Dailyhunt Logo
  • Light mode
    Follow system
    Dark mode
    • Play Story
    • App Story
CONGRESS : ಕಾಂಗ್ರೆಸ್‌ಗೆ "ಮುಸ್ಲಿಂ" ತಲೆನೋವು ; 4 ಹೆಚ್ಚುವರಿ ಸಚಿವ ಸ್ಥಾನಕ್ಕೆ ಆಗ್ರಹ..!

CONGRESS : ಕಾಂಗ್ರೆಸ್‌ಗೆ "ಮುಸ್ಲಿಂ" ತಲೆನೋವು ; 4 ಹೆಚ್ಚುವರಿ ಸಚಿವ ಸ್ಥಾನಕ್ಕೆ ಆಗ್ರಹ..!

Navasamaja.com 4 months ago

ಬೆಂಗಳೂರು: ರಾಜ್ಯದಲ್ಲಿ ಸಿಎಂ ಡಿಕೆಶಿ (Dk Shivakumar ) ಸರ್ಕಾರ ಅಸ್ತಿತ್ವಕ್ಕೆ ಬಂದಿದ್ದು, ಸಂಪುಟ ರಚನೆ (Cabinet Expansion ) ಕೂಡ ಆಗಿದೆ. ಈ ನಡುವೆ ಮುಸ್ಲಿಂ (Muslim ) ಬಾಂಧವರ ಹೊಸ ಬೇಡಿಕೆ ಕಾಂಗ್ರೆಸ್ ಗೆ (Congress ) ತಲೆನೋವಾಗಿ ಪರಿಣಮಿಸಿದೆ.

ಕಾಂಗ್ರೆಸ್ ಹೈಕಮಾಂಡ್‌ಗೆ ಮುಸ್ಲಿಂ ಸಮುದಾಯದಿಂದ ಬಿಗಿ ಪಟ್ಟು ಎದುರಾಗಿದೆ. ಜಮೀರ್ ಅಹ್ಮದ್ ರನ್ನು ಸಚಿವ ಸ್ಥಾನದಿಂದ ಕೈಬಿಟ್ಟ ಬೆನ್ನಲ್ಲೇ
ಮುಸ್ಲಿಂರ ಅಸಮಾಧಾನ ಸ್ಫೋಟವಾಗಿದೆ. ಸದ್ಯ ಅಲ್ಪಸಂಖ್ಯಾತ ಕೋಟಾದಡಿ ಯು.ಟಿ. ಖಾದರ್ ಅವರಿಗೆ ಮಾತ್ರ ಸ್ಥಾನ ಸಿಕ್ಕಿದ್ದು, ಸಮುದಾಯಕ್ಕೆ ಕನಿಷ್ಠ 5 ಸಚಿವ ಸ್ಥಾನಗಳನ್ನು ನೀಡಬೇಕು ಎಂದು ಮುಸ್ಲಿಂ ಒಕ್ಕೂಟ ಹಾಗೂ ಧರ್ಮಗುರುಗಳು ಖಡಕ್ ಬೇಡಿಕೆ ಇಟ್ಟಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಸಮುದಾಯದ ಪ್ರಮುಖರ ಸಭೆಯಲ್ಲಿ ಹಿರಿಯ ಶಾಸಕರುಗಳಾದ ಜಮೀರ್ ಅಹ್ಮದ್, ಎನ್.ಎ. ಹ್ಯಾರಿಸ್, ತನ್ವೀರ್ ಸೇಠ್ ಮತ್ತು ಸಲೀಂ ಅಹ್ಮದ್ ಅವರಿಗೆ ಕಡ್ಡಾಯವಾಗಿ ಕ್ಯಾಬಿನೆಟ್ ದರ್ಜೆಯ ಸ್ಥಾನ ನೀಡಬೇಕು ಎಂದು ಒಕ್ಕೊರಲಿನಿಂದ ಆಗ್ರಹಿಸಲಾಗಿದೆ.

ಪ್ರಮುಖವಾಗಿ ಜಮೀರ್ ಅಹ್ಮದ್ ರನ್ನು ಸಚಿವಸ್ಥಾನದಿಂದ ಕೈ ಬಿಟ್ಟಿರೋದಕ್ಕೆ ಮುಸ್ಲಿಂ ಮುಖಂಡರು ಗರಂ ಆಗಿದ್ದಾರೆ. ಆಡಿಯೋ ವೈರಲ್ ಬೆನ್ನಲ್ಲೇ ಜಮೀರ್ ನನ್ನು ಸಚಿವರ ಪಟ್ಟಿಯಿಂದ ಕೈಬಿಡಲಾಗಿತ್ತು. ಇದೀಗ ಮೊದಲ ಲಿಸ್ಟ್ ನಲ್ಲಿ ಕೇವಲ ಯುಟಿ ಖಾದರ್ ಗೆ ಮಂತ್ರಿಗಿರಿ ಸಿಕ್ಕಿದೆ. ಹೀಗಾಗಿ ಮುಸ್ಲಿಂ ಮುಖಂಡರು ಒತ್ತಡ ಹೇರೋಕೆ ಶುರುಮಾಡಿದ್ದಾರೆ.

ರಾಜ್ಯದಲ್ಲಿ ಮುಸ್ಲಿಂ ಸಮುದಾಯದ ಬೆಂಬಲದಿಂದಲೇ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದು, ಪಕ್ಷವು ಸಮುದಾಯದ ಋಣ ತೀರಿಸಬೇಕು ಎಂದು ಮುಖಂಡರು ಹೇಳಿದ್ದಾರೆ. ಮುಂಬರುವ ಲೋಕಸಭೆ ಹಾಗೂ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಒಳಗೆ ಈ ಬೇಡಿಕೆ ಈಡೇರದಿದ್ದರೆ, ಚುನಾವಣೆಯಲ್ಲಿ ಸಮುದಾಯದ ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಬಹಿರಂಗ ಎಚ್ಚರಿಕೆ ನೀಡಿದ್ದಾರೆ. ಈ ಒತ್ತಡವು ಈಗ ಕಾಂಗ್ರೆಸ್ ವಲಯದಲ್ಲಿ ಭಾರಿ ರಾಜಕೀಯ ಕುತೂಹಲ ಮೂಡಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja