ತೆಲಂಗಾಣ : ಇಲ್ಲಿನ ಹೃದಯವಿದ್ರಾವಕ ಘಟನೆಯೊಂದರಲ್ಲಿ, ಅಂತರ್ಜಾತಿ ವಿವಾಹವಾಗಿದ್ದಕ್ಕೆ (Intercaste marriage) ಕುಟುಂಬದವರಿಂದ ಎದುರಾದ ತೀವ್ರ ವಿರೋಧಕ್ಕೆ ಬೇಸತ್ತು ನವದಂಪತಿಗಳು (Newly married couple) ಆತ್ಮಹತ್ಯೆ (Self harm) ಮಾಡಿಕೊಂಡಿದ್ದಾರೆ.
ಮೃತರನ್ನು ಸಿದ್ದಿಪೇಟೆ ಜಿಲ್ಲೆಯ ಅನುಮೂಲ ರಾಕೇಶ್ ರೆಡ್ಡಿ (೨೫) ಹಾಗೂ ತರಿಗೊಪ್ಪುಲ ಹರಿಕಾ (೨೨) ಎಂದು ಗುರುತಿಸಲಾಗಿದೆ. ಪರಸ್ಪರ ಪ್ರೀತಿಸುತ್ತಿದ್ದ ಇವರು, ಮನೆಯವರ ಒಪ್ಪಿಗೆ ಸಿಗದ ಕಾರಣ ಮೂರು ತಿಂಗಳ ಹಿಂದೆ ಮದುವೆಯಾಗಿ ಹೈದರಾಬಾದ್‌ನಲ್ಲಿ ನೆಲೆಸಿದ್ದರು. ಇತ್ತೀಚೆಗಷ್ಟೇ ತಮ್ಮ ಸ್ವಗ್ರಾಮಕ್ಕೆ ಮರಳಿದ್ದ ಇವರಿಗೆ, ಪತ್ನಿ ಬೇರೆ ಜಾತಿಗೆ ಸೇರಿದವಳು ಎಂಬ ಕಾರಣಕ್ಕೆ ರಾಕೇಶ್ ಅವರ ಪೋಷಕರಿಂದ ಕಿರುಕುಳ ಹಾಗೂ ತಿರಸ್ಕಾರ ಎದುರಾಗಿತ್ತು. ಇದರಿಂದ ತೀವ್ರವಾಗಿ ನೊಂದಿದ್ದ ದಂಪತಿಗಳು ತಮ್ಮ ಬದುಕನ್ನು ಕೊನೆಗಾಣಿಸಿಕೊಳ್ಳುವ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ಈ ಘಟನೆಯ ಕುರಿತು ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಪ್ರೀತಿ ಮತ್ತು ಮದುವೆಯಂತಹ ವೈಯಕ್ತಿಕ ವಿಚಾರಗಳಲ್ಲಿ ಜಾತಿಯ ಹಠಮಾರಿತನ ಹೇಗೆ ಜೀವಗಳನ್ನು ಬಲಿ ಪಡೆಯುತ್ತದೆ ಎಂಬುದಕ್ಕೆ ಘಟನೆ ಸಾಕ್ಷಿಯಾಗಿದೆ.

