Dailyhunt Logo
  • Light mode
    Follow system
    Dark mode
    • Play Story
    • App Story
CRIME: ಬೆಂಗಳೂರಲ್ಲಿ ಖತರ್ನಾಕ್ ಸರಗಳ್ಳರ ಅಟ್ಟಹಾಸ, ಮಾಂಗಲ್ಯ ಸರ ದೋಚಿ ಪರಾರಿ!- VIDEO

CRIME: ಬೆಂಗಳೂರಲ್ಲಿ ಖತರ್ನಾಕ್ ಸರಗಳ್ಳರ ಅಟ್ಟಹಾಸ, ಮಾಂಗಲ್ಯ ಸರ ದೋಚಿ ಪರಾರಿ!- VIDEO

Navasamaja.com 7 hrs ago

ಬೆಂಗಳೂರು: ಬೆಳಗಿನ ಜಾವ ರಸ್ತೆಯಲ್ಲಿ ನಡೆದುಹೋಗುತ್ತಿದ್ದ ಮಹಿಳೆಯ ಮೇಲೆ ದಾಳಿ ನಡೆಸಿ 25 ಗ್ರಾಂ ತೂಕದ ಮಾಂಗಲ್ಯ ಸರವನ್ನು ಎಗರಿಸಿ (chain snatching) ಕಳ್ಳರು ಪರಾರಿಯಾಗಿರುವ ಆಘಾತಕಾರಿ ಘಟನೆ ಪೀಣ್ಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಈ ಸಂಪೂರ್ಣ ಕೃತ್ಯ ಸಿಸಿಟಿವಿ (CCTV) ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೀಣ್ಯ ಸಮೀಪದ ದೊಡ್ಡಬಿದರಕಲ್ಲುವಿನ ನಿವಾಸಿ ವಿಜಯಮ್ಮ ಎನ್ನುವವರೇ ಚೈನ್ ಸ್ನಾಚಿಂಗ್‌ಗೆ ಒಳಗಾದ ದುರದೃಷ್ಟಕರ ಮಹಿಳೆ.

ಬೆಳಗಿನ ಜಾವ ಸುಮಾರಿಗೆ 5:10 ರ ವೇಳೆಗೆ ವಿಜಯಮ್ಮನವರು ತಮ್ಮ ಮನೆಯ ಬಳಿಯಿದ್ದ ಅಂಗಡಿಯೊಂದಕ್ಕೆ ನಡೆದುಕೊಂಡು ಹೋಗುತ್ತಿದ್ದರು. ಈ ವೇಳೆ ಬೈಕ್‌ನಲ್ಲಿ ಬಂದ ಇಬ್ಬರು ದರೋಡೆಕೋರರ ಪೈಕಿ ಹಿಂಬದಿ ಕುಳಿತಿದ್ದ ಖದೀಮ ದಿಢೀರನೆ ವಿಜಯಮ್ಮ ಅವರ ಮೇಲೆರಗಿದ್ದಾನೆ.

25 ಗ್ರಾಂ ತೂಕದ ಚಿನ್ನದ ಮಾಂಗಲ್ಯ ಸರವನ್ನು ಕಸಿಯಲು ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಪ್ರತಿರೋಧ ಒಡ್ಡಿದಾಗ ಆಕೆಯನ್ನು ನೆಲದ ಮೇಲೆ ಎಳೆದೊಯ್ದು, ಬಲವಂತವಾಗಿ ಸರವನ್ನು ಕಿತ್ತುಕೊಂಡು ಬೈಕ್‌ನಲ್ಲಿ ಕಾಲ್ಕಿತ್ತಿದ್ದಾನೆ.

ವಿಜಯಮ್ಮನವರು ನೆಲಕ್ಕೆ ಬಿದ್ದು ಮುಖ ಹಾಗೂ ಕತ್ತಿನ ಭಾಗಕ್ಕೆ ತೀವ್ರ ಗಾಯಗಳಾಗಿವೆ. ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿವೆ.

ಘಟನೆ ಕುರಿತು ಪೀಣ್ಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja