Dailyhunt Logo
  • Light mode
    Follow system
    Dark mode
    • Play Story
    • App Story
CRIME:  ಪ್ರೇಯಸಿ ಆತ್ಮಹ*ತ್ಯೆ ಸುದ್ದಿ ಕೇಳಿ ಪ್ರಿಯಕರನೂ ನೇಣಿಗೆ ಶರಣು

CRIME: ಪ್ರೇಯಸಿ ಆತ್ಮಹ*ತ್ಯೆ ಸುದ್ದಿ ಕೇಳಿ ಪ್ರಿಯಕರನೂ ನೇಣಿಗೆ ಶರಣು

Navasamaja.com 6 hrs ago

ಧಾರವಾಡ: ಪ್ರೇಯಸಿ (Lover) ಆತ್ಮಹತ್ಯೆ ಮಾಡಿಕೊಂಡ ಸುದ್ದಿ ತಿಳಿದು ಮನನೊಂದ ಪ್ರಿಯಕರ ನೇಣಿಗೆ ಶರಣಾಗಿದ್ದಾನೆ. ಈ ಘಟನೆ ದಾನೇಶ್ವರಿ ನಗರದ ಪಿಜಿ ಯೊಂದರಲ್ಲಿ ನಡೆದಿದೆ.

ಧಾರವಾಡ ತಾಲೂಕಿನ ಕೋಟಬಾಗಿ ಗ್ರಾಮದ ಮೂಲದ ತರುಣ್ ಸಾಗರ್ ಕುರಕುರಿ (21) ಆತ್ಮಹತ್ಯೆಗೆ ಶರಣಾದ ಯುವಕ.

ಈತ ಧಾರವಾಡ ನಗರದ ವಾಚ್ ಶಾಪ್ ಒಂದರಲ್ಲಿ ಕೆಲಸ ಮಾಡುತ್ತಿದ್ದನು.

ಮನೆಯಲ್ಲಿ ಹೆಚ್ಚು ಮೊಬೈಲ್ (Mobile) ಬಳಸುತ್ತಿದ್ದೀಯ ಎಂದು ಬೈದಿದ್ದಕ್ಕೆ ಆ.12 ರಂದು ಈತನ ಪ್ರೇಯಸಿ ಮೇಘಾ ಗುಬ್ಬನ್ನವರ್ (20) ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಳು. ಈಕೆಯ ಆತ್ಮಹತ್ಯೆ ಸುದ್ದಿ ಕೇಳಿ ಸ್ನೇಹಿತನ ರೂಮ್‌ನಲ್ಲಿ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸ್ನೇಹಿತನ ರೂಮ್‌ನಲ್ಲಿ ಶವವಾಗಿ ಪತ್ತೆ!

ತರುಣ್, ಗೆಳೆಯನ ರೂಮ್‌ನಲ್ಲಿ ಬಂದು ತಂಗಿದ್ದ‌. ಕಳೆದ ರಾತ್ರಿ ಗೆಳೆಯನ ಮುಂದೆ ಹುಡುಗಿ ಜೊತೆ ಜಗಳವಾಗಿದೆ, ಆಕೆಯ ಸಹೋದರನಿಗೆ ಈ ವಿಷಯ ಗೊತ್ತಾಗಿದೆ ಎಂದು ಹೇಳಿದ್ದ ಎನ್ನಲಾಗಿದೆ.

ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮೇಘಾ ಹಾಗೂ ತರುಣ್ ಮಧ್ಯೆ ಪ್ರೇಮ ಕಹಾನಿ ಇತ್ತು ಎಂಬುದು ಇದೀಗ ಗೊತ್ತಾಗಿದೆ. ಈ‌ ಬಗ್ಗೆ ತರಣ್ ಸಾಗರ್ ಪೋಷಕರಿಗೆ ಕೇಳಿದರೆ ಪ್ರೇಮದ‌ ಬಗ್ಗೆ ಗೊತ್ತಿರಲಿಲ್ಲ. ಬೆಳಗ್ಗೆ ಫೋನ್‌ ಎತ್ತದೇ ಇದ್ದಾಗ ಹುಡುಕಾಟ ನಡೆಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಘಟನಾ ಸ್ಥಳಕ್ಕೆ ವಿದ್ಯಾಗಿರಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja