Dailyhunt
CRIME : ಹುಬ್ಬಳ್ಳಿ ಲವ್ ಜಿಹಾದ್ ಕೇಸ್​​​​​ಗೆ ಹೊಸ ಟ್ವಿಸ್ಟ್, ಮತ್ತು ಬರುವ ಜ್ಯೂಸ್ ನೀಡಿ ಅತ್ಯಾಚಾ*ರ?

CRIME : ಹುಬ್ಬಳ್ಳಿ ಲವ್ ಜಿಹಾದ್ ಕೇಸ್​​​​​ಗೆ ಹೊಸ ಟ್ವಿಸ್ಟ್, ಮತ್ತು ಬರುವ ಜ್ಯೂಸ್ ನೀಡಿ ಅತ್ಯಾಚಾ*ರ?

Navasamaja.com 1 week ago

ಹುಬ್ಬಳ್ಳಿಯಲ್ಲಿ (Hubli) ಸಂಚಲನ ಮೂಡಿಸಿರುವ 'ಲವ್ ಜಿಹಾದ್' (Love Jihad) ಆರೋಪದ ಪ್ರಕರಣ ಈಗ ಮತ್ತೊಂದು ಗಂಭೀರ ತಿರುವು (Crime) ಪಡೆದುಕೊಂಡಿದೆ. ಜಿಮ್ ಟ್ರೈನರ್ (Gym Trainer) ಸಮೀರ್ ವಿರುದ್ಧ ಇದೀಗ ಸಂತ್ರಸ್ತ ಯುವತಿಯು ಅತ್ಯಾಚಾರದ ಗಂಭೀರ ಆರೋಪ ಮಾಡಿದ್ದು, ವಿಡಿಯೋ ಹೇಳಿಕೆಯೊಂದನ್ನು ಬಿಡುಗಡೆ ಮಾಡುವ ಮೂಲಕ ತನಗಾದ ಅನ್ಯಾಯವನ್ನು ವಿವರಿಸಿದ್ದಾಳೆ.

ಯುವತಿ ಬಿಡುಗಡೆ ಮಾಡಿರುವ ವಿಡಿಯೋ ಹೇಳಿಕೆಯ ಪ್ರಕಾರ, ಸಮೀರ್‌ನ ಸಹೋದರಿ ತೈಸಿಮ್ ಮುಲ್ಲಾ ಈಕೆಗೆ ಮೊದಲೇ ಪರಿಚಯವಿದ್ದಳು. "ತೈಸಿಮ್ ನನ್ನ ಸ್ನೇಹಿತೆಯಾಗಿದ್ದು, ಆಕೆಯೇ ತನ್ನ ಸಹೋದರ ಸಮೀರ್‌ನನ್ನು ಪರಿಚಯಿಸಿದ್ದಳು.

ಆತ ತುಂಬಾ ಚೆನ್ನಾಗಿ ಜಿಮ್ ತರಬೇತಿ ನೀಡುತ್ತಾನೆ ಎಂದು ಆಕೆ ಹೇಳಿದ್ದಳು. ಹೀಗೆ ಜಿಮ್‌ನಲ್ಲಿ ಶುರುವಾದ ಪರಿಚಯ ಮುಂದೆ ಬರ್ತ್‌ಡೇ ಪಾರ್ಟಿ ಹಾಗೂ ವೀಕೆಂಡ್ ಪಾರ್ಟಿಗಳ ಮೂಲಕ ಆತ್ಮೀಯತೆಗೆ ತಿರುಗಿತ್ತು ಎಂದು ಯುವತಿ ತಿಳಿಸಿದ್ದಾಳೆ.

ಆತ್ಮೀಯತೆಯ ದುರುಪಯೋಗ ಪಡಿಸಿಕೊಂಡ ಸಮೀರ್, ಒಂದು ದಿನ ಯುವತಿಯನ್ನು ತನ್ನ ಮನೆಗೆ ಕರೆದೊಯ್ದಿದ್ದ ಎನ್ನಲಾಗಿದೆ. ಅಲ್ಲಿ ಆಕೆಗೆ ಅಮಲು ಬರುವಂತಹ ಜ್ಯೂಸ್ ನೀಡಿ, ಆಕೆ ಪ್ರಜ್ಞೆ ತಪ್ಪಿದಾಗ ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾಳೆ. ಆ ಕೃತ್ಯವನ್ನು ವಿಡಿಯೋ ಮಾಡಿಕೊಂಡಿದ್ದ ಎಂಬ ವಿಷಯ ನನಗೆ ಆಮೇಲೆ ತಿಳಿಯಿತು ಎಂದು ಸಂತ್ರಸ್ತೆ ಕಣ್ಣೀರಿಟ್ಟಿದ್ದಾಳೆ.

ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್:

ಅತ್ಯಾಚಾರದ ವಿಡಿಯೋವನ್ನು ಇಟ್ಟುಕೊಂಡು ಸಮೀರ್ ತನಗೆ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ಯುವತಿ ದೂರಿದ್ದಾಳೆ. ಆ ವಿಡಿಯೋ ತೋರಿಸಿ ಬೆದರಿಕೆ ಹಾಕುತ್ತಿದ್ದರಿಂದ ನಾನು ಅಸಹಾಯಕಳಾಗಿದ್ದೆ ಎಂದು ಆಕೆ ಹೇಳಿಕೊಂಡಿದ್ದಾಳೆ. ಈ ಹೇಳಿಕೆಯು ಈಗ ಪ್ರಕರಣದ ತನಿಖೆಗೆ ಹೊಸ ಆಯಾಮ ನೀಡಿದ್ದು, ಹಿಂದೂ ಸಂಘಟನೆಗಳ ಆಕ್ರೋಶಕ್ಕೆ ಮತ್ತಷ್ಟು ತುಪ್ಪ ಸುರಿದಂತಾಗಿದೆ.

ಸದ್ಯ ಪೊಲೀಸರು ಯುವತಿಯ ಈ ಹೇಳಿಕೆಯನ್ನು ಆಧರಿಸಿ ತನಿಖೆ ಮುಂದುವರಿಸಿದ್ದು, ಆರೋಪಿ ಸಮೀರ್ ವಿರುದ್ಧ ಕಾನೂನು ಕ್ರಮ ಜರುಗಿಸಲು ಸಜ್ಜಾಗಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja