ಬೆಳಗಾವಿ: ಕುಂದಾನಗರಿ ಬೆಳಗಾವಿಯ(Belagavi) ಯೂನಿಯನ್ ಜಿಮ್ಖಾನಾದಲ್ಲಿ ನಡೆದಿದ್ದ ಭೀಕರ ಗುಂಡಿನ ದಾಳಿ(Shooting attack) ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಯಾಂಪ್ ಠಾಣೆ ಪೊಲೀಸರು(Police) ಚುರುಕಿನ ಕಾರ್ಯಾಚರಣೆ ನಡೆಸಿದ್ದು, ಮಹಾರಾಷ್ಟ್ರದ ಮತ್ತೋರ್ವ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪುಣೆ ಮೂಲದ ಸಾಹಿಲ್ ನಾಂಗಡೆ (30) ಬಂಧಿತ ಆರೋಪಿಯಾಗಿದ್ದು, ಇದರೊಂದಿಗೆ ಪ್ರಕರಣದಲ್ಲಿ ಬಂಧಿತರ ಸಂಖ್ಯೆ ಮೂರಕ್ಕೆ ಏರಿಕೆಯಾಗಿದೆ. ಈಗಾಗಲೇ ಇಬ್ಬರ ಬಂಧನ: ನಾಡಪಿಸ್ತೂಲ್ ಜಪ್ತಿ ಬಂಧಿತ ಆದಿರಾಜ್ ಸುತಾರನನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆತನ ಬಳಿಯಿದ್ದ ಒಂದು ಕಂಟ್ರಿ ಪಿಸ್ತೂಲ್ (ನಾಡಪಿಸ್ತೂಲ್) ಹಾಗೂ ಎರಡು ಸಜೀವ ಗುಂಡುಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಮುಖ ಆರೋಪಿ ಪ್ರಫುಲ್ ಪಾಟೀಲಗೆ ಬಲೆ ಪ್ರಕರಣದ ಹಿನ್ನೆಲೆ ಏನು? ಸದ್ಯ ಪ್ರಕರಣದ ತನಿಖೆಯನ್ನು ತೀವ್ರಗೊಳಿಸಿರುವ ಕ್ಯಾಂಪ್ ಠಾಣೆ ಪೊಲೀಸರು, ಪ್ರಮುಖ ಆರೋಪಿಯ ಬಂಧನಕ್ಕೆ ಬಲೆ ಬೀಸಿದ್ದು, ಘಟನೆಯ ಸಂಪೂರ್ಣ ಹಿನ್ನೆಲೆ ಹಾಗೂ ಭಾಗಿಯಾದ ಇತರರ ಪತ್ತೆಗೆ ಜಾಲ ಬೀಸಿದ್ದಾರೆ.
ಪ್ರಕರಣದ ಆರಂಭಿಕ ತನಿಖೆಯಲ್ಲಿ ಪೊಲೀಸರು ವಾಹನ ಚಾಲಕ, ಪುಣೆ ಮೂಲದ ರೋಹನ ಪೋಕಳೆ ಹಾಗೂ ಬೆಳಗಾವಿಯ ಕಾಮತಗಲ್ಲಿಯ ನಿವಾಸಿ ಆದಿರಾಜ್ ಸುತಾರ ಎಂಬಿಬ್ಬರನ್ನು ಬಂಧಿಸಿದ್ದರು.
ಪ್ರಕರಣದ ಮಾಸ್ಟರ್‌ಮೈಂಡ್ ಹಾಗೂ ಪ್ರಮುಖ ಆರೋಪಿ ಪ್ರಫುಲ್ ಪಾಟೀಲ ಪ್ರಸ್ತುತ ಮಹಾರಾಷ್ಟ್ರದಲ್ಲಿ ತಲೆಮರೆಸಿಕೊಂಡಿದ್ದಾನೆ ಎಂಬ ಖಚಿತ ಮಾಹಿತಿ ಲಭ್ಯವಾಗಿದೆ. ಆತನನ್ನು ಶೀಘ್ರವಾಗಿ ಬಂಧಿಸಲು ಬೆಳಗಾವಿ ಪೊಲೀಸರು ಎರಡು ವಿಶೇಷ ತಂಡಗಳನ್ನು ರಚಿಸಿದ್ದು, ಶೋಧ ಕಾರ್ಯವನ್ನು ತೀವ್ರಗೊಳಿಸಿದ್ದಾರೆ.
ಜುಲೈ 14ರಂದು ರಾತ್ರಿ ಬೆಳಗಾವಿಯ ಯೂನಿಯನ್ ಜಿಮ್ಖಾನಾದಲ್ಲಿ ಪ್ರಫುಲ್ ಪಾಟೀಲ ಹಾಗೂ ಆತನ ಸಹಚರರು ಸಾರ್ವಜನಿಕರನ್ನು ಹಾಗೂ ಕೆಲವರನ್ನು ಬೆದರಿಸುವ ದುರುದ್ದೇಶದಿಂದ ಗಾಳಿಯಲ್ಲಿ ಗುಂಡು ಹಾರಿಸಿ ಗೂಂಡಾಗಿರಿ ನಡೆಸಿದ್ದರೆನ್ನಲಾಗಿದೆ. ಈ ಬೆದರಿಕೆ ಘಟನೆಗೆ ಸಂಬಂಧಿಸಿದಂತೆ ಸುರೇಶ್ ಜಾಲಗಾರ ಎಂಬುವವರು ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

