Dailyhunt
CRUDE OIL : ಭಾರತಕ್ಕೆ ಬರಬೇಕಿದ್ದ ತೈಲ ನೌಕೆ ದಿಢೀರ್ ಚೀನಾ ಕಡೆಗೆ ಪ್ರಯಾಣ

CRUDE OIL : ಭಾರತಕ್ಕೆ ಬರಬೇಕಿದ್ದ ತೈಲ ನೌಕೆ ದಿಢೀರ್ ಚೀನಾ ಕಡೆಗೆ ಪ್ರಯಾಣ

Navasamaja.com 3 weeks ago

ವದೆಹಲಿ: ಇರಾನ್‌ನಿಂದ ಕಚ್ಚಾ ತೈಲವನ್ನು (Crude oil) ಹೊತ್ತು ತರುತ್ತಿದ್ದ ಬೃಹತ್ ಹಡಗೊಂದು (Ship) ಭಾರತಕ್ಕೆ (India) ಬರುವ ಹಾದಿಯಲ್ಲೇ ತನ್ನ ದಿಕ್ಕನ್ನು ಬದಲಿಸಿ ಚೀನಾದತ್ತ (China) ಸಾಗಿರುವ ವಿಚಾರ ಬೆಳಕಿಗೆ ಬಂದಿದೆ. 'ಪಿಂಗ್ ಶುನ್' ಹೆಸರಿನ ಈ ಅಫ್ರಾಮ್ಯಾಕ್ಸ್ ಟ್ಯಾಂಕರ್, ದಕ್ಷಿಣ ಆಫ್ರಿಕಾದ ಈಸ್ವತಿನಿ ದೇಶದ ಧ್ವಜದೊಂದಿಗೆ ಪ್ರಯಾಣಿಸುತ್ತಿತ್ತು.

ಆರಂಭಿಕ ಮಾಹಿತಿಯಂತೆ ಈ ನೌಕೆಯು ಗುಜರಾತ್‌ನ ವಾಡಿನಾರ್ ಬಂದರನ್ನು ತಲುಪಬೇಕಿತ್ತು.

ಆದರೆ, ಇತ್ತೀಚಿನ ಹಡಗು ಟ್ರ್ಯಾಕಿಂಗ್ ಅಂಕಿಅಂಶಗಳ ಪ್ರಕಾರ, ಈ ಹಡಗು ಭಾರತದ ಗಡಿ ಪ್ರವೇಶಿಸುವ ಬದಲಿಗೆ ಚೀನಾದತ್ತ ಮುಖ ಮಾಡಿದೆ.ಅಂತರರಾಷ್ಟ್ರೀಯ ಹಡಗು ಸಂಚಾರ ನಿಯಮಗಳ ಪ್ರಕಾರ ಕೆಲವು ತಾಂತ್ರಿಕ ದಾಖಲೆಗಳ ಪಾಲನೆ ಕಡ್ಡಾಯವಾಗಿರುತ್ತದೆ. ಈ ಹಡಗಿನ ಮಾರ್ಗ ಬದಲಾವಣೆಗೆ ಪ್ರಮುಖವಾಗಿ ವಿಮೆ, ತೈಲದ ಬೆಲೆ ನಿಗದಿ ಹಾಗೂ ಕಾರ್ಯಾಚರಣೆಗೆ ಸಂಬಂಧಿಸಿದ ಅಧಿಕೃತ ದಾಖಲೆಗಳಲ್ಲಿ ಕಂಡುಬಂದ ಲೋಪದೋಷಗಳೇ ಕಾರಣ ಎಂದು ಹೇಳಲಾಗುತ್ತಿದೆ.

ಈ ಟ್ಯಾಂಕರ್ ಅಂತರರಾಷ್ಟ್ರೀಯ ಬಂದರುಗಳಲ್ಲಿ ಸಲ್ಲಿಸಬೇಕಾದ ಅಗತ್ಯ ದಾಖಲೆಗಳನ್ನು ಪೂರ್ಣಗೊಳಿಸುವಲ್ಲಿ ವಿಫಲವಾಗಿದೆ. ಬೆಲೆ ಮತ್ತು ವಿಮೆಗೆ ಸಂಬಂಧಿಸಿದ ಕಾಗದಪತ್ರಗಳಲ್ಲಿನ ಅಸ್ಪಷ್ಟತೆಯಿಂದಾಗಿ ತಾಂತ್ರಿಕ ಸಮಸ್ಯೆಗಳು ಎದುರಾಗಿದ್ದು, ಇದೇ ಕಾರಣಕ್ಕಾಗಿ ಅಂತಿಮ ಕ್ಷಣದಲ್ಲಿ ಹಡಗು ಭಾರತದ ಬದಲಿಗೆ ಚೀನಾದತ್ತ ಪ್ರಯಾಣ ಬೆಳೆಸಿದೆ ಎಂದು ಮೂಲಗಳು ತಿಳಿಸಿವೆ.

Dailyhunt
Disclaimer: This content has not been generated, created or edited by Dailyhunt. Publisher: Navasamaja