Dailyhunt Logo
  • Light mode
    Follow system
    Dark mode
    • Play Story
    • App Story
CRIME: ಹೂಡಿಕೆ ಹೆಸರಲ್ಲಿ ಹಣ ಪಡೆದು ಅ*ತ್ಯಾಚಾರ ಕೇಸ್ ಹಾಕುವುದಾಗಿ ಬೆದರಿಕೆ - ಕಿರಾತಕಿ ಝೀನತ್ ಬಂಧನ

CRIME: ಹೂಡಿಕೆ ಹೆಸರಲ್ಲಿ ಹಣ ಪಡೆದು ಅ*ತ್ಯಾಚಾರ ಕೇಸ್ ಹಾಕುವುದಾಗಿ ಬೆದರಿಕೆ - ಕಿರಾತಕಿ ಝೀನತ್ ಬಂಧನ

Navasamaja.com 2 weeks ago

ಡುಪಿ: ರಿಯಲ್ ಎಸ್ಟೇಟ್ ವ್ಯವಹಾರದ ಹೆಸರಿನಲ್ಲಿ ಉದ್ಯಮಿಯೊಬ್ಬರಿಗೆ (Business man) ದೊಡ್ಡ ಮೊತ್ತದ ಹಣ ವಂಚಿಸಿ (Money fraud), ಬಳಿಕ ಅವರಿಗೆ ಜೀವ ಬೆದರಿಕೆ ಒಡ್ಡುತ್ತಿದ್ದ ಮಹಿಳೆಯೊಬ್ಬಳನ್ನು ಉಡುಪಿಯ (Udupi) ನಗರ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ.

ಬಂಧಿತಳನ್ನು ಝೀನತ್ ಇಬ್ರಾಹಿಂ (Zeenat Ibrahim) ಎಂದು ಗುರುತಿಸಲಾಗಿದ್ದು, ಈಕೆ ಹೂಡಿಕೆಯ ಆಮಿಷವೊಡ್ಡಿ ಹಣ ಲೂಟಿ ಮಾಡಿದ ಗಂಭೀರ ಆರೋಪ ಎದುರಿಸುತ್ತಿದ್ದಾಳೆ.

ಈ ದೂರಿನ ಪ್ರಕಾರ ಮಹಿಳೆ ಮೊದಲು ಸದರಿ ಉದ್ಯಮಿಯೊಂದಿಗೆ ನಿಕಟ ಸಂಪರ್ಕ ಬೆಳೆಸಿಕೊಂಡು ಜಂಟಿಯಾಗಿ ಹೊಸ ಕಚೇರಿಯನ್ನು ಆರಂಭಿಸಿದ್ದಳು. ತದನಂತರ ಭೂಮಿ ಖರೀದಿಸುವ ನೆಪದಲ್ಲಿ ಅವರಿಂದ ಹಂತಹಂತವಾಗಿ ಒಟ್ಟು 70 ಲಕ್ಷ ರೂಪಾಯಿಗಳನ್ನು ಪಡೆದುಕೊಂಡಿದ್ದಳು. ಆದರೆ, ಆ ಹಣವನ್ನು ಉದ್ದೇಶಿತ ಜಮೀನು ವ್ಯವಹಾರಕ್ಕೆ ಬಳಸದೆ ತನ್ನ ಸ್ವಂತದ ಹಾಗೂ ವೈಯಕ್ತಿಕ ಅಗತ್ಯಗಳಿಗಾಗಿ ದುರುಪಯೋಗಪಡಿಸಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ.

ಯಾವಾಗ ಉದ್ಯಮಿ ತಾನು ನೀಡಿದ್ದ ಹಣವನ್ನು ಮರಳಿ ಕೇಳಲು ಆರಂಭಿಸಿದರೋ, ಆಗ ಝೀನತ್ ತನ್ನ ಅಸಲಿ ರೂಪ ತೋರಿಸಿದ್ದಾಳೆ. ಹಣ ಕೊಡದಿದ್ದರೆ ಸುಳ್ಳು ಅತ್ಯಾಚಾರದ ಮೊಕದ್ದಮೆ ಹೂಡುವುದಾಗಿ ಹಾಗೂ ಅಶ್ಲೀಲ ದೃಶ್ಯಾವಳಿಗಳನ್ನು ಬಳಸಿ ಸಮಾಜದಲ್ಲಿ ಮಾನಹಾನಿ ಮಾಡುವುದಾಗಿ ಬ್ಲ್ಯಾಕ್‌ಮೇಲ್ ಮಾಡಿದ್ದಾಳೆ. ಅಷ್ಟೇ ಅಲ್ಲದೆ ಅವರ ಕುಟುಂಬಸ್ಥರನ್ನು ಅಪಹರಿಸಿ ಕೊಲೆ ಮಾಡುವುದಾಗಿ ಹೆದರಿಸಿದ್ದಾಳೆ. ಸದ್ಯ ನ್ಯಾಯಾಲಯ ಈಕೆಯನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿದೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja