ಯು.ಎಸ್: ಅಮೆರಿಕದ (America) ಚಿಪ್ ತಯಾರಿಕಾ ದೈತ್ಯ ಕಂಪನಿ ಎನ್ವಿಡಿಯಾದ (NVIDIA) ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹುದ್ದೆಯಿಂದ ಜೆನ್ಸನ್ ಹುವಾಂಗ್ (Jensen Huang) ತಕ್ಷಣದಿಂದ ಜಾರಿಗೆ ಬರುವಂತೆ ನಿರ್ಗಮಿಸಿದ್ದಾರೆ. 1993ರಲ್ಲಿ ಕರ್ಟಿಸ್ ಪ್ರೀಮ್ ಮತ್ತು ಕ್ರಿಸ್ ಮಾಲಚೋವ್ಸ್ಕಿ ಜೊತೆ ಕಂಪನಿ ಸ್ಥಾಪಿಸಿದ್ದ ಅವರು, ಮೂರು ದಶಕಗಳಿಗೂ ಹೆಚ್ಚು ಕಾಲ ಅದನ್ನು ಮುನ್ನಡೆಸಿ ಕೃತಕ ಬುದ್ಧಿಮತ್ತೆ ಮತ್ತು ಅರೆವಾಹಕ ಕ್ಷೇತ್ರದಲ್ಲಿ ಜಾಗತಿಕ ಶಕ್ತಿಯಾಗಿ ಬೆಳೆಸಿದ್ದರು.
ಅವರ ನಿರ್ಗಮನದ ಹಿಂದೆ ವೈಯಕ್ತಿಕ ಸಂಬಂಧಗಳಿಗೆ ಸಂಬಂಧಿಸಿದ ವಿವಾದ ಮತ್ತು ವಿದೇಶಿ ಗುಪ್ತಚರ ಸಂಪರ್ಕದ ಅನುಮಾನಗಳು ಕಾರಣವಾಗಿವೆ. ಚೀನಾ ಗುಪ್ತಚರ ಜಾಲದೊಂದಿಗೆ ಸಂಪರ್ಕವಿದೆ ಎಂದು ಅಮೆರಿಕ ಗುಪ್ತಚರ ಸಂಸ್ಥೆಗಳು ಶಂಕಿಸಿದ್ದ ಮಹಿಳೆಯೊಂದಿಗೆ ಹಾಗೂ ಕಂಪನಿಯ ಉದ್ಯೋಗಿಯೊಬ್ಬರೊಂದಿಗೆ ಅವರಿಗೆ ಸಂಬಂಧವಿತ್ತು ಎಂಬ ವರದಿಗಳು ಹೊರಬಿದ್ದಿದ್ದವು. ಈ ಬಗ್ಗೆ ಸ್ವತಂತ್ರ ತನಿಖೆಗೆ ಮಂಡಳಿ ಆದೇಶಿಸಿತ್ತು. ಪತ್ನಿಗೆ ದ್ರೋಹ ಮಾಡಿದ್ದಾಗಿ ಹುವಾಂಗ್ ಈ ಹಿಂದೆ ಉದ್ಯೋಗಿಗಳಿಗೆ ಬರೆದ ಸಂದೇಶದಲ್ಲಿ ಒಪ್ಪಿಕೊಂಡು ಸಂಪೂರ್ಣ ಜವಾಬ್ದಾರಿ ಹೊತ್ತಿದ್ದರು.
ಸದ್ಯಕ್ಕೆ ಮುಖ್ಯ ಹಣಕಾಸು ಅಧಿಕಾರಿ ಕೋಲೆಟ್ ಕ್ರೆಸ್ ಅವರಿಗೆ ಹಂಗಾಮಿ ಮುಖ್ಯಸ್ಥೆಯ ಜವಾಬ್ದಾರಿ ನೀಡಲಾಗಿದೆ. ಅವರು 2013ರಿಂದ ಕಂಪನಿಯಲ್ಲಿದ್ದು, ಹಣಕಾಸು ಹೊಣೆಗಾರಿಕೆಯನ್ನೂ ಮುಂದುವರಿಸಲಿದ್ದಾರೆ. ಹಾರ್ವೆ ಸಿ. ಜೋನ್ಸ್ ಅವರನ್ನು ಕಂಪನಿಯ ಮೊದಲ ಮಂಡಳಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಶಾಶ್ವತ ಉತ್ತರಾಧಿಕಾರಿಗಾಗಿ ಮಂಡಳಿ ಒಳಗಿನ ಮತ್ತು ಹೊರಗಿನ ಅಭ್ಯರ್ಥಿಗಳನ್ನು ಪರಿಗಣಿಸುತ್ತಿದೆ.

