Dailyhunt Logo
  • Light mode
    Follow system
    Dark mode
    • Play Story
    • App Story
CRIME : ಪಾಯಸದಲ್ಲಿ ಪಾಷಾಣ ಹಾಕಿದ್ಲು! ಬಾತ್‌ರೂಂ ನೆಲದಡಿ ಪತಿ ಹೆ*ಣ ಹೂತು ಸಿಮೆಂಟ್ ಪ್ಲ್ಯಾಸ್ಟರ್!

CRIME : ಪಾಯಸದಲ್ಲಿ ಪಾಷಾಣ ಹಾಕಿದ್ಲು! ಬಾತ್‌ರೂಂ ನೆಲದಡಿ ಪತಿ ಹೆ*ಣ ಹೂತು ಸಿಮೆಂಟ್ ಪ್ಲ್ಯಾಸ್ಟರ್!

Navasamaja.com 2 weeks ago

ತ್ತರ ಪ್ರದೇಶ: ದೃಶ್ಯಂ ಸಿನಿಮಾ ಶೈಲಿಯನ್ನು ಮೀರಿಸುವಂತಹ ಭೀಕರ ಕೊಲೆ ಪ್ರಕರಣವೊಂದು (Crime) ಉತ್ತರ ಪ್ರದೇಶದ (Uttarpradesh) ಆಗ್ರಾದಲ್ಲಿ(Agra) ಬೆಳಕಿಗೆ ಬಂದಿದೆ. ಕಳೆದ 45 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬರನ್ನು ಆತನ ಪತ್ನಿಯೇ ಭೀಕರವಾಗಿ ಕೊಲೆ ಮಾಡಿ, ಶವವನ್ನು ತನ್ನದೇ ಮನೆಯ ಬಾತ್ ರೂಂ ನೆಲದಡಿಯಲ್ಲಿ ಹೂತು ಪ್ಲ್ಯಾಸ್ಟರ್ ಮಾಡಿದ್ದಾಳೆ.

ಮೃತರನ್ನು ಸುರೇಂದ್ರ ಶರ್ಮಾ ಎಂದು ಗುರುತಿಸಲಾಗಿದ್ದು, ಪೊಲೀಸರು ಬಾತ್ ರೂಂ ನೆಲವನ್ನು ಅಗೆದು ಕೊಳೆತ ಸ್ಥಿತಿಯಲ್ಲಿದ್ದ ಶವವನ್ನು ಹೊರತೆಗೆದಿದ್ದಾರೆ. ಕೊಲೆಗಾರ್ತಿ ಪತ್ನಿ ರೂಬಿಯನ್ನು ಸದ್ಯ ಪೊಲೀಸರು ಬಂಧಿಸಿದ್ದಾರೆ.

ಸ್ಕೆಚ್ ಹಾಕಿ ಕೊಂದದ್ದು ಹೇಗೆ?
ಸುರೇಂದ್ರ ಶರ್ಮಾ ಹಾಗೂ ರೂಬಿ ದಂಪತಿಗೆ ಮದುವೆಯಾಗಿ 16 ವರ್ಷಗಳಾಗಿದ್ದು, ಇವರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಮೇ 26 ರಂದು ಸುರೇಂದ್ರ ನಾಪತ್ತೆಯಾಗಿರುವ ಬಗ್ಗೆ ಸಿಕಂದ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪೊಲೀಸರ ತನಿಖೆಯ ವೇಳೆ ಕಂಗೆಡಿಸುವ ಸತ್ಯಗಳು ಹೊರಬಂದಿವೆ
ಬಾತ್‌ರೂಂ ನೆಲದಡಿಯೇ ಸಮಾಧಿ

ಕೊಲೆ ಮಾಡುವ ದಿನ ರೂಬಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಸುರೇಂದ್ರನ ಅಣ್ಣನ ಮನೆಗೆ ಕಳುಹಿಸಿದ್ದಳು.
ರಾತ್ರಿ ಪತಿಗೆ ಪ್ರೀತಿಯಿಂದ 'ಖೀರ್' (ಪಾಯಸ) ಮಾಡಿಕೊಟ್ಟು, ಅದರಲ್ಲಿ ನಿದ್ದೆ ಮಾತ್ರೆಗಳನ್ನು ಬೆರೆಸಿದ್ದಳು. ಪತಿ ಪ್ರಜ್ಞೆ ತಪ್ಪುತ್ತಿದ್ದಂತೆ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಮರುದಿನ ಬೆಳಗ್ಗೆ ಬಾತ್ ರೂಂನಲ್ಲಿ ದೊಡ್ಡ ಗುಂಡಿ ತೋಡಿ ಪತಿಯ ಶವವನ್ನು ಹೂತಿದ್ದಾಳೆ. ಯಾರಿಗೆ ಸಂಶಯ ಬಾರದಿರಲಿ ಎಂದು ಅದರ ಮೇಲೆ ಸಿಮೆಂಟ್ ಹಾಕಿ ಸೀಲ್ ಮಾಡಿದ್ದಾಳೆ.

'ದೃಶ್ಯಂ' ಸಿನಿಮಾ ರೇಂಜ್‌ನಲ್ಲಿ ಡ್ರಾಮಾ ಆಡಿದ ಕಿರಾತಕಿ!
ಪತಿಯನ್ನು ಕೊಂದ ನಂತರ ರೂಬಿ ಪೊಲೀಸರಿಗೆ ಮತ್ತು ನೆರೆಹೊರೆಯವರಿಗೆ ಜಾಣತನದಿಂದ ನಾಟಕವಾಡಿದ್ದಾಳೆ. ಪತಿ ನಾಪತ್ತೆಯಾಗಿದ್ದಾನೆ ಎಂದು ತಾನೇ ಹುಡುಕುವಂತೆ ನಟಿಸಿದ್ದಾಳೆ. ನೆರೆಹೊರೆಯವರ ಮುಂದೆ ಪತಿ ಇಲ್ಲದೇ ತಾನು ಅನಾಥೆಯಾದೆ ಎಂದು ಕಣ್ಣೀರು ಹಾಕುತ್ತಿದ್ದಳು.
ಆದರೆ, ಸುರೇಂದ್ರನ ಅಣ್ಣನಿಗೆ ರೂಬಿ ನಡವಳಿಕೆ ಹಾಗೂ ಆಕೆ ನೀಡುತ್ತಿದ್ದ ಹೇಳಿಕೆಗಳ ಮೇಲೆ ಅನುಮಾನ ಬಂದು ಪೊಲೀಸರಿಗೆ ಮತ್ತೊಮ್ಮೆ ತನಿಖೆ ನಡೆಸುವಂತೆ ಒತ್ತಾಯಿಸಿದ್ದರು. ಪೊಲೀಸರು ರೂಬಿಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆಕೆ ತಾನೇ ಕೊಂದಿದ್ದಾಗಿ ಒಪ್ಪಿಕೊಂಡು, ಶವ ಹೂತಿಟ್ಟ ಜಾಗವನ್ನು ತೋರಿಸಿದ್ದಾಳೆ.

ಕೊಲೆಗೆ ಅಸಲಿ ಕಾರಣವೇನು? ಸಹಾಯ ಮಾಡಿದವರು ಯಾರು?
ಸುರೇಂದ್ರ ಶರ್ಮಾ ಅವರನ್ನು ಪತ್ನಿ ರೂಬಿ ಕೇವಲ ಒಂಟಿಯಾಗಿ ಕೊಲೆ ಮಾಡಲು ಸಾಧ್ಯವೇ ಅಥವಾ ಇನ್ಯಾರಾದರೂ ಸಹಾಯ ಮಾಡಿದ್ದಾರಾ? ಮತ್ತು ಕೊಲೆಗೆ ಅಸಲಿ ಕಾರಣವೇನು? ಎಂಬುದು ಇನ್ನು ಸ್ಪಷ್ಟವಾಗಿಲ್ಲ. ಸದ್ಯ ಶವವನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಬೆಚ್ಚಿಬೀಳಿಸಿದ್ದ ನೀಲಿ ಡ್ರಂ ಕೇಸ್!
ಈ ಭೀಕರ ಘಟನೆಯು 2025ರ ಫೆಬ್ರವರಿಯಲ್ಲಿ ನಡೆದಿದ್ದ ಪ್ರಸಿದ್ಧ "ಬ್ಲೂ ಡ್ರಮ್" (ನೀಲಿ ಡ್ರಮ್) ಕೊಲೆ ಪ್ರಕರಣವನ್ನು ನೆನಪಿಸುವಂತಿದೆ. ಅಂದು ಮುಸ್ಕಾನ್ ಎಂಬಾಕೆ ತನ್ನ ಪ್ರೇಮಿಯೊಂದಿಗೆ ಸೇರಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಜಪೂತ್ ಎಂಬಾತನನ್ನು ಕೊಂದು, ಶವವನ್ನು ತುಂಡು ತುಂಡು ಮಾಡಿ ನೀಲಿ ಡ್ರಮ್‌ನಲ್ಲಿಟ್ಟು ಸಿಮೆಂಟ್‌ನಿಂದ ಮುಚ್ಚಿದ್ದಳು.

Dailyhunt
Disclaimer: This content has not been generated, created or edited by Dailyhunt. Publisher: Navasamaja