Dailyhunt
CRIME : ರೈಲ್ವೆ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ: 20 ಲಕ್ಷ ಮೌಲ್ಯದ ಗಾಂಜಾ ವಶ!

CRIME : ರೈಲ್ವೆ ನಿಲ್ದಾಣದಲ್ಲಿ ಭರ್ಜರಿ ಕಾರ್ಯಾಚರಣೆ: 20 ಲಕ್ಷ ಮೌಲ್ಯದ ಗಾಂಜಾ ವಶ!

Navasamaja.com 3 weeks ago

ಳ್ಳಾರಿ: ರೈಲ್ವೆ ಪೊಲೀಸರು (Police) ನಡೆಸಿದ ಮಿಂಚಿನ ಕಾರ್ಯಾಚರಣೆಯಲ್ಲಿ ರೈಲಿನಲ್ಲಿ (Train) ಸಾಗಾಟ ಮಾಡುತ್ತಿದ್ದ ಬರೋಬ್ಬರಿ 40.49 ಕೆಜಿ ಗಾಂಜಾವನ್ನು (Ganja) ವಶಪಡಿಸಿಕೊಳ್ಳಲಾಗಿದೆ. ವಶಪಡಿಸಿಕೊಂಡ ಗಾಂಜಾದ ಒಟ್ಟು ಮೌಲ್ಯ ಸುಮಾರು 20.24 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

ವಾಸ್ಕೋ ಡ ಗಾಮ - ಶಾಲಿಮಾರ್ ಅಮರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಗಾಂಜಾ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ಈ ಮಾಹಿತಿಯ ಮೇರೆಗೆ ರೈಲ್ವೆ ಪೊಲೀಸರು ರೈಲಿನ ಮೇಲೆ ದಾಳಿ ನಡೆಸಿದರು. ತಪಾಸಣೆಯ ವೇಳೆ ರೈಲಿನ ಜನರಲ್ ಬೋಗಿಯ ಸೀಟಿನ ಕೆಳಗೆ ಪ್ಯಾಕ್ ಮಾಡಿ ಇಡಲಾಗಿದ್ದ 19 ಬಂಡಲ್ ಗಾಂಜಾ ಪತ್ತೆಯಾಗಿದೆ.

ಪೊಲೀಸರು ಬರುವ ಸುಳಿವು ಅರಿತ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದು, ಸದ್ಯ ಪೊಲೀಸರು ಗಾಂಜಾವನ್ನು ವಶಕ್ಕೆ ಪಡೆದು ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ. ತಪ್ಪಿಸಿಕೊಂಡಿರುವ ಆರೋಪಿಗಳಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.

ಇದನ್ನೂಓದಿ: ಖಾಸಗಿ ಕಾಲೇಜು ವಿದ್ಯಾರ್ಥಿ ಅನುಮಾನಾಸ್ಪದ ಸಾವು; ಕೊಲೆ ಆರೋಪ ಮಾಡಿದ ತಂದೆ!

Dailyhunt
Disclaimer: This content has not been generated, created or edited by Dailyhunt. Publisher: Navasamaja