಲವಾದರೂ, ಮುನ್ನೆಚ್ಚರಿಕೆ ಕ್ರಮವಾಗಿ ನಗರದಾದ್ಯಂತ ಬಿಗಿ ಭದ್ರತೆಯನ್ನು ಮುಂದುವರಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja