Dailyhunt Logo
  • Light mode
    Follow system
    Dark mode
    • Play Story
    • App Story
CHAMUNDI HILLS : ಆಷಾಡ ಮೂರನೇ ಶುಕ್ರವಾರ - ಲಕ್ಷ್ಮಿ ಅಲಂಕಾರದಲ್ಲಿ ಹಸಿರು ಸೀರೆಯುಟ್ಟು ಕಂಗೊಳಿಸಿದ ನಾಡದೇವತೆ

CHAMUNDI HILLS : ಆಷಾಡ ಮೂರನೇ ಶುಕ್ರವಾರ - ಲಕ್ಷ್ಮಿ ಅಲಂಕಾರದಲ್ಲಿ ಹಸಿರು ಸೀರೆಯುಟ್ಟು ಕಂಗೊಳಿಸಿದ ನಾಡದೇವತೆ

Navasamaja.com 2 weeks ago

ಮೈಸೂರು : ಆಷಾಢ ಮಾ(Ashada month) ಸದ ಮೂರನೆ ಶುಕ್ರವಾರ ಹಿನ್ನೆಲೆ ಇಂದು ಚಾಮುಂಡಿಬೆಟ್ಟದಲ್ಲಿ (Chamundi hills) ವಿಶೇಷ ಪೂಜಾ ಕೈಂಕರ್ಯಗಳು ನೆರವೇರಿದೆ. ಮುಂಜಾನೆಯಿಂದಲೇ ಚಾಮುಂಡಿಬೆಟ್ಟಕ್ಕೆ ಹರಿದು ಬಂದ ಭಕ್ತಾದಿಗಳು ಭಾರೀ ಸರದಿ ಸಾಲಿನಲ್ಲಿ ನಿಂತು ಚಾಮುಂಡೇಶ್ವರಿಯ ದರ್ಶನ ಪಡೆದಿದ್ದಾರೆ.

ವಿವಿಧ ಬಗೆಯ ಹೂವು ಹಣ್ಣುಗಳಿಂದ ದೇವಸ್ಥಾನಕ್ಕೆ ವಿಶೇಷ ಅಲಂಕಾರ ಮಾಡಲಾಗಿತ್ತು. ನೇರಳೆ ಬಣ್ಣದ ಸೀರೆಯಲ್ಲಿ ಕಂಗೊಳಿಸಿದ ಗರ್ಭಗುಡಿಯಲ್ಲಿರುವ ಚಾಮುಂಡೇಶ್ವರಿ ದೇವಿಗೆ ಅರ್ಚಕರು ಶೋಡಶೋಪಚಾರ ಪೂಜೆಗಳನ್ನು ಸಲ್ಲಿಸಿದರು. ಉತ್ಸವ ಮೂರ್ತಿಗೆ ಗಿಳಿ ಹಸಿರು ಬಣ್ಣದ ಸೀರೆ ಉಡಿಸಿ ಲಕ್ಷ್ಮಿ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗಿದ್ದು, ಬೆಳಗಿನ ಜಾವ 3.30 ರಿಂದಲೇ ಚಾಮುಂಡೇಶ್ವರಿ ಅಮ್ಮನವರಿಗೆ ವಿಶೇಷ ಪೂಜಾ ಕೈಂಕರ್ಯ, ವಿವಿಧ ಬಗೆಯ ಅಭಿಷೇಕಗಳನ್ನು ನೆರವೇರಿಸಲಾಯಿತು.

ವಿಐಪಿ ಶಿಫಾರಸ್ಸು ವಾಹನಗಳಿಗೆ ಬೆಟ್ಟದ ಮೇಲ್ಬಾಗಕ್ಕೆ ತೆರಳದಂತೆ ನಿರ್ಬಂಧ ವಿಧಿಸಿದ ಜಿಲ್ಲಾಡಳಿತವು
ಸಾರ್ವಜನಿಕರ ವಾಹನಕ್ಕೂ ಚಾಮುಂಡಿಬೆಟ್ಟಕ್ಕೆ ಪ್ರವೇಶ ನಿಷೇಧ ವಿಧಿಸಿತ್ತು. ಲಲತ್ ಮಹಲ್‌ ಪ್ಯಾಲೇಸ್ ಬಳಿಯಿರುವ ಶಶಿರಂಜನ್ ಮೈದಾನದಿಂದ ಬೆಟ್ಟಕ್ಕೆ ತೆರಳಲು ಸಾರ್ವಜನಿಕರಿಗೆ ಉಚಿ ಬಸ್ ಗಳ ವ್ಯವಸ್ಥೆ ಮಾಡಲಾಗಿತ್ತು.

SUPREME COURT: ಪ್ರಧಾನ ಮಂತ್ರಿಗಳನ್ನು ನಂಬಲು ಸಾಧ್ಯವಿಲ್ಲವೇ?": ಚುನಾವಣಾ ಆಯೋಗದ ಆಯ್ಕೆ ಸಮಿತಿ ವಿಚಾರದಲ್ಲಿ ಸುಪ್ರೀಂ ಕೋರ್ಟ್‌ಗೆ ಕೇಂದ್ರ ಪ್ರಶ್ನೆ

ನವದೆಹಲಿ: ಮುಖ್ಯ ಚುನಾವಣಾ ಆಯುಕ್ತರು (CEC) ಮತ್ತು ಚುನಾವಣಾ ಆಯುಕ್ತರ (EC) ಆಯ್ಕೆ ಸಮಿತಿಯಿಂದ ಭಾರತದ ಮುಖ್ಯ ನ್ಯಾಯಮೂರ್ತಿಗಳನ್ನು (CJI) ಹೊರಗಿಟ್ಟಿರುವುದನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ವೇಳೆ, ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್(Supreme Court) ನಡುವೆ ತೀವ್ರ ವಾದ-ಪ್ರತಿವಾದ ನಡೆದಿದೆ. "ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ನಿಷ್ಪಕ್ಷಪಾತತನ ಎದ್ದು ಕಾಣಬೇಕಲ್ಲವೇ?" ಎಂದು ಸುಪ್ರೀಂ ಕೋರ್ಟ್ ಶಂಕಿಸಿದಾಗ, "ಪ್ರಧಾನ ಮಂತ್ರಿಗಳ ನಿರ್ಧಾರವನ್ನು ನಂಬಲು ಸಾಧ್ಯವಿಲ್ಲವೇ?" ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮರುಪ್ರಶ್ನೆ ಹಾಕಿದೆ.

2023ರ 'ಮುಖ್ಯ ಚುನಾವಣಾ ಆಯುಕ್ತ ಮತ್ತು ಇತರ ಚುನಾವಣಾ ಆಯುಕ್ತರ (ಆಯ್ಕೆ, ಸೇವಾ ಷರತ್ತುಗಳು) ಕಾಯ್ದೆ'ಯ ಸಾಂವಿಧಾನಿಕ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಕೆಯಾಗಿರುವ ಸರಣಿ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ನಡೆಸುತ್ತಿದೆ.

ಸುಪ್ರೀಂ ಕೋರ್ಟ್ ಎತ್ತಿದ ಪ್ರಮುಖ ಪ್ರಶ್ನೆಗಳೇನು?
ಸಿಜೆಐ ಅವರನ್ನು ಹೊರಗಿಟ್ಟಿದ್ದೇಕೆ?: ಸಿಬಿಐ (CBI) ನಿರ್ದೇಶಕರು ಹಾಗೂ ಲೋಕಪಾಲರ ಆಯ್ಕೆ ಸಮಿತಿಯಲ್ಲಿ ಮುಖ್ಯ ನ್ಯಾಯಮೂರ್ತಿಗಳು (CJI) ಭಾಗಿಯಾಗಿದ್ದಾರೆ. ಪ್ರಜಾಪ್ರಭುತ್ವದ ಅತ್ಯಂತ ಪ್ರಮುಖ ಹುದ್ದೆಗಳಾದ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಅವರನ್ನು ಏಕೆ ಹೊರಗಿಡಲಾಯಿತು ಎಂದು ಸುಪ್ರೀಂ ಕೋರ್ಟ್ ಪ್ರಶ್ನಿಸಿತು.

2:1 ಬಹುಮತದ ಗೊಂದಲ: ಪ್ರಸ್ತುತ ನಿಯಮದಂತೆ ಆಯ್ಕೆ ಸಮಿತಿಯಲ್ಲಿ ಪ್ರಧಾನಿ, ಅವರು ನೇಮಿಸುವ ಕೇಂದ್ರ ಸಚಿವರು ಹಾಗೂ ವಿಪಕ್ಷ ನಾಯಕರಿರುತ್ತಾರೆ. ಅಂದರೆ ಸರ್ಕಾರದ ಕಡೆಯೇ 2:1 ಬಹುಮತವಿರುತ್ತದೆ. ಚುನಾವಣಾ ಆಯುಕ್ತರು ಸ್ವತಂತ್ರವಾಗಿರಬೇಕು, ಹೀಗಾಗಿ ಆಯ್ಕೆ ಪ್ರಕ್ರಿಯೆಯಲ್ಲಿ ನಿಷ್ಪಕ್ಷಪಾತತನ ಎದ್ದು ಕಾಣಬೇಕು ಎಂದು ಪೀಠದಲ್ಲಿದ್ದ ನ್ಯಾಯಮೂರ್ತಿ ದತ್ತಾ ಅಭಿಪ್ರಾಯಪಟ್ಟರು.

ಸುಪ್ರೀಂ ಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ಪ್ರಬಲ ಸಮರ್ಥನೆ
ಕೇಂದ್ರ ಸರ್ಕಾರದ ಪರವಾಗಿ ವಾದ ಮಂಡಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕಾಯ್ದೆಯನ್ನು ಪ್ರಬಲವಾಗಿ ಸಮರ್ಥಿಸಿಕೊಂಡರು:
ಪ್ರಧಾನ ಮಂತ್ರಿಗಳ ಹುದ್ದೆಗೆ ತನ್ನದೇ ಆದ ಪವಿತ್ರತೆ ಹಾಗೂ ಘನತೆ ಇದೆ. ಆಯ್ಕೆ ಸಮಿತಿಯಲ್ಲಿ ಸರ್ಕಾರಕ್ಕೆ ಬಹುಮತವಿದೆ ಎಂದ ಮಾತ್ರಕ್ಕೆ ಪ್ರಧಾನಿ ಹಾಗೂ ಸಚಿವರು ದುರುದ್ದೇಶದಿಂದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಭಾವಿಸುವುದು ತಪ್ಪು. ಈ ಕಾಯ್ದೆಯ ಮೂಲಕ ಸಂಸತ್ತಿನ ನಿರ್ಧಾರ ಹಾಗೂ ವಿವೇಚನೆಯನ್ನು ಶಂಕಿಸಿದಂತಾಗುತ್ತದೆ. "ಪ್ರಧಾನಿಯವರ ನಿರ್ಧಾರವನ್ನೇ ನಂಬಲು ಸಾಧ್ಯವಿಲ್ಲ ಎನ್ನುವುದಾದರೆ, ಅವರು ಸಂಪುಟ ಸಚಿವರನ್ನು ಆಯ್ಕೆ ಮಾಡುವಾಗಲೂ ಯಾವುದೇ ಹಿರಿಯ ನ್ಯಾಯಮೂರ್ತಿಗಳನ್ನು ಸಂಪರ್ಕಿಸಬೇಕು ಎಂಬ ನಿಯಮ ಮಾಡಬೇಕೇ?" ಎಂದು ಮೆಹ್ತಾ ವಾದಿಸಿದರು.

ಉಚ್ಚ ನ್ಯಾಯಪೀಠಕ್ಕೆ ರವಾನಿಸಲು ಮನವಿ
ಈ ಪ್ರಕರಣವು ಸಂವಿಧಾನದ ಪ್ರಮುಖ ವ್ಯಾಖ್ಯಾನವನ್ನು ಒಳಗೊಂಡಿರುವುದರಿಂದ, ಇದನ್ನು Article 145(3) ರ ಅಡಿಯಲ್ಲಿ 5 ಸದಸ್ಯರ ಪೀಠಕ್ಕೆ (Larger Bench) ರವಾನಿಸಬೇಕು ಎಂದು ಕೇಂದ್ರ ಕೋರಿತು.

ಹಿನ್ನೆಲೆ ಏನು?
ಡಿಸೆಂಬರ್ 2023ರಲ್ಲಿ ಸಂಸತ್ತು ಹೊಸ ಕಾಯ್ದೆಯನ್ನು ಜಾರಿಗೆ ತಂದಿತ್ತು. ಇದಕ್ಕೂ ಕೆಲವು ತಿಂಗಳ ಮುನ್ನ ಸುಪ್ರೀಂ ಕೋರ್ಟ್ ತನ್ನ ಐತಿಹಾಸಿಕ ತೀರ್ಪಿನಲ್ಲಿ, ಹೊಸ ಕಾನೂನು ಬರುವವರೆಗೆ ಪ್ರಧಾನಿ, ವಿಪಕ್ಷ ನಾಯಕ ಮತ್ತು CJI ಒಳಗೊಂಡ ಸಮಿತಿಯೇ ಆಯುಕ್ತರನ್ನು ಆಯ್ಕೆ ಮಾಡಬೇಕು ಎಂದು ಸೂಚಿಸಿತ್ತು. ಆದರೆ, ಕೇಂದ್ರ ಸರ್ಕಾರ ತಂದ ಹೊಸ ಕಾಯ್ದೆಯಲ್ಲಿ ಸಿಜೆಐ ಅವರನ್ನು ಪಟ್ಟಿಯಿಂದ ಹೊರಗಿಡಲಾಗಿತ್ತು.

ಎರಡೂ ಕಡೆಯ ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್, ಪ್ರಕರಣವನ್ನು 5 ಸದಸ್ಯರ ಪೀಠಕ್ಕೆ ರವಾನಿಸಬೇಕೇ ಅಥವಾ ಬೇಡವೇ ಎಂಬುದರ ಕುರಿತು ತನ್ನ ತೀರ್ಪನ್ನು ಕಾಯ್ದಿರಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja