ಭೋಪಾಲ್: ಮಧ್ಯಪ್ರದೇಶದ (Madhya Pradesh) ಛತ್ತರಪುರದಲ್ಲಿ ಕೌಟುಂಬಿಕ ಕಲಹವೊಂದು ಭೀಕರ ದುರಂತದಲ್ಲಿ (Crime) ಅಂತ್ಯವಾಗಿದೆ. ದೀರ್ಘಕಾಲದಿಂದ ಪತ್ನಿಯೊಂದಿಗೆ (Wife) ಜಗಳವಾಡುತ್ತಿದ್ದ ಪತಿಯೊಬ್ಬ (Husband) ಆಕೆಗೆ ಹೊಡೆಯಲು ಹೋಗಿ ಪತ್ನಿಯ ಕೈಯಿಂದಲೇ ಪೆಟ್ಟು ತಿಂದು ಪ್ರಾಣ ಕಳೆದುಕೊಂಡಿರುವ ಘಟನೆ ವರದಿಯಾಗಿದೆ.
ಛತ್ತರಪುರದ ಶಿವನಗರ ಕಾಲೋನಿಯಲ್ಲಿ ಈ ಘಟನೆ ನಡೆದಿದೆ. ಮೃತನನ್ನು ದೀನದಯಾಳ್ ಕುಶ್ವಾಹ ಎಂದು ಗುರುತಿಸಲಾಗಿದೆ. ಈತನ ಪತ್ನಿ ನೀಲಂ ಕಳೆದ ಕೆಲವು ವರ್ಷಗಳಿಂದ ತನ್ನ ಪೋಷಕರ ಮನೆಯಲ್ಲಿ ವಾಸಿಸುತ್ತಿದ್ದಳು. ಘಟನೆ ನಡೆದ ದಿನ ದೀನದಯಾಳ್ ತನ್ನ ಪತ್ನಿಯ ತವರು ಮನೆಗೆ ಹೋಗಿದ್ದನು. ಅಲ್ಲಿ ದಂಪತಿಗಳ ನಡುವೆ ಗಂಭೀರ ಮಾತಿನ ಚಕಮಕಿ ನಡೆದಿದ್ದು, ಅದು ನೋಡನೋಡುತ್ತಿದ್ದಂತೆ ವಿಕೋಪಕ್ಕೆ ತಿರುಗಿದೆ.
ಕುಟುಂಬದ ಸದಸ್ಯರು ನೀಡಿರುವ ಮಾಹಿತಿ ಪ್ರಕಾರ, ದೀನದಯಾಳ್ ತವರು ಮನೆಗೆ ಆಗಾಗ ಕುಡಿದು ಬಂದು ಗಲಾಟೆ ಮಾಡುತ್ತಿದ್ದನು. ಅಷ್ಟೇ ಅಲ್ಲದೆ, ತನ್ನೊಂದಿಗೆ ಸಂಸಾರ ಮಾಡಲು ಮನೆಗೆ ವಾಪಸ್ ಬರುವಂತೆ ಪತ್ನಿ ನೀಲಂಗೆ ಬಲವಂತ ಮಾಡಿ ಆಕೆಯ ಮೇಲೆ ಹಲ್ಲೆ ನಡೆಸುತ್ತಿದ್ದ ಎನ್ನಲಾಗಿದೆ. ಈ ಬಾರಿಯೂ ಅದೇ ರೀತಿ ಜಗಳ ನಡೆದಾಗ, ಪತಿ ದೀನದಯಾಳ್ ಪತ್ನಿಯ ಮೇಲೆ ಕೈ ಮಾಡಿದ್ದಾನೆ. ಇದರಿಂದ ಆಕ್ರೋಶಗೊಂಡ ನೀಲಂ, ಪತಿಗೆ ತಿರುಗಿ ಬಿದ್ದಿದ್ದಾಳೆ. ಜಗಳ ತಾರಕಕ್ಕೇರಿ ಆಕೆ ಪತಿಯನ್ನು ಮನಬಂದಂತೆ ಥಳಿಸಿದ್ದು, ತೀವ್ರವಾಗಿ ಗಾಯಗೊಂಡ ದೀನದಯಾಳ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಘಟನೆಯ ನಂತರ ಆರೋಪಿ ಪತ್ನಿ ನೀಲಂ ಕುಶ್ವಾಹ ತಾನಾಗಿಯೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ ಮತ್ತು ನಡೆದ ಘಟನೆಯ ಸಂಪೂರ್ಣ ವಿವರವನ್ನು ಪೊಲೀಸರಿಗೆ ತಿಳಿಸಿದ್ದಾಳೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ.
ಪತಿ ಸಾವಿನಿಂದ ಖಿನ್ನತೆ- ಇಬ್ಬರು ಕಂದಮ್ಮಗಳನ್ನು ಕತ್ತು ಹಿಸುಕಿ ಕೊಂದು ತಾಯಿಯೂ ಆತ್ಮಹ*ತ್ಯೆಗೆ ಯತ್ನ!
ಕೋಲಾರ: ಪತಿಯ ಅಗಲಿಕೆಯ ದುಃಖ ತಾಳಲಾರದೆ ಇಬ್ಬರು ಕರುಳ ಕುಡಿಗಳನ್ನು (Children) ಕೊಂದು ತಾಯಿಯೂ (Mother) ಆತ್ಮಹತ್ಯೆಗೆ (Self Harm) ಯತ್ನಿಸಿದ ಹೃದಯವಿದ್ರಾವಕ ಘಟನೆಯೊಂದು (Crime) ಕೋಲಾರ (Kolar) ಜಿಲ್ಲೆಯ ಮುಳಬಾಗಿಲು ತಾಲೂಕಿನ ಆಲಂಗೂರು ಗ್ರಾಮದಲ್ಲಿ ನಡೆದಿದೆ.
ಮೂಲತಃ ಆಂಧ್ರಪ್ರದೇಶದ ವಿನಾಯಕಪುರಂ ನಿವಾಸಿಗಳಾದ ಬಾಬು ಮತ್ತು ಬುಜ್ಜಮ್ಮ (22) ದಂಪತಿ ಕಳೆದ ಒಂದು ವರ್ಷದಿಂದ ಆಲಂಗೂರಿನ ಮಾವಿನ ತೋಪಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಇವರಿಗೆ ಮೂರು ವರ್ಷದ ಸರಸ್ವತಿ ಹಾಗೂ ಒಂದು ವರ್ಷದ ಹೇಮಾಶ್ರೀ ಎಂಬ ಇಬ್ಬರು ಹೆಣ್ಣು ಮಕ್ಕಳಿದ್ದರು.
ಬದುಕು ಸುಸೂತ್ರವಾಗಿ ಸಾಗುತ್ತಿದ್ದಾಗಲೇ ಇತ್ತೀಚೆಗೆ ಈ ಕುಟುಂಬಕ್ಕೆ ವಿಧಿಯಾಟ ಎದುರಾಗಿತ್ತು. ಕೇವಲ ಇಪ್ಪತ್ತು ದಿನಗಳ ಹಿಂದೆಯಷ್ಟೇ ಪತಿ ಬಾಬು ರಸ್ತೆ ಅಪಘಾತವೊಂದರಲ್ಲಿ ದುರ್ಮರಣಕ್ಕೀಡಾಗಿದ್ದರು. ಪತಿಯ ಹಠಾತ್ ಸಾವಿನಿಂದ ತೀವ್ರ ಆಘಾತಕ್ಕೊಳಗಾಗಿದ್ದ ಬುಜ್ಜಮ್ಮ ತೀವ್ರ ಮಾನಸಿಕ ಖಿನ್ನತೆಗೆ ಜಾರಿದ್ದರು. ಪತಿಯಿಲ್ಲದ ಜೀವನ ತನಗೆ ಬೇಡ ಎಂದು ಭಾವಿಸಿದ ಆಕೆ, ತನ್ನ ಸಾವಿನ ನಂತರ ಮಕ್ಕಳ ಗತಿ ಏನು ಎಂಬ ಆತಂಕದಲ್ಲಿ ಇಬ್ಬರು ಕರುಳ ಕುಡಿಗಳನ್ನೇ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

