Dailyhunt
CRIME: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಪ್ರಕರಣ, ಮೂವರ ಬಂಧನ!

CRIME: ಸಾರ್ವಜನಿಕ ಸ್ಥಳದಲ್ಲಿ ಗಾಂಜಾ ಸೇವನೆ ಪ್ರಕರಣ, ಮೂವರ ಬಂಧನ!

Navasamaja.com 2 weeks ago

ಟ್ಕಳ: ಸಾರ್ವಜನಿಕ ಸ್ಥಳಗಳಲ್ಲಿ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪದ ಮೇಲೆ ಭಟ್ಕಳ (Bhatkal) ಪೊಲೀಸರು (Police) ಎರಡು ಪ್ರತ್ಯೇಕ ಕಾರ್ಯಾಚರಣೆಗಳನ್ನು ನಡೆಸಿ ಒಟ್ಟು ಮೂವರು ವ್ಯಕ್ತಿಗಳನ್ನು ಬಂಧಿಸಿದ್ದಾರೆ.

ಭಟ್ಕಳ ಗ್ರಾಮೀಣ ಠಾಣಾ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ.

ಮೊದಲನೆಯದಾಗಿ, ಗುಳ್ಮಿ ಬೆಳೆಲಖಂಡ ನಿವಾಸಿ ಮಹಮ್ಮದ್ ಹುಸೇನ್ (56) ಎಂಬಾತ ಸಂಶಯಾಸ್ಪದವಾಗಿ ವರ್ತಿಸುತ್ತಿದ್ದಾಗ ಪೊಲೀಸರು ವಶಕ್ಕೆ ಪಡೆದಿದ್ದರು. ವೈದ್ಯಕೀಯ ಪರೀಕ್ಷೆಯ ನಂತರ ಈತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.

ಮತ್ತೊಂದು ಪ್ರಕರಣದಲ್ಲಿ, ಗಾಂಧಿನಗರದ ಶಮ್ಸ್ ಶಾಲೆಯ ಎದುರು ಗಾಂಜಾ ಸೇವಿಸುತ್ತಿದ್ದ ಆಜಾದ್ ನಗರದ ನಿವಾಸಿ ಮಲೀಕ್ ರೆಹಾನ್ (27) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಗ್ರಾಮೀಣ ಠಾಣೆಯ ಪಿಎಸ್‌ಐ ಭರಮಪ್ಪ ಬೆಳಗಲಿ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ನಗರ ಠಾಣಾ ವ್ಯಾಪ್ತಿಯಲ್ಲಿ ಯುವಕನ ಬಂಧನ

ಭಟ್ಕಳ ನಗರದ ಹಳೆಯ ಬಸ್ ನಿಲ್ದಾಣದ ಬಳಿ ಗಾಂಜಾ ಸೇವನೆ ಮಾಡಿದ ಆರೋಪದ ಮೇಲೆ ಮುಂಬೈ ಮೂಲದ ಇರ್ಫಾನ್ (28) ಎಂಬಾತನನ್ನು ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಈತ ಸ್ಥಳೀಯ ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದು, ವಸತಿ ಗೃಹದಲ್ಲಿ ತಂಗಿದ್ದ ಎಂದು ತಿಳಿದುಬಂದಿದೆ. ವೈದ್ಯಕೀಯ ವರದಿಯಲ್ಲಿ ಗಾಂಜಾ ಸೇವನೆ ದೃಢಪಟ್ಟ ಹಿನ್ನೆಲೆಯಲ್ಲಿ ಪಿಎಸ್‌ಐ ತಿಮ್ಮಪ್ಪ ಎಸ್. ಅವರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಲೋಕಾಯುಕ್ತ ಬಲೆಗೆ ಬಿದ್ದ ಭ್ರಷ್ಟ ಅಧಿಕಾರಿಗಳು!

ಯಾದಗಿರಿ: ಬಾಕಿ ಇದ್ದ ಬಿಲ್‌ ಹಣದ ಫೈ;ಲ್‌ ಅನ್ನು ಪಾಸ್‌ ಮಾಡಲು ಲಂಚಕ್ಕೆ ಬೇಡಿಕೆ ಇಟ್ಟಿದ್ದ ಶಹಾಪುರ ಭೀಮರಾಯನಗುಡಿ ಕೆಬಿಜೆನ್‌ಎಲ್‌ ಕಚೇರಿಯ ಎಇಇ ಮತ್ತು ಜೆಇ ಯಾದಗಿರಿ ಜಿಲ್ಲಾ ಲೋಕಾಯುಕ್ತ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಫೋನ್‌ ಪೇ ಮೂಲಕ ಹಣ ಪಡೆದಿದ್ದ ಆರೋಪಿಗಳು
ಮಾಹಿತಿಗಳ ಪ್ರಕಾರ, ವಡೇರಾ ತಾಲೂಕಿನ ಗದ್ದೆಸೂಗೂರು ಗ್ರಾಮದ ಕಾಸಿಂಸಾಬ್‌ ಜಲಾಲ್‌ ಅವರು ನೀಡಿದ ದೂರಿನ ಅಡಿಯಲ್ಲಿ ಲೋಕಾಯುಕ್ತ ಪಿಎಸ್‌ಐ ಶೋಧ ಮಾಡಿದ್ದು, ಫೋನ್‌ ಪೇ ಮೂಲಕ ಹಣ ಪಡೆದಿರುವುದನ್ನ ಪತ್ತೆ ಮಾಡಿದ್ದಾರೆ.

35000 ಹಣ ಪಡೆದಿರುವುದು ಪತ್ತೆ
ಭೀಮರಾಯನಗುಡಿಯ ಕೆಬಿಜೆಎನ್‌ಎಲ್‌ ಎಇಇ ಮಧುಸೂಧನ್‌ ಹಾಗೂ ಜೆಇ ಮಂಜುನಾಥ್‌ ಅವರು ಬಿಲ್‌ ಫೈಲ್‌ ಪಾಸ್‌ ಮಾಡಲು ಲಂಚ ಕೇಳಿದ್ದರು. ಸುಮಾರು 35000 ಹಣವನ್ನ ಪಡೆದುಕೊಂಡಿದ್ದು, ಫೋನ್‌ ಪೇ ಮೂಲಕ ಹಾಕಿಕೊಂಡಿದ್ದಾರೆ. ಲೋಕಾಯುಕ್ತ ಡಿವೈಎಸ್ಪಿ ಜೆ ಹೆಚ್‌ ಇನಾಮದಾರ್‌, ಪಿಐ ಸಿದ್ರಾಮ ಬಲರೂಗಿ ಹಾಗೂ ಲೋಕಾಯುಕ್ತ ಸಿಬ್ಬಂದಿಗಳು ಎಸ್ಪಿ ಮಾರ್ಗದರ್ಶನದಲ್ಲಿ ಈ ಕಾರ್ಯಚರಣೆ ಮಾಡಿದ್ದಾರೆ.

ಇದನ್ನೂಓದಿ: ಪತಿಯ ಅಕ್ರಮ ಸಂಬಂಧದ ಗಲಾಟೆ, ಪತ್ನಿಯನ್ನು ತುಳಿದು ಕೊಂ*ದ ಕೀಚಕ!

Dailyhunt
Disclaimer: This content has not been generated, created or edited by Dailyhunt. Publisher: Navasamaja