ಮಹಾರಾಷ್ಟ್ರ: ಸೊಲ್ಲಾಪುರ (Solapur) ವಿಮಾನ ನಿಲ್ದಾಣದಲ್ಲಿ ( Airport ) ಗುರುವಾರ ತರಬೇತಿ ವಿಮಾನವೊಂದು (Trainee Aircraft) ಟೇಕ್ ಆಫ್ ಆಗುವ ವೇಳೆ ನಿಯಂತ್ರಣ ತಪ್ಪಿ ರನ್‌ವೇಯಿಂದ ಜಾರಿದ ಘಟನೆ ನಡೆದಿದೆ. ಅದೃಷ್ಟವಶಾತ್ ವಿಮಾನವನ್ನು ಚಲಾಯಿಸುತ್ತಿದ್ದ ಮಹಿಳಾ ತರಬೇತಿ ಪೈಲಟ್ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಂದು ಮಹಿಳಾ ತರಬೇತಿ ಪೈಲಟ್ ವಿಮಾನವನ್ನು ಟೇಕ್ ಆಫ್ ಮಾಡಲು ಪ್ರಯತ್ನಿಸುತ್ತಿದ್ದಾಗ ಈ ಅವಘಡ ಸಂಭವಿಸಿದೆ. ವಿಮಾನವು ಟೇಕ್ ಆಫ್ ಆಗುವ ವೇಳೆ ನಿಯಂತ್ರಣ ತಪ್ಪಿ ತನ್ನ ರನ್‌ವೇಯಿಂದ ಪಕ್ಕಕ್ಕೆ ಸರಿದಿದೆ.
ಘಟನಾ ಸ್ಥಳದಿಂದ ಲಭ್ಯವಾಗಿರುವ ದೃಶ್ಯಗಳ ಪ್ರಕಾರ, ವಿಮಾನವು ಮುಂಭಾಗಕ್ಕೆ ವಾಲಿಕೊಂಡಿದ್ದು, ಅದರ ಮೂತಿ ನೆಲಕ್ಕೆ ತಾಗಿದ ಸ್ಥಿತಿಯಲ್ಲಿದೆ.
ಘಟನೆ ನಡೆದ ಸಮಯದಲ್ಲಿ ವಿಮಾನದಲ್ಲಿ ಮಹಿಳಾ ತರಬೇತಿ ಪೈಲಟ್ ಹೊರತುಪಡಿಸಿ ಇನ್ನೂ ಎಷ್ಟು ಮಂದಿ ಪ್ರಯಾಣಿಸುತ್ತಿದ್ದರು ಎಂಬ ಬಗ್ಗೆ ನಿಖರ ಮಾಹಿತಿ ಇನ್ನೂ ಲಭ್ಯವಾಗಿಲ್ಲ. ಘಟನೆಯ ಕುರಿತು ಸಂಬಂಧಪಟ್ಟ ವಿಮಾನಯಾನ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: TEJASVI SURYA: ಮೆಟ್ರೋ ಜಟಾಪಟಿ, ಸಚಿವ ಕೃಷ್ಣ ಬೈರೇಗೌಡ ಆರೋಪಕ್ಕೆ ಸಂಸದ ತೇಜಸ್ವಿ ಸೂರ್ಯ ತಿರುಗೇಟು

