Dailyhunt Logo
  • Light mode
    Follow system
    Dark mode
    • Play Story
    • App Story
BREAKING NEWS : ಕೆಲವರಿಗೆ ಅದೇ ಖಾತೆ.. ಹಲವರ ಖಾತೆ ಚೇಂಜ್ : ಕರ್ನಾಟಕ ನೂತನ ಸಚಿವರ ಸಂಭವನೀಯ ಖಾತೆಗಳ ಮಾಹಿತಿ ಇಲ್ಲಿದೆ

BREAKING NEWS : ಕೆಲವರಿಗೆ ಅದೇ ಖಾತೆ.. ಹಲವರ ಖಾತೆ ಚೇಂಜ್ : ಕರ್ನಾಟಕ ನೂತನ ಸಚಿವರ ಸಂಭವನೀಯ ಖಾತೆಗಳ ಮಾಹಿತಿ ಇಲ್ಲಿದೆ

Navasamaja.com 1 week ago

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ.ಶಿವಕುಮಾರ್ (Cm Dk Shivakumar) ಅವರು ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ, ಅವರ ಸಚಿವ ಸಂಪುಟ (Cabinet) ಸೇರಿರುವ ಹಿರಿಯ ಹಾಗೂ ಪ್ರಮುಖ ನಾಯಕರ ಖಾತೆ ಹಂಚಿಕೆಯ ಕುರಿತು ರಾಜಕೀಯ ವಲಯದಲ್ಲಿ ಭಾರಿ ಕುತೂಹಲ ಮೂಡಿದೆ.

ನೂತನ ಸಚಿವರಿಗೆ ಸಿಗಬಹುದಾದ ಸಂಭವನೀಯ ಪ್ರಮುಖ ಇಲಾಖೆಗಳ ಪಟ್ಟಿ ಇಲ್ಲಿದೆ:

ಯಾರಿಗೆ ಯಾವ ಖಾತೆ ಸಿಗುವ ಸಾಧ್ಯತೆ ?

• ಡಾ. ಜಿ. ಪರಮೇಶ್ವರ್: ಕಂದಾಯ ಇಲಾಖೆ

• ಪ್ರಿಯಾಂಕ್ ಖರ್ಗೆ ಗೃಹ ಇಲಾಖೆ

• ಸತೀಶ್ ಜಾರಕಿಹೊಳಿ: ಲೋಕೋಪಯೋಗಿ (PWD) ಇಲಾಖೆ

• ಈಶ್ವರ್ ಖಂಡ್ರೆ: ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್

• ಎಂ.ಬಿ. ಪಾಟೀಲ್: ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ

• ರಾಮಲಿಂಗಾರೆಡ್ಡಿ: ಜಲಸಂಪನ್ಮೂಲ ಇಲಾಖೆ

• ಕೃಷ್ಣ ಬೈರೇಗೌಡ: ಬೆಂಗಳೂರು ನಗರಾಭಿವೃದ್ಧಿ ಇಲಾಖೆ

• ಕೆ.ಜೆ. ಜಾರ್ಜ್: ಇಂಧನ ಇಲಾಖೆ

• ಭೈರತಿ ಸುರೇಶ್: ಸಾರಿಗೆ ಇಲಾಖೆ

• ಯು.ಟಿ. ಖಾದರ್: ಆರೋಗ್ಯ ಇಲಾಖೆ

• ಕೆ.ಎಚ್. ಮುನಿಯಪ್ಪ: ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ

• ಶರಣಪ್ರಕಾಶ್ ಪಾಟೀಲ್: ವೈದ್ಯಕೀಯ ಶಿಕ್ಷಣ ಇಲಾಖೆ

ಡಾ. ಯತೀಂದ್ರ ಸಿದ್ದರಾಮಯ್ಯ: ನಗರಾಭಿವೃದ್ಧಿ ಅಥವಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ

ಇದು ಸದ್ಯಕ್ಕೆ ಲಭ್ಯವಾಗಿರುವ ಸಚಿವರ ಸಂಭವನೀಯ ಖಾತೆಗಳ ಕುರಿತ ಮಾಹಿತಿಯಾಗಿದ್ದು, ಅಧಿಕೃತ ಸಚಿವಾಲಯದ ಆದೇಶ ಹೊರಬಿದ್ದ ಬಳಿಕವಷ್ಟೇ ಯಾರಿಗೆ ಯಾವ ಖಾತೆ ಅಂತಿಮವಾಗಿದೆ ಎಂಬುದು ಸ್ಪಷ್ಟವಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja